Breaking News

ಜಲಾವೃತಗೊಂಡ ಮನೆಯಲ್ಲಿ ಸಿಲುಕಿದ ಹಸುಗೂಸು ಬಾಣಂತಿ ರಕ್ಷಿಸಿದ ಮಾಣಿಕವಾಡಿ ಗ್ರಾಮಸ್ಥರು.!

Spread the love

ಜಲಾವೃತಗೊಂಡ ಮನೆಯಲ್ಲಿ ಸಿಲುಕಿದ ಹಸುಗೂಸು ಬಾಣಂತಿ ರಕ್ಷಿಸಿದ ಮಾಣಿಕವಾಡಿ ಗ್ರಾಮಸ್ಥರು.!


ಗೋಕಾಕ: ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ೧೧ಂಟೆಗೆ ಸುರಿದ ಭಾರಿ ಮಳೆಯಿಂದಾಗಿ ಇಡಿ ಗ್ರಾಮವೇ ಸಂಪೂರ್ಣ ಜಲಾವೃತವಾಗಿತ್ತು, ಗ್ರಾಮ ಮನೆಯೊಂದರಲ್ಲಿ ಸಿಲುಕಿಕೊಂಡಿದ್ದ ಹಸುಗೂಸು ಸೇರಿ ಬಾಣಂತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮಳೆಯಿಂದ ಮಾಣಿಕವಾಡಿ ಗ್ರಾಮ ಏಕಾಏಕಿ ಜಲಾವೃತ್ತಗೊಂಡ ಹಿನ್ನಲೆ ಮನೆಯಲ್ಲಿಯೇ ಸಿಲುಕಿದ್ದ ೧೨ದಿನದ ಹಸುಗೂಸು ಮತ್ತು ಬಾಣಂತಿ ತಾಯಿಯನ್ನು ಸ್ಥಳೀಯರು ಹಗ್ಗದ ಸಹಾಯದಿಂದ ಮತ್ತು ಒಬ್ಬರೊಬ್ಬರು ಕೈ ಹಿಡಿದು ರಕ್ಷಿಸಿ ಕಾಳಜಿ ಕೇಂದ್ರಕ್ಕೆ ರವಾನಿಸಿದ್ದಾರೆ. ಅಲ್ಲದೇ ಜಲಾವೃತಗೊಂಡ ಮನೆಯಿಂದ ಹೊರಬಾರದೇ ಪರದಾಡುತ್ತಿದ್ದ ಮಕ್ಕಳು ಸೇರಿ ಹಲವರನ್ನು ಮನೆಯ ಮೇಲೆ ಹತ್ತಿ ಛಾವಣಿ ತೆಗೆದು ರಕ್ಷಿಸಿದ್ದಾರೆ.
ಮಳೆಹಾನಿ ಪ್ರದೇಶದ ಜನರು ಕಾಳಜಿ ಕೇಂದ್ರದತ್ತ: ಸೋಮವಾರ ಮುಂಜಾನೆ ಸುರಿದ ಬಾರಿ ಮಳೆಗೆ ಮಾಣಿಕವಾಡಿ, ಮರಡಿಮಠ ಕ್ರಾಸ್ ಮತ್ತು ಗೋಕಾಕ-ಕೊಣ್ಣೂರು ಮುಖ್ಯರಸ್ತೆಯ ಬದಿಯಲ್ಲಿ ಮನೆಗಳು ಹಾನಿಗೊಳಗಾದ ಹಿನ್ನಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ತಾಲೂಕಾಡಳಿ ಕಾರ್ಯಪ್ರವೃತ್ತರಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತ ಕುಟುಂಬಗಳನ್ನು ವಸತಿಗೆ ವ್ಯವಸ್ಥೆ ಮಾಡಿದ್ದಾರೆ.
ಸೋಮವಾರದಂದು ಕೊಣ್ಣೂರು ಗ್ರಾಮಕ್ಕೆ ದೌಢಿಸಿರುವ ಬೈಲಹೊಂಗಲ ಉಪವಿಭಾಗಾಧಿಕಾರಿಗಳು ಸಂತ್ರಸ್ತರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿ, ಸಂತ್ರಸ್ತರಿಗೆ ಉಟೋಪಚಾರ ವ್ಯವಸ್ಥೆ ವಿಕ್ಷಿಸಿದರು.


ಬೆಟ್ಟಕುಸಿತ ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಭಾರಿ ಮಳೆಗೆ ಗೋಕಾಕ ಫಾಲ್ಸ್ ರಸ್ತೆಯಲ್ಲಿ ಬೆಟ್ಟ ಕುಸಿದಿದ್ದು, ಶಾಸಕ ರಮೇಶ ಜಾರಕಿಹೊಳಿ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ವಿ ಎನ್ ಪಾಟೀಲ ಮತ್ತು ಪಿಎಸ್‌ಐ ಎಮ್ ಡಿ ಘೋರಿ ಹಾಗೂ ಸಿಬ್ಬಂಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಭಾರಿ ಪ್ರಮಾಣದ ಮಳೆಯ ನೀರು ಹರಿದ ಬಂದಿರುವ ಹಿನ್ನಲೆಯಲ್ಲಿ ದೊಡ್ಡ ಬಂಡೆಯೊAದು ಸೀಳಿದ್ದು ಅದನ್ನು ಸ್ಫೋಟಕಗಳ ಮೂಲಕ ಚಿದ್ರಗೊಳಿಸಬೇಕಿದೆ. ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವದು ಎಂದು ಲೋಕೋಪಯೋಗಿ ಇಲಾಖೆ ಅಭಿಯಂತರ ನಾಗಾಭರಣ ಮಾಹಿತಿ ನೀಡಿದರು. ಸೀಳಿದ ಬಂಡೆ ಕುಸಿಯುವ ಆತಂಕ ಇರುವದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಬಂಡೆಯತ್ತ ಹೋಗದಂತೆ ಪೋಲಿಸ್ ಇಲಾಖೆಯವರು ಬ್ಯಾರಿಕೇಡ ಹಾಕಿ ಸಿಬ್ಬಂಧಿ ನಿಯೋಜನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಕೊಣ್ಣೂರು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

18 − eleven =