ಪ್ರಧಾನಿಯವರ ಜನ್ಮದಿನದ ಅಂಗವಾಗಿ ೧೫ದಿನಗಳ ವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮ-ರಾಜೇಂದ್ರ ಗೌಡಪ್ಪಗೋಳ.!
ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಸೆಪ್ಟೆಂಬರ ದಿ.17 ರಿಂದ ಅಕ್ಟೋಬರ 2ರ ವರೆಗೆ ಬಿಜೆಪಿ ಪಕ್ಷ ಸೇವಾ ಪಾಕ್ಷಿಕ ಸೇವೆಗಾಗಿ ಹದಿನೈದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅವರು, ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಗೋಕಾಕ ಮತಕ್ಷೇತ್ರದಲ್ಲಿ ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಪಕ್ಷ ಜನರ ಸೇವೆಗಾಗಿ 15ದಿನಗಳ ಕಾಲ ನಿರಂತರವಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವದು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಅನುಷ್ಠಾನಗೊಳಿಸಿದ ಯೋಜನೆಗಳನ್ನು ಜನರ ಮನೆ ಮನಗಳಿಗೆ ತಲುಪಿಸುವ ಕಾರ್ಯದೊಂದಿಗೆ, ಆರೋಗ್ಯ ತಪಾಸಣಾ ಶಿಭಿರ, ಜೀವ ರಕ್ಷಕ ಲಸಿಕಾ ಶಿಭಿರ, ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆ ಪ್ರದರ್ಶನ, ರಕ್ತದಾನ ಶಿಭಿರ, ಕಮಲೋತ್ಸವ, ಫಲಾನಿಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ, ಸ್ವಚ್ಛತಾ ಅಭಿಯಾನ, ಅರಳಿ ಮರ ನೆಡುವ ಅಭಿಯಾನ, ಕೆರೆಗಳ ಪುನಶ್ಚೇತನಕ್ಕಾಗಿ ಅಮೃತ ಸರೋವರ ಅಭಿಯಾನ, ಖಾದಿ ಉತ್ಸವ, ಶಾಲಾ ಮಕ್ಕಳಿಗೆ ಬ್ಯಾಗ ವಿತರಣೆ, ಕ್ಷಯರೋಗ ನಿರ್ಮೂಲನಾ ಅಭಿಯಾನ, ಅಂಗನವಾಡಿ ಸೇವಾ ದಿವಸ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಕ್ಟೋಬರ 2ರಂದು ಮಹಾತ್ಮ ಗಾಂಧಿಜಿಯವರ ಜನ್ಮ ದಿನದ ಅಂಗವಾಗಿ ಮಹಾತ್ಮರಿಗೆ ಗೌರವ ನೀಡುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನವನ್ನು ಬೂತ್ ಮಟ್ಟದಲ್ಲಿ ಆಯೋಜಿಸಿ ನಮ್ಮ ಗ್ರಾಮ, ನಗರ ಮತ್ತು ಪಟ್ಟಣಗಳ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೆವೆ. ಖಾದಿ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಖಾದಿ ಬಟ್ಟೆಗಳ ತಾತ್ಕಾಲಿಕ ಮಳಿಗೆ ಸ್ಥಾಪಿಸಿ ನೇಕಾರರ ಮೂಲಕ ಮರಾಟ ಮಾಡುವ ಕಾರ್ಯಕ್ರಮ ಮಾಡಲಾಗುವದು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ವಿವಿಧ ಮೋರ್ಚಾ ಅಧ್ಯಕ್ಷರುಗಳಾದ ಲಕ್ಷö್ಮಣ ಖಡಕಭಾಂವಿ, ಮಂಜುನಾಥ ಮಾವರಕರ, ಮಂಜು ಪ್ರಭನಟ್ಟಿ, ಮುಖಂಡರುಗಳಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತಿçಗೊಲ್ಲರ, ಬಸವರಾಜ ಹಿರೇಮಠ ಉಪಸ್ಥಿತರಿದ್ದರು.