ಘಟಪ್ರಭಾದಲ್ಲಿ ಶಾಂತಿ ಸಭೆ!
ಯುವ ಭಾರತ ಸುದ್ದಿ, ಘಟಪ್ರಭಾ: ಕನ್ನಡಪರ ಸಂಘಟನೆಗಳ ಮುಖಂಡರ ಶಾಂತಿ ಸಭೆಯು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಮಂಗಳವಾರ ಸಂಜೆ ನಡೆಸಲಾಯಿತು.ಸಭೆಯಲ್ಲಿ ಮಾತನಾಡಿದ ಘಟಪ್ರಭಾ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ (ಪಿ ಐ) ಶ್ರೀಶೈಲ ಬ್ಯಾಕೋಡ ರವರು, ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಯ ಮುಖಂಡರು ಪ್ರತಿಭಟನೆಗಳು, ಹೋರಾಟಗಳು ಶಾಂತಿಯುತವಾಗಿ ನಡೆಯಬೇಕು.
ಟಯರ್ ಗೆ ಬೆಂಕಿ ಹಚ್ಚುವುದು, ವಾಹನಗಳಿಗೆ ಮಸಿ ಬಳಿಯುವುದು, ಸರ್ಕಾರಿ ಆಸ್ತಿ ಪಾಸ್ತಿ ನಷ್ಟು ಮಾಡುವುದು ಕಾನೂನು ಬಾಹಿರ ವಾಗಿರುತ್ತದೆ, ಒಂದು ವೇಳೆ ಪ್ರತಿಭಟನೆ ಮಾಡುವುದಾದರೆ ಪೋಲಿಸ್ ಠಾಣೆಯಲ್ಲಿ ಒಂದು ದಿನ ಮುಂಚಿತವಾಗಿ ತಿಳಿಸಬೇಕು, ಕಾನೂನು ವಿರುದ್ಧವಾಗಿ ಯಾರೇ ಹೋದರೆ ಅವರ ಮೇಲೆ ಕ್ರಮ ಆಗುತ್ತದೆ. ಹಾಗೂ ಶಾಂತಿಗೆ ಭಂಗ ಉಂಟು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ರೆಹಮಾನ್ ಮೊಕಾಶಿ, ಪ್ರಶಾಂತ ಅರಳಿಕಟ್ಟಿ, ಅಪ್ಪಾಸಾಬ ಮುಲ್ಲಾ, ಕೆಂಪಯ್ಯಾ ಪುರಾಣಿಕ, ರಾಜು ದೊಡಮನಿ, ಮಾರುತಿ ಚೌಕಶಿ, ಬಸವರಾಜ ಹುಬ್ಬಳ್ಳಿ, ಕೊಟ್ರೇಶ ಪಟ್ಟಣಶೆಟ್ಟಿ, ಕುಮಾರ ಇಂಡಿಗೇರ, ಸಲೀಂ ಮುಲ್ಲಾ, ಹಾಗೂ ಇನ್ನೂ ಅನೇಕ ಸಂಘಟನೆಯ ಮುಖಂಡರು ಮತ್ತು ಪೋಲಿಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.