ಆರೋಗ್ಯವಂತ ಸಮಾಜದ ನಿರ್ಮಾಣವೇ ಪ್ರವಚನದ ಉದ್ಧೇಶ- ಗಂಗಾಧರ ಮಳಗಿ.!
ಗೋಕಾಕ: ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಆರೋಗ್ಯವಂತ ಸಮಾಜದ ನಿರ್ಮಾಣವೇ ಪ್ರವಚನದ ಉದ್ಧೇಶವಾಗಿರುತ್ತದೆ ಎಂದು ಸಾಹಿತಿ ಗಂಗಾಧರ ಮಳಗಿ ಹೇಳಿದರು.
ನಗರದ ಶ್ರೀ ಬಸವ ಮಂದಿರದ ೧೭ನೇ ವಾರ್ಷಿಕೋತ್ಸವ ಹಾಗೂ ಶ್ರಾವಣ ಮಾಸದ ಪ್ರವಚನ ಮಂಗಲೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ಭಾರತೀಯ ಸಂಸ್ಕೃತಿಯಲ್ಲಿ ಪುರಾನ, ಪ್ರವಚನ, ಸತ್ಸಂಗಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಪ್ರವಚನ ಕೇಳುವದರಿಂದ ಉತ್ತಮ ಸಂಸ್ಕಾರ ಪಡೆದು, ಒಳ್ಳೆಯ ನಾಗರಿಕರಾಗಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರವಚನಕಾರ ಶರಣ ಶ್ರೀ ಸಯ್ಯದಭಾಷಿತ ಅಲಿ ಅವರನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಶ್ರೀ ಬಸವ ಮಂದಿರ ಸತ್ಸಂಗ ಸಮೀತಿಯ ಕಾರ್ಯಾಧ್ಯಕ್ಷ ಮಹಾಂತೇಶ ತಾಂವಶಿ, ಅಧ್ಯಕ್ಷ ಎಸ್ ಎನ್ ಗುದಗನವರ, ಅಕ್ಕನಾಗಲಾಂಬಿಕಾ ಮಹಿಳಾ ಮಂಡಳದ ಅಧ್ಯಕ್ಷೆ ನೀಲಮ್ಮ ಶಿರಗಾಂವಕರ, ವೈ ಟಿ ಪಾಟೀಲ, ಕಲ್ಲೊಳ್ಳಿ, ಪರುಶೆಟ್ಟಿ ಸೇರಿದಂತೆ ಇತರರು ಇದ್ದರು.