Breaking News

ಮನೆಗಳ್ಳನ ಹೆಡೆಮೂರಿಕಟ್ಟಿದ ಸಿಪಿಐ ಗೋಪಾಲ ರಾಠೋಡ ಟೀಮ್.!

Spread the love

ಮನೆಗಳ್ಳನ ಹೆಡೆಮೂರಿಕಟ್ಟಿದ ಸಿಪಿಐ ಗೋಪಾಲ ರಾಠೋಡ ಟೀಮ್.!

ಗೋಕಾಕ: ಕಳೆದ ಕೆಲ ತಿಂಗಳ ಹಿಂದೆ ಮನೆಗಳ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬ0ಧಿಸಿದ0ತೆ ಸ್ಥಳೀಯ ಸಿಪಿಐ ಗೋಪಾಲ ರಾಠೋಡ ನೇತ್ರತ್ವದ ತಂಡ ಓರ್ವ ಕಳ್ಳನನ್ನು ಬಂಧಿಸಲು ಯಶಸ್ವಿಯಾಗಿದ್ದು, ಇನ್ನೊರ್ವ ಆರೋಪಿತನಿಗಾಗಿ ಜಾಲ ಬೀಸಿದ್ದಾರೆ.
ಕಳೆದ ಮಾರ್ಚ ತಿಂಗಳಲ್ಲಿ ಲಕ್ಷಿö್ಮÃ ಬಡಾವಣೆ ಮತ್ತು ತಿಂಗಳಲ್ಲಿ ಆಶ್ರಯ ಬಡಾವಣೆಯ ಪ್ರತ್ಯೇಕ ಒಂದೊ0ದು ಮನೆ ಹಾಗೂ ಜೂನ್ ತಿಂಗಳಲ್ಲಿ ವಿದ್ಯಾ ನಗರದ ಒಂದು ಮನೆಯಲ್ಲಿ ಬಂಗಾರ ಮತ್ತು ಬೆಳ್ಳಿ ಆಭರಣ ದೋಚಿರುವ ಆರೋಪಿ ನಗರದ ಜೆ.ಆರ್.ಬಿ.ಸಿ ಕಾಲೋನಿಯಲ್ಲಿ ಸಂಶಯಾಸ್ಫದವಾಗಿ ತಿರುಗಾಟ ನಡೆಸಿದ್ದ ಸಮಯದಲ್ಲಿ ವಶಕ್ಕೆ ಪಡೆದ ಪೋಲಿಸರು ವಿಚಾರಣೆಗೆ ಒಳಪಡಿಸಿದಾಗ ಆರೋಪಿತ ಮತ್ತು ಇನ್ನೋರ್ವ ಸೇರಿ ಮನೆಗಳ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಬಂಧಿತನಿAದ ಕೊರಳಲ್ಲಿಯ ಚೈನ್, ಉಂಗುರ, ಓಲೆ ಸೇರಿ ೪೪ಗ್ರಾಂ ತೂಕದ ಬಂಗಾರದ ಆಭರಣ ಮತ್ತು ೧ಕೆಜಿ ಗೂ ಅಧಿಕ ತೂಕದ ಲಕ್ಷಿö್ಮÃ ದೇವಿಯ ಮೂರ್ತಿ, ದೀಪದ ಸಾಮಗ್ರಿ, ಲೋಟ, ಪೂಜಾ ಸಾಮಾಗ್ರಿಗಳು ಸೇರಿ ಒಟ್ಟು ೩ಲಕ್ಷ ೫೦ಸಾವಿರ ಮೌಲ್ಯದ ವಸ್ತುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಡಿ.ವೈ.ಎಸ್.ಪಿ ಮನೋಜಕುಮಾರ ಮಾರ್ಗದರ್ಶನದಲ್ಲಿ ಸಿಪಿಐ ಗೋಪಾಲ ರಾಠೋಡ ನೇತ್ರತ್ವದಲ್ಲಿ ಪಿಎಸ್‌ಐ ಎಮ್ ಡಿ ಘೋರಿ, ಸಿಬ್ಬಂಧಿಗಳಾದ ಬಿ ವಿ ನೇರಲೆ, ಸುರೇಶ ಈರಗಾರಮ ಮಲ್ಲಪ್ಪ ಗಿಡ್ಡಗೊಳ, ಸಚೀನ ಹೊಲೆಪ್ಪಗೋಳ, ವಿಠ್ಠಲ ನಾಯಕ, ರಮೇಶ ಮುರನಾಳೆ, ಪ್ರವೀಣ ಹೆಬ್ಬಾರ ಕಾರ್ಯಾಚರಣೆಯಲ್ಲಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿAದ ಮನೆಗಳ ಕಳ್ಳತನದಿಂದ ಬೇಸತ್ತಿದ್ದ ಜನತೆಗೆ ಸಿಪಿಐ ಗೋಪಾಲ ರಾಠೋಡ ನೇತ್ರತ್ವದ ತಂಡ ಕಳ್ಳತನದ ಆರೋಪಿಗಳನ್ನು ಬಂಧಿಸುತ್ತಿರುವ ಹಿನ್ನಲೆ ಸಾರ್ವಜನಿಕರು ನಿಟ್ಟೂಸಿರು ಬಿಡುವಂತಾಗಿದೆ. ಇನ್ನೂ ಹಲವಾರು ಪ್ರಕರಣಗಳ ಆರೋಪಿಗಳನ್ನು ಹೆಡೆಮುರಿಕಟ್ಟಲು ತಂಡ ಕಾರ್ಯಾಚರಣೆ ನಡೆಸಿದೆ. ಆದಷ್ಟೂ ಬೇಗ ಕಳ್ಳರು ಪೋಲಿಸರ ಬಲೇಗೆ ಬಿಳಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ. ಈ ತಂಡದ ಕಾರ್ಯವನ್ನು ಜಿಲ್ಲಾವರಿಷ್ಠಾಧಿಕಾರಿಯವರು ಮತ್ತು ಹೆಚ್ಚುವರಿ ವರಿಷ್ಠಾಧಿಕಾರಿಯವರು ಶ್ಲಾಘಿಸಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

4 × 5 =