ಅಂಬೇಡ್ಕರ್ ದಿನ-ದಲಿತರ, ಬಡವರ ಹಾಗೂ ಹಿಂದುಳಿದ ವರ್ಗಗಳ ಶಕ್ತಿಯಾಗಿದ್ದರು- ಅಂಬಿರಾವ ಪಾಟೀಲ.!
ಗೋಕಾಕ: ಡಾ. ಬಿ ಆರ್ ಅಂಬೇಡ್ಕರ್ ಅವರು ದಿನ-ದಲಿತರ, ಬಡವರ ಹಾಗೂ ಹಿಂದುಳಿದ ವರ್ಗಗಳ ಶಕ್ತಿಯಾಗಿದ್ದರು, ಅಂಬೇಡ್ಕರ ವಿಚಾರಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಅವರು, ಗುರುವಾರದಂದು ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ನಗರದಲ್ಲಿ ನೂತನ ಡಾ. ಬಾಬಾಸಾಹೇಬ ಅಂಬೇಡ್ಕರ್ ಭವ್ಯ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಜಾತಿ-ಧರ್ಮದ ಭೇದವಿಲ್ಲದೆ ದೇಶದ ಎಲ್ಲ ವರ್ಗಗಳ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದ ಕೀರ್ತಿ ಡಾ. ಬಿ ಆರ್ ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ಅಂಬೇಡ್ಕರರು ರಚಿಸಿದ ಸಂವಿಧಾನ ದೇಶದ ಶ್ರೇಷ್ಠ ಗ್ರಂಥವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಹೊಂದಿದ ಪೋಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ ಹಾಗೂ ಕಾರ್ಮಿಕ ಕೆಂಪಣ್ಣ ಕೇಳಗೇರಿ ಅವರನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಸನ್ಮಾನಿಸಿದರು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸ್ಥಳೀಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೊಣ್ಣೂರು ಪುರಸಭೆ ಅಧ್ಯಕ್ಷೆ ಮಂಗಲಾ ತೇಲಿ, ಸದಸ್ಯರಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ಅಟಲ್ ಕಡಲಗಿ, ಕುಮಾರ ಕೊಣ್ಣೂರ, ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮೇಗೆರಿ, ಪಟ್ಟಣದ ಹಿರಿಯರಾದ ಕಾಡಣ್ಣ ಹುಕ್ಕೇರಿ, ಇಮ್ತಿಯಾಜ ಪೀರಜಾದೆ, ಅಶೋಕ ಕೊಳಿ, ಮಾರುತಿ ಪೂಜೇರಿ, ಕಾಡಣ್ಣ ಶಿಂಧಿಹಟ್ಟಿ, ಮಾರುತಿ ತಳಕಟ್ನಾಳ, ಸಚೀನ ಸಮಯ, ಶೇಖರ ಕೊಣ್ಣೂರ, ವಿಠ್ಠಲ ಗುಡಜ, ಸದಾನಂದ ಶಿಂಗ್ಯಾಗೋಳ, ವೆಂಕಟೇಶ ತೆಳಗೇರಿ, ಸುರೇಶ ನಡಗೇರಿ, ಧನ್ಯಕುಮಾರ ಮೇಗೇರಿ, ಸುರೇಶ ಹೊನ್ನಕುಪ್ಪಿ, ಮಹಾನಿಂಗ ಗುಡಜ ಸೇರಿದಂತೆ ಗ್ರಾಮಸ್ಥರು ಇದ್ದರು.
ಶಿಕ್ಷಕರಾದ ಸಂಜು ಮೆಳವಂಕಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.