ಹಿಂದು ಬಾಂಧವರು ಸಂಘಟಿತರಾಗಿ ದೇಶವನ್ನು ಬಲಿಷ್ಠಗೊಳಿಸಿ-ಶಿವಾನಂದಜಿ ಬಡಿಗೇರ.!
ಗೋಕಾಕ: ಹಬ್ಬ ಹರಿದಿನಗಳನ್ನು ಹೆಚ್ಚು ಹೆಚ್ಚು ಆಚರಣೆ ಮಾಡುವ ಮೂಲಕ ಹಿಂದು ಬಾಂಧವರು ಸಂಘಟಿತರಾಗಿ ದೇಶವನ್ನು ಬಲಿಷ್ಠಗೊಳಿಸುವಂತೆ ಹಿಂದು ಜಾಗರಣ ವೇದಿಕೆಯ ರಾಜ್ಯ ಪ್ರಚಾರಕ ಶಿವಾನಂದಜಿ ಬಡಿಗೇರ ಹೇಳಿದರು.
ಅವರು, ರವಿವಾರದಂದು ಸಂಜೆ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆಯವರು ಹಮ್ಮಿಕೊಂಡ ಬೃಹತ್ ಹಲಿಗೆ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮುಖ್ಯತಿಥಿಗಳಾಗಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿಯೇ ಅತಿಹೆಚ್ಚು ಯುವಶಕ್ತಿಯನ್ನು ನಮ್ಮ ದೇಶ ಹೊಂದಿದೆ. ಯುವ ಸಮೂಹ ವ್ಯಸನ ಮುಕ್ತರಾಗಿ ದೇಶವನ್ನು ಬಲಿಷ್ಠಗೊಳಿಸಲು ಶ್ರಮಿಸಬೇಕು. ಶ್ರೇಷ್ಠ ಸಂಸ್ಕೃತಿಯಿAದ ದೇಶ ಪಾಶ್ಚಾತ್ಯರ ದಾಳಿಗೆ ಬಗ್ಗದೇ ಬಲಿಷ್ಠವಾಗಿಯೇ ಉಳಿದಿದೆ. ಇಂತಹ ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪಿಳಿಗೆಗೆ ನೀಡಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಜಗತ್ತಿನಲ್ಲಿ ಹಿಂದುಗಳಿಗೆ ಇರುವದು ಭಾರತ ಒಂದೇ ರಾಷ್ಟç. ಪಾಶ್ಚಾತ್ಯ ಸಂಸ್ಕೃತಿಯಿAದ ಇಂದು ಯುವಪಿಳಿಗೆ ಹಾದಿ ತಪ್ಪುತ್ತಿದ್ದು. ಅವರು ಜಾಗೃತರಾಗಿ ದೇಶಾಭಿಮಾನಿಗಳಾಗಿ ದೇಶದ ರಕ್ಷಣೆಗೆ ಮುಂದಾಗಬೇಕು. ಬದುಕುವ ಸಾಮರ್ಥ್ಯವನ್ನು ಜಗತ್ತಿಗೆ ಕಲಿಸುವ ಶಕ್ತಿ ನಮ್ಮ ದೇಶಕ್ಕಿದೆ. ಜಗತ್ತೇ ನಮ್ಮತ್ತ ನೋಡುತ್ತಿದ್ದು, ವಿವಿಧೆತೆಯಲ್ಲಿ ಏಕತೆ ಕಾಣುವ ಈ ದೇಶದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಬದುಕುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ತವಗದ ಶ್ರೀ ಸಿದ್ಧಲಿಂಗಯ್ಯ ಸ್ವಾಮಿಜಿ, ಹೂಲಿಕಟ್ಟಿಯ ಶ್ರೀ ಬಸವಾನಂದ ಸ್ವಾಮಿಜಿ, ಕಪರಟ್ಟಿಯ ಬಸವರಾಜ ಹಿರೇಮಠ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಆರ್‌ಎಸ್‌ಎಸ್ ಪ್ರಮುಖ ಎಮ್ ಡಿ ಚುನಮರಿ, ಹಿಂದುಪರ ಸಂಘಟನೆಗಳ ಮುಖಂಡರಾದ ಸಮರ್ಥ ಕಾಸ್ನಿಸ್, ಪರಶು ಲಿಗಾಡೆ, ರಾಮಚಂದ್ರ ಕಾಕಡೆ ಸೇರಿದಂತೆ ಅನೇಕರು ಇದ್ದರು.