ಸಮಾಜ ಗೌರವಿಸುವಂತಹ ವ್ಯಕ್ತಿಗಳಾಗಿ-ಪ್ರಾಚಾರ್ಯ ಎ ಬಿ ಪಾಟೀಲ.!

ಗೋಕಾಕ: ವಿದ್ಯಾರ್ಥಿಗಳು ಪದವಿಯೊಂದಿಗೆ ಪ್ರಜ್ಞಾವಂತರಾಗಿ ತಮ್ಮ ಸುಂದರವಾದ ಬದುಕನ್ನು ರೂಪಿಸಿಕೊಳ್ಳುವಂತೆ ಎಸ್.ಎಲ್.ಜೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎ ಬಿ ಪಾಟೀಲ ಹೇಳಿದರು.
ಅವರು, ರವಿವಾರದಂದು ನಗರದ ಶ್ರೀ ಲಕ್ಷö್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ತಾವು ಕಲಿತ ವಿದ್ಯೆ ಹಾಗೂ ತಮ್ಮಲ್ಲಿರುವ ಕೌಶಲ್ಯಗಳಿಂದ ಸಾಧಕರಾಗಿ ಉತ್ತಮ ಸಂಸ್ಕಾರವAತರಾಗಿ, ಒಳ್ಳೆಯ ನಾಗರಿಕರಾಗಿ, ಸಮಾಜ ಗೌರವಿಸುವಂತಹ ವ್ಯಕ್ತಿಗಳಾಗಿರೆಂದು ಹಾರೈಸಿದರು.
ವೇದಿಕೆಯ ಮೇಲೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಪ್ರಾಚಾರ್ಯ ಐ ಎಸ್ ಪವಾರ, ಉಪನ್ಯಾಸಕರಾದ ಎಸ್ ಎಚ್ ತಿಪ್ಪನ್ನವರ, ಎಸ್ ಬಿ ತೇಲಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ಹಳ್ಳೂರ, ಅಶ್ವಿನಿ ಧರ್ಮಟ್ಟಿ, ಮಂಜುನಾಥ ಇದ್ದರು.
YuvaBharataha Latest Kannada News