ಮಾಜಿ ಡಿಸಿಎಮ್ ಸವದಿ ಡಿಕೆಶಿ ಸಂಪರ್ಕದಲ್ಲಿದ್ದಾರೆ-ಲಖನ್ ಜಾರಕಿಹೊಳಿ.!
ಗೋಕಾಕ: ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಶಕ್ತಿಯನ್ನು ಬಿಜೆಪಿ ಬಳಸಿಕೊಂಡು ಬಿಜೆಪಿ ೨೦೨೩ರ ಸಾರ್ವತ್ರಿಕ ಚುನಾವಣೆಯ ತಯಾರಿ ಮಾಡಬೇಕು ಎಂದು ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಅವರು, ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಮೇಶ ಹಾಗೂ ಬಾಲಚಂದ್ರರಿಗೆ ೧೬ ಅಲ್ಲ ೨೦ ಶಾಸಕರನ್ನು ಬಿಜೆಪಿಗೆ ಕರೆತರುವ ಶಕ್ತಿಯಿದೆ. ಸಿದ್ಧರಾಮಯ್ಯ ಕಾಂಗ್ರೇಸ್ ಅಹ್ವಾನದ ಕುರಿತು ಮಾತನಾಡಿದ ಲಖನ್ ಸಿದ್ಧರಾಮಯ್ಯ ನಮ್ಮ ಗುರುಗಳು ಅವರ ಮೇಲೆ ಅಪಾರ ಗೌರವಿದೆ. ಅವರ ಅಹ್ವಾನದ ಬಗ್ಗೆ ಯೋಚಿಸುತ್ತೆನೆ. ಕಾಂಗ್ರೇಸ್ ಪಕ್ಷದಲ್ಲಿ ಸಿದ್ಧರಾಮಯ್ಯ ಒಬ್ಬರೆ ನಾಯಕ, ಉಳಿದವರು ಸ್ವಯಂ ಘೋಷಿತ ನಾಯಕರು ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ಡಿಕೆಶಿ ಸಂಪರ್ಕದಲ್ಲಿ ಸವದಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಸವದಿ, ಡಿಕೆಶಿ ಮಾತನಾಡಿದ ಮೊಬೈಲ್ ನಂಬರ್ ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಲಕ್ಷ್ಮಣ ಸವದಿ ಬೇರೆ ನಂಬರ್ನಿAದ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸೋತ ನಾಯಕರೇ ಡಿಕೆಶಿ ಜತೆ ಸಂಪರ್ಕದಲ್ಲಿರುವವರು ಎಂದು ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೇಸ್ ನಾಯಕರು ಸೇರಿ ವಿಧಾನ ಪರಿಷತನಲ್ಲಿ ಕವಟಗಿಮಠ ಸೊಲಿಸಿದ್ದಾರೆ. ಮತ್ತೆ ಅವರೇ ಪ್ರತ್ಯೇಕ ಸಭೆ ಮಾಡಿದ್ದಾರೆ. ಸೊಲಲು ಕಾರಣರಾದವರಿಗೆ ಉನ್ನತ ಹುದ್ದೆ ನೀಡಲಾಗುತ್ತಿದೆ. ಬಿಜೆಪಿ ಸೋಲಿಗೆ ಅಥಣಿ ನಾಯಕನೇ ಕಾರಣ ಎಂದು ಮಾಜಿ ಡಿಸಿಎಮ್ ಲಕ್ಷಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.
ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ನನ್ನ ಪರವಾಗಿ ಪರಿಷತ ಚುನಾವಣೆಯಲ್ಲಿ ಕೆಲಸ ಮಾಡಿದ್ದಲ್ಲಿ ಮೊದಲಸುತ್ತಿನಲ್ಲೆ ಗೆಲ್ಲುತ್ತಿದ್ದೆ. ೧೧ಜನ ಶಾಸಕರು ಇಬ್ಬರು ಸಂಸದರು ಸಚಿವರಿದ್ದರು ಆದರೂ ಬಿಜೆಪಿ ಅಭ್ಯರ್ಥಿ ಸೋಲಾಯಿತು. ಈ ಬಗ್ಗೆ ಹೈಕಮಾಂಡ ಚಿಂತನೆ ಮಾಡಬೇಕು. ಪಕ್ಷ ವಿರೋಧಿ ಚಟುವಟಿಕೆ ಮೇಲೆ ಕಣ್ಣು ಇಡಬೇಕು. ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಲು ಸಾಧ್ಯವಿಲ್ಲ. ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದರೆ ಬೆಳಗಾವಿ ಜಿಲ್ಲೆಗೆ ಒಳ್ಳೆಯದು ಎಂದು ಲಖನ್ ಹೇಳಿದರು.