ಮಹತ್ವದ ಚುನಾವಣೆಗೆ ದಿನ ಘೋಷಣೆ
ಯುವ ಭಾರತ ಸುದ್ದಿ ದೆಹಲಿ:
ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಬುಧವಾರ ಭಾರತೀಯ ಚುನಾವಣೆ ಆಯೋಗ ಘೋಷಿಸಿದೆ.
ಫೆಬ್ರವರಿ 16 ರಂದು ತ್ರಿಪುರ, ಫೆಬ್ರವರಿ 27 ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಮಾರ್ಚ್ 2 ರಂದು ಮೂರು ರಾಜ್ಯಗಳು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯ ರಾಜ್ಯಗಳ ಸರ್ಕಾರ ಅವಧಿ ಕ್ರಮವಾಗಿ 2023 ರ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22 ರಂದು ಪೂರ್ಣಗೊಳ್ಳಲಿದೆ.
ಪ್ರತಿ ರಾಜ್ಯದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಿಗದಿಪಡಿಸಲಾಗಿದೆ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾದಲ್ಲಿ ಒಟ್ಟು 62.8 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.