Breaking News

ಹುರುಪು ಮೂಡಿಸಿದ ಸರಣಿ ಸಭೆ : ಗೋಕಾಕನಲ್ಲೀಗ ಕಮಲದ್ದೇ ಕಲರವ!

Spread the love

ಹುರುಪು ಮೂಡಿಸಿದ ಸರಣಿ ಸಭೆ : ಗೋಕಾಕನಲ್ಲೀಗ ಕಮಲದ್ದೇ ಕಲರವ

 

   ಪವನ್ ಎಮ್

  ಯುವ ಭಾರತ ವಿಶೇಷ

ಗೋಕಾಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಗೋಕಾಕ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳಲ್ಲಿ ಸರಣಿ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ಹಾಲಿ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿಗೆ ಭಾರಿ ಬಲ ತಂದು ಕೊಟ್ಟಿದ್ದಾರೆ.

ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲೀಗ ಕಮಲದ್ದೇ ಕಲರವ ಎದ್ದು ಕಾಣುತ್ತಿದೆ. ಇಡೀ ಕ್ಷೇತ್ರದಲ್ಲಿ ಸಾಹುಕಾರ್ ಕಮಲ ಕಾರ್ಯಕರ್ತರಲ್ಲಿ ಅದಮ್ಯ ಉತ್ಸಾಹ ತುಂಬಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ಕಮಲ ಪಕ್ಷದ ಆರ್ಭಟ ಅಷ್ಟೊಂದು ಜೋರಿರಲಿಲ್ಲ. ಆದರೆ, ಬದಲಾದ ಸನ್ನಿವೇಶದಲ್ಲಿ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದಂದಿನಿಂದ ಇಡೀ ಮತಕ್ಷೇತ್ರದಲ್ಲಿ ಒಟ್ಟಾರೆ ಪರಿಸ್ಥಿತಿ ಬದಲಾಯಿತು. ಮತದಾರರ ಮನ ಪರಿವರ್ತನೆಗೊಂಡಿತು. ಎಲ್ಲರೂ ಬಿಜೆಪಿ ಕಡೆ ವಾಲತೊಡಗಿದರು. ಸಣ್ಣ ಸಸಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಕ್ಷೇತ್ರದ ಒಟ್ಟಾರೆ ಮತದಾರರನ್ನು ಗಮನಿಸಿದರೆ ಬಿಜೆಪಿ ಇಂದು ಬೃಹದಾಕಾರದ ಆಲದ ಮರದಂತೆ ಬೆಳೆದು ನಿಂತಿರುವುದು ಗಮನಾರ್ಹ.

ಅಂಕಲಗಿ ಜಿಲ್ಲಾ ಪಂಚಾಯತ್ ಮತಕ್ಷೇತ್ರ ಹೊರತುಪಡಿಸಿದರೆ ಎಲ್ಲಾ ಜಿಲ್ಲಾ ಪಂಚಾಯತ್ ಗಳಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಲಾಗಿದೆ. ಅಂಕಲಗಿಯಲ್ಲಿ ಸದ್ಯವೇ ಸಭೆ ನಡೆಯಲಿದೆ. ಇಂದು ಮಮದಾಪುರ ಮತ್ತು ಮಕ್ಕಳಗೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಹೀಗಾಗಿ ಒಟ್ಟಾರೆ ಕೆಲವೇ ದಿನಗಳಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳಲ್ಲಿ ಬಿಜೆಪಿ ಸಭೆ ಪೂರ್ಣಗೊಂಡಂತಾಗಲಿದೆ. ರಮೇಶ ಜಾರಕಿಹೊಳಿ ಅವರು ಬಿಜೆಪಿ ಕಾರ್ಯಕರ್ತರಲ್ಲಿ ನವೋತ್ಸಾಹವನ್ನು ತುಂಬುತ್ತಿದ್ದಾರೆ. ಕ್ಷೇತ್ರವಾರು ಸಭೆ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದ್ದಾರೆ.

ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ, ವಿಸ್ತಾರಕ ಮುಂತಾದ ಕಾರ್ಯಕ್ರಮ ಪಕ್ಷಕ್ಕೆ ಬಲತಂದು ಕೊಡುವಲ್ಲಿ ರಮೇಶ ಜಾರಕಿಹೊಳಿಯವರು ಅಹರ್ನಿಶಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇಡೀ ಮತಕ್ಷೇತ್ರದಲ್ಲಿ ಬಿಜೆಪಿ ಇದೀಗ ಭದ್ರವಾಗಿ ಬೆಳೆದು ನಿಂತಿದೆ. ಗೋಕಾಕ ಈಗ ಬಿಜೆಪಿಯ ಗಟ್ಟಿ ನೆಲೆಯಾಗಿ ಪರಿವರ್ತನೆಗೊಂಡಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಏಕಮುಖದ ಸ್ಪರ್ಧೆ ಕಂಡುಬರುತ್ತಿದೆ. ರಮೇಶ ಜಾರಕಿಹೊಳಿಯವರ ಅಪ್ರತಿಮ ಕಾರ್ಯವೈಖರಿ ಎದುರಾಳಿಗಳ ಎದೆ ನಡಗಿಸುವಂತಿದೆ. ಕಮಲ ಪಕ್ಷದ ಬಿರುಗಾಳಿ ಬಿಟ್ಟರೆ ಬೇರೆ ಪಕ್ಷದ ಅಲೆ ಇಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಬದಲಾವಣೆ ಕಂಡು ಬಂದಿದೆ. ಯುವ ಹಾಗೂ ಮಹಿಳೆಯರು ವಿಶೇಷವಾಗಿ ಬಿಜೆಪಿ ಕಡೆ ಒಲವು ತೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ವಿಶೇಷ ಅಭಿವೃದ್ಧಿ ಯೋಜನೆಗಳು ಸಾಮಾನ್ಯ ಮತದಾರರನ್ನು ತಲುಪುತ್ತಿರುವುದು ಗೋಕಾಕ ಮತಕ್ಷೇತ್ರದಲ್ಲಿ ವಿಶೇಷವಾಗಿ ಕಾಣಬಹುದು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿಯವರು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದರಲ್ಲಿ ಯಾವ ಸಂದೇಹವಿಲ್ಲ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಬಿಜೆಪಿ ಪರ ಮತದಾರರು ವಾಲಿರುವುದನ್ನು ನೋಡಬಹುದು. ಬಿಜೆಪಿ ಸಂಘಟನೆ ಜೊತೆ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನ ಹಾಗೂ ಕಾರ್ಯಕರ್ತರಲ್ಲಿ ಕಂಡುಬರುತ್ತಿರುವ ಬಿಜೆಪಿ ಪರ ಒಲವು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗೋಕಾಕ ಮತಕ್ಷೇತ್ರ ಹೊಸ ಅಧ್ಯಾಯವನ್ನು ಬರೆಯುವುದರಲ್ಲಿ ಯಾವ ಸಂದೇಹವು ಇಲ್ಲ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

eighteen − 17 =