ಹಾಫ್ ಐರನ್ ಡಿಸ್ಟನ್ಸ್ ಟ್ರಿಯ್ಥ್ಲಾನ್ ಸ್ಪರ್ಧೆಯಲ್ಲಿ ವಿಜೇತರಾದ ಸಿಪಿಐ ಶ್ರೀಶೈಲ ಬ್ಯಾಕೋಡ.!
ಗೋಕಾಕ: ಮಹಾರಾಷ್ಟ್ರದ ಕೊಲ್ಲಾಪೂರ ನಗರದಲ್ಲಿ ಸ್ಪೋರ್ಟ್ ಕ್ಲಬ್ ಅವರು ವರ್ಷಕ್ಕೊಮ್ಮ ನಡೆಸುವ ಹಾಫ್ ಐರನ್ ಡಿಸ್ಟನ್ಸ್ ಟ್ರಿಯ್ಥ್ಲಾನ್ ಸ್ಪರ್ಧೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಿ.ಪಿ.ಐ ಶ್ರೀಶೈಲ್ ಬ್ಯಾಕೋಡ ಅವರು ರವಿವಾರ ನಡೆದ 2022ರ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪದಕವನ್ನು ಗಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾರತದ ಯಾವದೇ ಭಾಗದಲ್ಲಿ ವಾಸಿಸುವ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದ್ದು, ವಿಜೇತರನ್ನು ಹಾಫ್ ಐರನ್ ಡಿಸ್ಟನ್ಸ್ ಟ್ರಿಯ್ಥ್ಲಾನ್ ಎಂದು ಘೋಷಿಸಲಾಗುತ್ತದೆ.
2022 ರ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಪಿ.ಐ ಶ್ರೀಶೈಲ್ ಬ್ಯಾಕೋಡ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಯೋಜಕರು ನೀಡಿದ್ದ 10 ಗಂಟೆಯ ಅವಧಿಗಿಂತ ಮೊದಲೇ ಆ ಗುರಿಯನ್ನು ಸಾಧಿಸುವ ಮೂಲಕ ಪಿ.ಐ ಬ್ಯಾಕೋಡ ಪ್ರಶಸ್ತಿಗೆ ಅರ್ಹರಾಗಿದ್ದಾರೆ.
ಆಯೋಜಕರು 90 ಕಿ.ಮೀ. ಸೈಕ್ಲಿಂಗ್ (ಕೊಲ್ಲಾಪೂರದಿಂದ ನಿಪ್ಪಾಣಿ ಸ್ತವನಿಧಿವರೆಗೆ), 21 ಕಿ.ಮೀ ರನ್ನಿಂಗ್ ಮತ್ತು 2 ಕಿ.ಮೀ ಸ್ವಿಮ್ಮಿಂಗ್ ಸೇರಿದಂತೆ ಈ ಎಲ್ಲಾ ಘಟ್ಟಗಳನ್ನು 10 ಗಂಟೆಯ ಒಳಗೆ ಪೂರ್ಣಗೊಳಿಸಲು ತಿಳಿಸಿದ್ದರು. ಆದರೆ ಎಲ್ಲಾ ಘಟಗಳನ್ನು ಸಿ.ಪಿ.ಐ ಬ್ಯಾಕೋಡ ಕೇವಲ 6 ಗಂಟೆ 39 ನಿಮಿಷದಲ್ಲಿ ಪೂರ್ಣಗೊಳಿಸುವ ಮೂಲಕ ಹಾಫ್ ಐರನ್ ಡಿಸ್ಟನ್ಸ್ ಟ್ರಿಯ್ಥ್ಲಾನ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಸಿ.ಪಿ.ಐ ಶ್ರೀಶೈಲ ಬ್ಯಾಕೋಡ ಅವರ ಸಾಧನೆಗೆ ಡಿ ಜಿ ಪಿ ಕರ್ನಾಟಕ ಪ್ರವೀಣ್ ಸೂದ್ ,ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಡಾ. ಸಂಜೀವ ಪಾಟೀಲ, ಹೆಚ್ಚುವರಿ ವರಿಷ್ಠಾಧಿಕಾರಿ ಮಾನಿಂಗ ನಂದಗಾವಿ ಮತ್ತು ಗೋಕಾಕ ಡಿಎಸ್ಪಿ ಮನೋಜಕುಮಾರ ನಾಯ್ಕ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.