Breaking News

ಶ್ರೀ ಜಗದ್ಗುರು ಪಂಚಾಚಾರ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ 25.10 ಲಕ್ಷ ರೂಗಳ ನಿವ್ವಳ ಲಾಭ.

Spread the love

ಶ್ರೀ ಜಗದ್ಗುರು ಪಂಚಾಚಾರ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ 25.10 ಲಕ್ಷ ರೂಗಳ ನಿವ್ವಳ ಲಾಭ.!

ಗೋಕಾಕ : ನಗರದ ಶ್ರೀ ಪಂಚಾಚಾರ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 25.10 ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು, ಸಂಸ್ಥೆಯ ಸದಸ್ಯರಿಗೆ ಶೇಕಡ 15% ರಷ್ಟು ಲಾಭ ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ || ಸಂಜಯ್ ಪಂಚಾಕ್ಷರಿ ಹೊಸಮಠ ತಿಳಿಸಿದರು .
ಶ್ರೀ ಜಗದ್ಗುರು ಪಂಚಾಚಾರ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸಂಘದ ಕಚೇರಿಯಲ್ಲಿ ನಡೆದ 31ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಳೆದ ಅನೇಕ ವರ್ಷಗಳಿಂದ ಸಂಸ್ಥೆಯ ಆಡಿಟ್ ರಿಪೋರ್ಟ್” ಎ”
ಶ್ರೇಣಿಯಲ್ಲಿದ್ದು ಸಂಸ್ಥೆಯ ಶೇರು ಬಂಡವಾಳ 25.50 ಲಕ್ಷ ರೂ ಇದ್ದು , ನಿಧಿಗಳು 2.16 ಕೋಟಿ ಮೀರಿದ್ದು, 6. 03 ಕೋಟಿ ರೂಗಳಷ್ಟು
ಠೇವುಗಳಿದ್ದು, 4.91, ಕೋಟಿ ಸಾಲ ಮತ್ತು ಮುಂಗಡಗಳಿದ್ದು , ದುಡಿಯುವ ಬಂಡವಾಳ 9.5 ಕೋಟಿ ಮೀರಿದ್ದು, ಒಟ್ಟು ವಾರ್ಷಿಕ ವಹಿವಾಟು
25 ಕೋಟಿಗೂ ಮೀರಿದ್ದು, ಸಂಸ್ಥೆಯ ಪ್ರಸಕ್ತ ಆರ್ಥಿಕ ವರ್ಷದಲ್ಲಿ 25,10,145 ರೂ ನಿವ್ವಳ ಲಾಭ ಹೊಂದಿರುತ್ತದೆ.
ಈ ಯಶಸ್ಸಿಗೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ನಿಸ್ವಾರ್ಥ ಪರಿಶ್ರಮವೇ ಕಾರಣ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಸಂಸ್ಥೆಯು ತಮ್ಮ ಗ್ರಾಹಕರಿಗೆ ಹೆಚ್ಚಿನ ಸೇವೆಗಳಾದ RTGS /NEFT /AT PAR CHEQUE
/DD /QR CODE & E -STAMPING (ಬಾಂಡ್ ಪೇಪರ್ ) ಸೇವೆಗಳನ್ನು ಗ್ರಾಹಕರ ಅನುಕೂಲಕ್ಕಾಗಿ ಮಾಡಲಾಗುವುದು ಎಂದು ಘೋಷಿಸಿದರು.

ಸಂಸ್ಥೆಯ ಹಿರಿಯ ಸದಸ್ಯರು ಹಾಗೂ ಬಿಎಸ್ಎನ್ಎಲ್ ಹಿರಿಯ ಅಧಿಕಾರಿಯಾಗಿ ನಿವೃತ್ತಿ ಹೊಂದಿದೆ. ಶ್ರೀ ಎ ಆಯ್ ಹಿರೇಮಠ ಅವರು ಸಂಸ್ಥೆಯ ವಿಶೇಷ ಸೇವೆ ಸೌಲಭ್ಯಗಳ ಲಾಂಛನವನ್ನು ಉದ್ಘಾಟಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಸಂಸ್ಥೆಯ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ( ಪ್ರ) ಕೆ ಎಸ್ ಸಂಬಾಳ ಅವರು ನಡೆಸಿಕೊಟ್ಟರು ಪ್ರಾರ್ಥನೆಯನ್ನು ಆಡಳಿತ ಮಂಡಳಿಯ
ಸದಸ್ಯರಾದ ಶ್ರೀಮತಿ ಈರವ್ವ ಶಿ ಹಿರೇಮಠ ರವರು ಮಾಡಿದರು. ಇನ್ನೋರ್ವ ಆಡಳಿತ ಮಂಡಳಿಯ ಸದಸ್ಯರಾದ ಎಂ ಜಿ ಹಿರೇಮಠ
ರವರು ಸ್ವಾಗತ ಹಾಗೂ ವಂದನಾರ್ಪಣೆ ನೆರವೇರಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿ.ಎಂ. ಮುನ್ನೋಳಿಮಠ ಹಾಗೂ ಸದಸ್ಯರಾದ ಎಸ್ ವಿ ಕುಮಾರ
ಮಠ ,ಆರ್ ಐ ಬಸ್ತವಾಡಕರ ,ಸಿ ವೈ ಕಮತರ , ಬಿ ಆರ್ ಹಿರೇಮಠ , ಶ್ರೀಮತಿ ಎಸ್ ಎಸ್ ಪೂಜೇರಿ, ಆನಂದ ರತನ್ ಹಾಗೂ
ಸಿಬ್ಬಂದಿಯವರಾದ ,ಎಸ್ ಸಿ ಅಂಬಲಿ, ಎ ಎಸ್ ಘೀವಾರಿ, ಎಂ ಎಸ್ ಹೂಲಿ , ಎಂ ಜಿ ಪಾಟೀಲ್ ,ಐ ಆರ್ ಕಂಬಿ ಮತ್ತು ಎಲ್ಲಾ ಪಿಗ್ಮಿ
ಸಂಗ್ರಹಕಾರರು ಹಾಗೂ ಯಾವತ್ತೂ ಸೊಸೈಟಿ ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

five × one =