ಕೊಣ್ಣುರು ಪುರಸಭೆ ೨೦೨೨-೨೩ನೇ ಸಾಲಿನ ೧.೪೦ ಲಕ್ಷ ಉಳಿತಾಯ ಕರಡು ಆಯವ್ಯವ ಮಂಡಿಸಿದ ಎಸ್.ಎಮ್. ಹಿರೇಮಠ.!
ಗೋಕಾಕ: ಕೊಣ್ಣೂರ ಪುರಸಭಾ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ಮಂಗಲ ತೇಲಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯಾಧಿಕಾರಿ ಎಸ್.ಎಮ್. ಹಿರೇಮಠ ಅವರ ಸಮ್ಮುಖದಲ್ಲಿ ಸನ್ ೨೦೨೨-೨೩ ನೇ ಸಾಲಿನ ೧.೦೪ ಲಕ್ಷ ರೂಗಳ ಉಳಿತಾಯದ ಕರಡು ಆಯವ್ಯಯವನ್ನು ಮಂಡಿಸಲಾಯಿತು.
ಲೇಖಪಾಲಕ ಬಿ.ಎಸ್.ದೊಡ್ಡಗೌಡರ ಇವರು ಒಟ್ಟು ರೂ.೧೨.೩೨ ಆಯ ಮತ್ತು ರೂ.೧೨.೩೧ ಕೋಟಿ ವ್ಯಯವುಳ್ಳ ಒಟ್ಟು ರೂ.೧.೦೪ ಲಕ್ಷಗಳ ಉಳಿತಾಯದ ಅಂದಾಜು ಪತ್ರಿಕೆಯನ್ನು ಮಂಡಿಸಿದರು. ಸನ್ ೨೦೨೨-೨೩ ನೇ ಸಾಲಿನ ಆಯವ್ಯಯಕ್ಕೆ ಮಂಜೂರಿ ನೀಡಿಲಾಯಿತು.
ಆಯವ್ಯಯದಲ್ಲಿ ಎಸ್.ಎಫ್.ಸಿ ಮತ್ತು ಸ್ಥಳೀಯ ನಿಧಿಯಡಿ ಶೇ ೨೪.೧೦ ರಡಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ರೂ.೧೯.೩೨ ಲಕ್ಷ ಕಾಯ್ದಿರಿಸಿದ್ದು, ಶೇ. ೭.೨೫ ರಡಿ (ಇತರೆ ಹಿಂದೂಳಿದ ವರ್ಗಗಳ ಬಡತನ ನಿರ್ಮೂಲನೆ) ಕಾರ್ಯಕ್ರಮಕ್ಕಾಗಿ ರೂ.೪.೯೪ ಲಕ್ಷ ಹಾಗೂ ಶೇ,೫ ರಡಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ.೩.೪೧ ಲಕ್ಷಗಳ ಅನುದಾನವನ್ನು ಕಾಯ್ದಿರಿಸಿ ಕೊಣ್ಣೂರ ಪುರಸಭೆಯ ವ್ಯಾಪ್ತಿಯಯಲ್ಲಿ ಅಭಿವೃದ್ಧಿ ಕಾರ್ಯಗಳಾದ ರಸ್ತೆ, ಚರಂಡಿಗೆ ರೂ,೮.೮೯ ಕೋಟಿ, ನೀರು ಸರಬರಾಜು ನಿರ್ವಹಣೆಗೆ ರೂ,೭೧.೬೦ ಲಕ್ಷ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಹಾಗೂ ನಿರ್ವಹಣೆ ಸಲುವಾಗಿ ರೂ,೧.೦೦ ಕೋಟಿ ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ,೩೭.೬೦ ಲಕ್ಷ ಬೀದಿ ದೀಪದ ನಿರ್ವಹಣೆಗೆ ರೂ,೭೦.೮೦ ಲಕ್ಷ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಕ್ಕಾಗಿ ೫ ಲಕ್ಷ ರೂಗಳು, ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಗೆ ೯೦.೪೦ಲಕ್ಷಗಳನ್ನು ಕಾಯ್ದಿರಿಸಿ ಪುರಸಭೆಯ ಸರ್ವಾಂಗಿಣ ಅಭಿವೃದ್ಧಿಗೊಳಿಸಲು ಅಧ್ಯಕ್ಷರು ಪುರಸಭೆಯ ಸನ್ ೨೦೨೧-೨೨ ನೇ ಸಾಲಿನ ಅಂದಾಜು ಆಯ-ವ್ಯಯ ಪತ್ರಿಕೆಗೆ ಮಂಜೂರಾತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಭೂತಪ್ಪಾ. ಹುಕ್ಕೇರಿ, ಚೇರಮನ್ ಸಾವಂತ ತಳವಾರ, ಸದಸ್ಯರಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ರುಕ್ಷಾದಅಹ್ಮದ ಕಡಲಗಿ, ಯಲ್ಲಪ್ಪಾ ಗಾಡಿವಡ್ಡರ, ಇಮ್ರಾನ ಜಮಾದಾರ, ಶಾಂತವ್ವಾ ಗುಡ್ಡಾಕಾಯು, ಶಾಯಿರಾಬಾನು ಜಮಾದಾರ, ಕುಮಾರ ಕೊಣ್ಣೂರ, ಮಾರುತಿ ಪೂಜೇರಿ, ರಜಿಯಾಬೇಗಂ ಹೊರಕೇರಿ, ಶಿವಕ್ಕ ಮೇಗೇರಿ, ರಾಮಲಿಂಗ ಮಗದುಮ್ಮ, ಯಲ್ಲವ್ವ ನಾಯಿಕ, ಅಸೋದೆ. ಭಗವಂತ, ಅಶೋಕ ಕುಮಾರನಾಯಕ, ಒಲಿಂದಾ ಪೌಲ್, ಶೋಭಾ ಮೊಕಾಶಿ, ಮೇಘಾ ಪವಾರ, ರಜಿಯಾಸುಲ್ತಾನ ನದಾಫ, ಭಾರತಿ ಕೊಳ್ಳಾನಟ್ಟಿ ಮತ್ತು ಸಿಬ್ಬಂದಿಯವರು ಇದ್ದರು.