Breaking News

ನಗರಸಭೆ ಉಪಚುನಾವಣೆಯ ಪ್ರಚಾರಕ್ಕೆ ಯುವ ಅಭ್ಯರ್ಥಿ ಅಭಿಷೇಕನಿಂದ ಭರ್ಜರಿ ಚಾಲನೆ.!

Spread the love

ನಗರಸಭೆ ಉಪಚುನಾವಣೆಯ ಪ್ರಚಾರಕ್ಕೆ ಯುವ ಅಭ್ಯರ್ಥಿ ಅಭಿಷೇಕನಿಂದ ಭರ್ಜರಿ ಚಾಲನೆ.!

 

ಯುವ ಭಾರತ ಸುದ್ದಿ,  ಗೋಕಾಕ: ನಗರಸಭೆ ಉಪಚುನಾವಣೆಯ ಪ್ರಚಾರಕ್ಕೆ ಭರ್ಜರಿ ಚಾಲನೆ ಸಿಕ್ಕಿದ್ದು, ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎಂದು ಮತದಾರರನ್ನು ಸೆಳೆಯಲು ಪೈಪೋಟಿ ಜೋರಾಗಿ ನಡೆಸಿದ್ದು ವಾರ್ಡ ನಂ 13ರ ಯುವ ಅಭ್ಯರ್ಥಿಯೋರ್ವ ಸೈಲೆಂಟಾಗಿ ಪ್ರಚಾರದಲ್ಲಿ ತೋಡಗಿ ಮತದಾರರ ಗಮನ ಸೆಳೆಯುತ್ತಿದ್ದಾರೆ.
ನಗರಸಭೆಯಲ್ಲಿ ದಳವಾಯಿ ಮನೆತನದ ಮೂರನೇ ಕುಡಿ ಸದ್ಯಕ್ಕೆ ರಾಜಕೀಯ ಎಂಟ್ರಿ ಪಡೆದಿದ್ದು, ಮಾಜಿ ನಗರ ಅಧ್ಯಕ್ಷ ಸಿದ್ದಲಿಂಗ ದಳವಾಯಿ ಸುಪುತ್ರ ಸಮಾಜ ಸೇವೆಗಾಗಿ ರಾಜಕೀಯದತ್ತ ಮುಖ ಮಾಡಿದ್ದು, 29 ವಯಸ್ಸಿನ ಯುವ ಅಭ್ಯರ್ಥಿ ಅಭಿಷೇಕ ದಳವಾಯಿ ತನ್ನ ತಂದೆಯ ಹಾದಿಯಂತೆ ಸಮಾಜ ಸೇವೆಯಲ್ಲಿ ತೋಡಿದ್ದು, ವಾರ್ಡ ನಂ 13ರ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಈ ಹಿಂದಿನ ನಗರಸಭೆ ಸದಸ್ಯನ ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂಬರ ೧೩ನೇಯ ಉಪಚುನಾವಣೆಯಲ್ಲಿ ದಳವಾಯಿ ಕುಟುಂಬದ ಮೂರನೆ ಕುಡಿ ಅಭಿಷೇಕ ಸಿದ್ದಲಿಂಗಪ್ಪ ದಳವಾಯಿ ಸ್ಫರ್ಧಿಸಿದ್ದು, ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೋಡಗಿರುವ ದಳವಾಯಿ ಕುಟುಂಬಕ್ಕೆ ರಾಜಕೀಯ ಹೊಸದೇನಲ್ಲಾ, ಮೊದಲು ಅಜ್ಜಿ, ನಂತರ ತಂದೆ ಸಿದ್ದಲಿಂಗ ದಳವಾಯಿ, ಈಗ ಮಗ ಅಭಿಷೇಕ ದಳವಾಯಿ ನಗರ ಸೇವಕರಾಗಲು ಉತ್ಸುಕರಾಗಿದ್ದಾರೆ.


ಚಿಕ್ಕನಂದಿನಿದಲೂ ತನ್ನ ಅಜ್ಜಿ, ತಂದೆಯವರು ಮಾಡುವ ಸಮಾಜ ಸೇವೆಯನ್ನು ನೋಡಿ ತಾನು ಕೂಡ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೋಡಗಿಸಿಕೊಳ್ಳಬೇಂಬ ಹಂಬಲ ಹೊಂದಿರುವ ಅಭಿಷೇಕ ನಗರಸಭೆ ವಾರ್ಡ ನಂ-13 ರಲ್ಲಿನ ಮತದಾರರ ಒತ್ತಾಸೆಯ ಮೆರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ದೇವರ ಹಾಗೂ ಗುರುಹಿರಿಯರ ಆಶಿರ್ವಾದ ಪಡೆದು ತೆರಳಿ ಇವರು ಮತಯಾಚನೆ ಮಾಡುತಿದ್ದಾರೆ. ಶೇಜ ನಂಬರ 1, ಬೆಳಿಗ್ಗೆ ಎದ್ದು ಸವಿಯುವ ಟೀ ಕಪ್ಪು ಬಸಿ ಚಿಹ್ನೆ ಇವರದ್ದಾಗಿದ್ದು, ಬೆಳ್ಳಂಬೆಳಿಗ್ಗೆ ಪ್ರಚಾರ ನಡೆಸಿ, ಮತದಾರರನ್ನು ಸೆಳೆಯುತ್ತ, ತಮ್ಮ ಚಿನ್ಹೆಗೆ ಅತ್ಯಮೂಲ್ಯ ಮತ ನೀಡಲು ವಿನಂತಿಸುತಿದ್ದಾರೆ.
ಸಿದ್ದಲಿಂಗ ದಳವಾಯಿ ಅವರು ಮಾಜಿ ನಗರಸಭೆಯ ನಗರಾಧ್ಯಕ್ಷರಾಗಿದ್ದು, ಜಾರಕಿಹೊಳಿ ಕುಟುಂಬದ ಅತ್ಯಾಪ್ತರು ಹೌದು, ತಮ್ಮ ನಗರಾಧ್ಯಕ್ಷ ಸ್ಥಾನದ ಅವಧಿ ಮುಗಿಯುತ್ತಿದ್ದಂತೆ ರಾಜಕೀಯದಿಂದ ದೂರ ಉಳಿದಿದ್ದರು ಸಹ ವಾರ್ಡನ ಎಲ್ಲ ಕೆಲಸ ಕಾರ್ಯಗಳನ್ನು ನೇರವಾಗಿಯೇ ಜನರಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಸದ್ಯ ಮಗನ ಗ್ರಾಂಡ್ ಎಂಟ್ರಿ ಹಾರೈಸಿರುವ ಅವರು ತಮ್ಮ ಮಗನ ಉತ್ಸಾಹಕ್ಕೆ ಹುರಿದುಂಬಿಸಿ ನಗರ ಸೇವಕನಾಗಿ ಜನತೆಯ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.


ಸೌಮ್ಯ ಸ್ವಭಾದವನಾದ ಅಭಿಷೇಕ ದಳವಾಯಿ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿದ್ದರಿಂದ ಮತದಾರರು, ಮನೆಯ ಮಗನಂತಿರುವ ಇವರ ಕಡೆ ಒಲವನ್ನು ತೊರಿ ಇವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ, ವಾರ್ಡಿನಲ್ಲಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಯಾವುದೆ ಸಂಶವಿಲ್ಲವೆದು ಮತದಾರರ ಮನದಾಳದ ಮಾತಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

five × five =