ಬಸ್ಸು ಸೌಕರ್ಯ ನೀಡುವಂತೆ ಆಗ್ರಹಿಸಿ ಯಾದವಾಡ ಗ್ರಾಮಸ್ಥರಿಂದ ಮನವಿ.!

ಗೋಕಾಕ: ಗೋಕಾಕ ಕೆಎಸ್‌ಆರ್‌ಟಿಸಿ ಡಿಪೋದಿಂದ ಯಾದವಾಡ ಗ್ರಾಮಕ್ಕೆ ಸಾಯಂಕಾಲ ಬಸ್ಸು ಸೌಕರ್ಯ ನೀಡುವಂತೆ ಆಗ್ರಹಿಸಿ ಸ್ಥಳೀಯರು ರವಿವಾರದಂದು ಗೋಕಾಕ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದರು.
ದಿನನಿತ್ಯ ಯಾದವಾಡ ಸೇರಿದಂತೆ ಹಲವು ಗ್ರಾಮಗಳಿಂದ ಶಾಲೆ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ನೌಕರರು ಸಂಜೆ ಯಾದವಾಡ ಗ್ರಾಮಕ್ಕೆ ತೆರಳಲು ಬಸ್ಸಿನ ಸೌಕರ್ಯ ಇರುವದಿಲ್ಲ. ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಗೋಕಾಕ ಕೆಎಸ್‌ಆರ್‌ಟಿಸಿ ಡಿಪೋದಿಂದ ಯಾದವಾಡ ಗ್ರಾಮಕ್ಕೆ ಸಾಯಂಕಾಲ ೪.೩೦ ರಿಂದ ೫ ಗಂಟೆಯವರೆಗೆ ಸರಿಯಾದ ಬಸ್ಸಿನ ಸೌಕರ್ಯ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ನೌಕರರು ಸೇರಿದಂತೆ ಯಾದವಾಡಿ ಗ್ರಾಮಸ್ಥರು ಇತರರು ಇದ್ದರು.
YuvaBharataha Latest Kannada News