Breaking News

ಬಿಜೆಪಿ ಸೇರ್ತಾರಾ ಸಂಸದೆ

Spread the love

ಬಿಜೆಪಿ ಸೇರ್ತಾರಾ ಸಂಸದೆ

ಯುವ ಭಾರತ ಸುದ್ದಿ ಬೆಂಗಳೂರು :
ಮಂಡ್ಯ ಸಂಸದೆ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಬಿಜೆಪಿ ಸೇರ್ಪಡೆ ಕುರಿತು ಹಲವು ದಿನಗಳ ಹಿಂದೆ ವದಂತಿ ಹರಡಿತ್ತು. ಈಗ ಈ ವದಂತಿಗೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ.

ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅವರು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಕೂತುಹಲ ಹಲವು ದಿನಗಳಿಂದ ಮನೆ ಮಾಡಿದೆ. ಕೊನೆಗೂ ಇದಕ್ಕೆ ಉತ್ತರ ದೊರೆಯುತ್ತದಾ ?
ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಮಾ. 11 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ . ಈ ಸಂದರ್ಭದಲ್ಲಿ ಮಂಡ್ಯದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ . ಮೋದಿ ಸಮ್ಮುಖದಲ್ಲೇ ಬಿಜೆಪಿ ಸೇರಬೇಕು ಎನ್ನುವುದು ಸುಮಲತಾ ಅವರ ಆಸೆಯಾಗಿದೆ . ಅದರಂತೆ ಮಾ . 11 ರಂದು ನರೇಂದ್ರ ಮೋದಿ ನೇತೃತ್ವದಲ್ಲಿ ಕೇಸರಿ ಪಾಳಯ ಸೇರಿಕೊಳ್ಳಬಹುದು ಎಂದು ವರದಿಯಾಗಿದೆ. ಒಟ್ಟಾರೆ, ಮುಂದಿನ ಬೆಳವಣಿಗೆಗಳ ಬಗ್ಗೆ ಕಾದು ನೋಡಬೇಕಿದೆ.


Spread the love

About Yuva Bharatha

Check Also

ಸವದತ್ತಿ ಪಟ್ಟಣದಲ್ಲಿ ವಿಜಯ ಸಂಕಲ್ಪ ಅಭಿಯಾನ ಯಶಸ್ವಿ

Spread the loveಸವದತ್ತಿ ಪಟ್ಟಣದಲ್ಲಿ ವಿಜಯ ಸಂಕಲ್ಪ ಅಭಿಯಾನ ಯಶಸ್ವಿ ಯುವ ಭಾರತ ಸುದ್ದಿ ಸವದತ್ತಿ : ಸವದತ್ತಿ ಪಟ್ಟಣದಲ್ಲಿ …

Leave a Reply

Your email address will not be published. Required fields are marked *

eleven − ten =