Breaking News

ಗುರುವಿನ ಆಶೀರ್ವಾದದಿಂದ ಅಮೃತಜೀವನ ಸಾಧ್ಯ– ಮುರುಗೋಡ ನೀಲಕಂಠ ಶ್ರೀ

Spread the love

ಗುರುವಿನ ಆಶೀರ್ವಾದದಿಂದ ಅಮೃತಜೀವನ ಸಾಧ್ಯ– ಮುರುಗೋಡ ನೀಲಕಂಠ ಶ್ರೀ


ಗೋಕಾಕ: ಮಠ-ಮಾನ್ಯಗಳು, ಜಾತ್ರೆಗಳಲ್ಲಿ ಭಾಗವಹಿಸುವುದರಿಂದ ನಾಡಿನ ಅನೇಕ ಮಠಾಧೀಶರ ಆಶೀರ್ವಾದ ಸಿಗುತ್ತದೆ ಇದರಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಮುರಗೋಡದ ಮಹಾಂತ ದುರುದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು ಆಶೀರ್ವದಿಸಿದರು.
ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದೇಶ್ವರ ಜಾತ್ರ ಮಹೋತ್ಸವದ ಕುಂದರನಾಡೋತ್ಸವ-೨೦೨೨ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಗೋಕಾಕ: ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಅಡವಿಸಿದ್ದೇಶ್ವರರ ಗದ್ದುಗೆಗೆ ವೇ.ಮೂ ವಿಜಯ ಚರಲಿಂಗಮಠ, ದುರುದುಂಡೇಶ್ವರ ಶಾಸ್ತಿçಗಳು ಹಾಗೂ ಗುರುಪಾದ ಶಾಸ್ತಿçÃಗಳು ಅವರ ತಂಡ ಹೂವಿನ ಅಲಂಕಾರ ಮಾಡಿರುವುದು.
ಮಠಗಳಿಗೆ ಆಸ್ತಿ-ಅಂತಸ್ತು ಮುಖ್ಯವಲ್ಲ ಭಕ್ತರೇ ಮಠಗಳ ಆಸ್ತಿ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಗುರುವಿನ ಆಶೀರ್ವಾದ ಮುಖ್ಯ. ಅದರಂತೆ ಎಲ್ಲ ಮಠಾಧೀಶರ ಆಶೀರ್ವಾದ ಸಿಗಬೇಕು ಎಂಬ ಉದ್ದೇಶದಿಂದ ಅಮರಸಿದ್ದೇಶ್ವರ ಶ್ರೀಗಳು ನಾಡಿನ ಅನೇಕ ಪೂಜ್ಯರನ್ನು ಜಾತ್ರೆಗೆ ಆಹ್ವಾನಿಸಿ ಆಶೀರ್ವದಿಸುತ್ತಾರೆ. ದೈನಂದಿನ ಕೆಲಸದ ಒತ್ತಡದ ನಡುವೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿಯ ಬದುಕು ಸಾಧ್ಯ ಎಂದರು.
ಚ.ಕಿತ್ತೂರು ರಾಜಗುರು ಸಂಸ್ಥಾನಮಠದ ಮಡಿವಾಳ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಅಮರಶ್ರೀಗಳು ನಾಡಿನ ವಿವಿಧೆÀಡೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸಿ ಕುಂದರನಾಡಿನ ಪ್ರಶಸ್ತಿ ನೀಡಿ ಸನ್ಮಾನಿಸುವುದರ ಮೂಲಕ ಅವರ ಕಾರ್ಯಕ್ಕೆ ಮತ್ತಷ್ಟುಪ್ರೋತ್ಸಾಹ ನೀಡುವಕಾರ್ಯ ಮಾಡುತ್ತಿರುವುದು ಶ್ಲಾಘನೀಯ, ಈ ಮೂಲಕ ಕುಂದರನಾಡಿನ ಕೀರ್ತಿಯನ್ನು ನಾಡಿಗೆ ತಲುಪಿಸುತ್ತಿದ್ದಾರೆಎಂದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾಜಿ ವಿಧಾನಪರಿಷತ್ ಸದಸ್ಯರಾದ ಮಹಾಂತೇಶಕವಟಗಿಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆ ಸಮಾಜ ಸೇವೆ ಸಲ್ಲಿಸುತ್ತಿರುವ ದಿ.ಡಾ.ಸಂತೋಷ ಮುತ್ನಾಳ, ಕು.ಅಕ್ಕ ಅನು, ವೀರೇಶ ಹಿರೇಮಠ, ಜನನಿ ವತ್ಸಲ ಅವರಿಗೆ ಕುಂದರನಾಡೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಮತೇನಟ್ಟಿಯ ಗುರುದೇವದೇವರು ನಿರೂಪಣೆ ಮಾಡಿದರು.
ಮುನವಳ್ಳಿ ಸೋಮಶೇಖರಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹೊಸಹಳ್ಳಿ ಅಭಿನವ ಬೂದಿಶ್ವರ ಸಂಸ್ಥಾನಮಠದ ಬೂದೀಶ್ವರ ಮಹಾಸ್ವಾಮಿಗಳು, ರಾಯಚೂರು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಮಠದ ಮಹಾಂತ ಮಹಾಸ್ವಾಮಿಗಳು, ಯಳಸೂರು ಚನ್ನಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅರಳಿಕಟ್ಟಿಯ ವಿರಕ್ತಮಠದ ಶಿವಮೂರ್ತಿ ದೇವರು, ತಾರೀಹಾಳದ ಅಡವೀಶದೇವರು, ಬಸವರಾಜಸ್ವಾಮಿಗಳು ಕಪ್ಪಾರಹಟ್ಟಿ, ವಿಶ್ವನಾಥದೇವರು, ರೇಣುಕದೇವರು, ಶಿವಶರಣ ದೇವರು, ಚರಮೂರ್ತಿದೇವರು, ಚನ್ನವೀರದೇವರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

one × two =