Breaking News

ಅಶೋಕ ಪೂಜಾರಿಯವರಿಗೆ ಕೈ ತಪ್ಪಿದ ಟಿಕೆಟ್ : ಗೋಕಾಕ ಕೈ ಕೊತಕೊತ !

Spread the love

ಅಶೋಕ ಪೂಜಾರಿಯವರಿಗೆ ಕೈ ತಪ್ಪಿದ ಟಿಕೆಟ್ : ಗೋಕಾಕ ಕೈ ಕೊತಕೊತ !

ಯುವ ಭಾರತ ಸುದ್ದಿ ಗೋಕಾಕ :
ಹಿರಿಯ ಕಾಂಗ್ರೆಸ್ ನಾಯಕ ಅಶೋಕ ಪೂಜಾರಿಯವರಿಗೆ ಕಾಂಗ್ರೆಸ್ ಪಕ್ಷ ಈ ಬಾರಿ ಟಿಕೆಟ್ ನೀಡದೇ ವಂಚನೆ ಮಾಡಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ದ್ವಿತೀಯ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಗೋಕಾಕ ಮತಕ್ಷೇತ್ರದಿಂದ ಅಶೋಕ ಪೂಜಾರಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಪೂಜಾರಿ ಅವರ ಬದಲಿಗೆ ಹೊಸಬರಾಗಿರುವ ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಅಶೋಕ ಪೂಜಾರಿ ಅವರ ಬೆಂಬಲಿಗರು ಸಿಟ್ಟಿಗೆದ್ದು ಗೋಕಾಕ ನಗರದ ಬಸವೇಶ್ವರ
ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಧಿಕ್ಕಾರ ಕೂಗಿದರು.

ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಟಿಕೆಟ್ ನೀಡುವ ಖಚಿತ ಭರವಸೆ ಮೇರೆಗೆ ಅಶೋಕ ಪೂಜಾರಿಯವರು ಜಾತ್ಯತೀತ ಜನತಾದಳ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆದರೆ, ಇದೀಗ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ ವಂಚಿಸಿದೆ ಎಂದು ಕಾಂಗ್ರೆಸ್ಸಿಗರು ಆಕ್ಷೇಪಿಸಿದರು.

ಸೋಮವಾರ ಸಭೆ ಕರೆದು ಮುಂದಿನ ನಿರ್ಧಾರ : ಅಶೋಕ ಪೂಜಾರಿ

ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ತಮಗೆ ಸ್ಪರ್ಧೆಗೆ ಅವಕಾಶ ನೀಡದೇ ಇರುವ ಹಿನ್ನೆಲೆಯಲ್ಲಿ ಅಶೋಕ ಪೂಜಾರಿ ಅವರು ಸೋಮವಾರ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.


Spread the love

About Yuva Bharatha

Check Also

ಸವದತ್ತಿ ಪಟ್ಟಣದಲ್ಲಿ ವಿಜಯ ಸಂಕಲ್ಪ ಅಭಿಯಾನ ಯಶಸ್ವಿ

Spread the loveಸವದತ್ತಿ ಪಟ್ಟಣದಲ್ಲಿ ವಿಜಯ ಸಂಕಲ್ಪ ಅಭಿಯಾನ ಯಶಸ್ವಿ ಯುವ ಭಾರತ ಸುದ್ದಿ ಸವದತ್ತಿ : ಸವದತ್ತಿ ಪಟ್ಟಣದಲ್ಲಿ …

Leave a Reply

Your email address will not be published. Required fields are marked *

fourteen + twelve =