ಅಂಕಲಗಿ ಜಾತ್ರೆ ಬೃಹತ್ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ.!
ಗೋಕಾಕ: ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷಿö್ಮÃದೇವಿ ಹಾಗೂ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಏ.೧೯ ರಿಂದ ೨೩ರ ವರೆಗೆ ಅದ್ದೂರಿಯಿಂದ ನಡೆಯಲಿದೆ.
೧೯ರಂದು ಬೆಳಿಗ್ಗೆ ೬ ಗಂಟೆಗೆ ಅಭಿಷೇಕ, ೯ಗಂಟೆಗೆ ಕಳಸಾರೋಹಣ ನೆರವೇರಲಿದೆ. ಅಂಕಲಗಿ ಅಡವಿಸಿದ್ದೇಶ್ವರ ಮಠದ ವಿಜಯಕುಮಾರ ಸ್ವಾಮಿಜಿ, ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮಿಜಿ ಅವರಿಂದ ಕಳಸದ ಪೂಜೆ, ಮಹಾಲಕ್ಷಿö್ಮÃದೇವಿ ಹಾಗೂ ದ್ಯಾಮವ್ವದೇವಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಅದೆ ದಿನ ಉಡಿ ತುಂಬುವ ಕಾರ್ಯಕ್ರಮ, ಸಂಜೆ ೫ ಗಂಟೆಗೆ ದ್ಯಾಮವ್ವ ದೇವಿ ಹೊನ್ನಾಟ, ರಾತ್ರಿ ೧೦ ಗಂಟೆಗೆ ಡೊಳ್ಳಿನ ವಾಗಲಗಳು ಜರುಗಲಿವೆ.
೨೦ರಂದು ದ್ಯಾಮವ್ವದೇವಿ ಹೊನ್ನಾಟ ಸಂಜೆ ೪ಗಂಟೆಗೆ ರಾಜ್ಯ ಮಟ್ಟದ ಬೃಹತ್ ಕುಸ್ತಿ ಪಂದ್ಯಾವಳಿಗಳು ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಪಂಜಾಬ್, ಮಹಾರಾಷ್ಟç ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ಪೈಲ್ವಾನರು ಭಾಗವಹಿಸುವರು. ರಾತ್ರಿ ೧೦ಗಂಟೆಗೆ ಮಹಾಲಕ್ಷಿö್ಮÃ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ನಡೆಯಲಿವೆ.
೨೧ರಂದು ಮಧ್ಯಾಹ್ನ ೧೨ಗಂಟೆಗೆ ಶಾಸಕ ರಮೇಶ ಜಾರಕಿಹೊಳಿ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಸಮಾರಂಭ, ನಂತರ ಮಹಾಪ್ರಸಾದ, ಸಂಜೆ ೪ಗಂಟೆಗೆ ರಥೋತ್ಸವ ನಡೆಯಲಿದೆ. ೨೨ರಂದು ದೇವಿಗೆ ನೈವೇದ್ಯ, ಮಹಾಪ್ರಸಾದ ಹಾಗೂ ರಾತ್ರಿ ೧೦ ಗಂಟೆಗೆ ನಾಟಕ ಪ್ರದರ್ಶನವಾಗಲಿದೆ. ೨೩ರಂದು ಮಹಾಲಕ್ಷಿö್ಮÃದೇವಿ, ದ್ಯಾಮವ್ವದೇವಿಯ ಆಶೀರ್ವಾದ ಹಾಗೂ ದ್ಯಾಮವ್ವ ದೇವಿ ಸಿಮಿಗೆ ಹೊಗುವ ಮೂಲಕ ಜಾತ್ರೆ ತೆರೆ ಕಾಣಲಿದೆ ಎಂದು ವೀರುಪಾಕ್ಷ ಅಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.