Breaking News

Yuva Bharatha

ಲಿಂಗರಾಜ ಕಾಲೇಜಿನಲ್ಲಿ ವಿಶ್ವಮಹಿಳಾ ದಿನಾಚರಣೆ ಸಂಭ್ರಮ

ಲಿಂಗರಾಜ ಕಾಲೇಜಿನಲ್ಲಿ ವಿಶ್ವಮಹಿಳಾ ದಿನಾಚರಣೆ ಸಂಭ್ರಮ ಯುವ ಭಾರತ ಸುದ್ದಿ ಬೆಳಗಾವಿ : ಮಹಿಳೆಯರು ಜಾಗತಿಕವಾಗಿ ಅಗಾಧ ಸಾಧನೆಯನ್ನು ಮಾಡಿದ್ದಾರೆ. ಇಂದು ಅವರು ಸ್ವಾವಲಂಬಿಗಳಾಗಿ ಜೀವನವನ್ನು ನಡೆಸುವಂತರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕೆಂದು ರಾಣಿ ಚೆನ್ನಮ್ಮ ಬ್ಯಾಂಕ್ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಹೇಳಿದರು. ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸಾಧನೆಯ ಶಿಖರವನ್ನು ಏರಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆ. …

Read More »

ಇಟಗಿ : ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ ಆಫ್ ಸೊಸೈಟಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಇಟಗಿ : ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ ಆಫ್ ಸೊಸೈಟಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಯುವ ಭಾರತ ಸುದ್ದಿ ಇಟಗಿ :ಮನೆಯಲ್ಲಿ ತಾಯಿಂದಿರು ಒಳ್ಳೆಯ ಸಂಸ್ಕಾರಗಳನ್ನು ಕಲಿಸಬೇಕು ಎಂದು ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ ಆಫ್ ಸೊಸೈಟಿ ಅಧ್ಯಕ್ಷೆ ಅಂಜನಾ ಹೊನ್ನಿದಿಬ್ಬ ಹೇಳಿದರು. ಇಟಗಿ ಗ್ರಾಮದ ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ ಆಫ್ ಸೊಸೈಟಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಪ್ರತಿ …

Read More »

KSLU ವಲಯ ಮಟ್ಟದ ಯುವಜನೋತ್ಸವದಲ್ಲಿ ರಾಜಾ ಲಖಮಗೌಡ ವಿದ್ಯಾರ್ಥಿಗಳಿಗೆ ಬಹುಮಾನ

KSLU ವಲಯ ಮಟ್ಟದ ಯುವಜನೋತ್ಸವದಲ್ಲಿ ರಾಜಾ ಲಖಮಗೌಡ ವಿದ್ಯಾರ್ಥಿಗಳಿಗೆ ಬಹುಮಾನ ಯುವ ಭಾರತ ಸುದ್ದಿ ಬೆಳಗಾವಿ : ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಕಾಲೇಜು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಜಮಖಂಡಿಯ ಬಿಎಲ್ ಇಡಿ ಕಾನೂನು ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಹುಬ್ಬಳ್ಳಿ ವಲಯ ಮಟ್ಟದ ಯುವಜನೋತ್ಸವದಲ್ಲಿ ಬಹುಮಾನ ಪಡೆದರು. ಲಘು ಗಾಯನದ ಏಕವ್ಯಕ್ತಿ ಗಾಯನದಲ್ಲಿ ನಿದಾ ಬಿಜಾಪುರ ಪ್ರಥಮ, ಪವನ್ ಶಿರೋಳ್ ಮತ್ತು ಮನೋಜ್ …

Read More »

Nonstop ಬೆಳಗಾವಿ-ಕೊಲ್ಹಾಪುರ ನಡುವೆ ಅರ್ಧ ತಾಸಿಗೊಂದು ಬಸ್

Nonstop ಬೆಳಗಾವಿ-ಕೊಲ್ಹಾಪುರ ನಡುವೆ ಅರ್ಧ ತಾಸಿಗೊಂದು ಬಸ್ ಬೆಳಗ್ಗೆ 7 ರಿಂದ ಸಂಜೆ 6:30 ಎಡಬಿಡದೇ ಓಡಾಟ ಯುವ ಭಾರತ ಸುದ್ದಿ ಬೆಳಗಾವಿ : ಮಹಾಲಕ್ಷ್ಮೀ ದರ್ಶನಕ್ಕೆ‌ ಹೋಗುವ ಭಕ್ತಾದಿಗಳು ಮತ್ತು ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ-ಕೊಲ್ಲಾಪುರ ನಡುವೆ ತಡೆರಹಿತ(Non Stop) ಬಸ್ ಗಳ ಓಡಾಟ ಆರಂಭಿಸಲಾಗಿದೆ. ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳಿಂದ ಒಟ್ಟು 12ತಡೆರಹಿತ ಬಸ್ಸುಗಳು ಮಾರ್ಚ್ 9ರಂದು ಅಂದರೆ ಗುರುವಾರದಿಂದಲೇ ಪ್ರಾರಂಭವಾಗಿವೆ. ಬೆಳಗ್ಗೆ 7ರಿಂದ ಸಂಜೆ 6:30ರವರೆಗೆ …

Read More »

ಗೊಂಬೆಯಳಲು

ಗೊಂಬೆಯಳಲು ——————— ಸೂತ್ರದಗೊಂಬೆ ಕಣ್ಣೀರಿಟ್ಟಿತು ಕೊನೆಗೂ, ಆಟ ಆಡಲಾಗದೆ ಮೊನ್ನೆ! ಜಗ್ಗಿ-ಬಗ್ಗಿಸಿ, ಅಳ್ಳಾಡಿಸಿ, ನುಜ್ಜು-ಗುಜ್ಜಾಗಿಸಿ ಬಾಯಿಬಡಿಸುವ ಸೂತ್ರಧಾರನಿಗೆ ಮಾರಿಕೊಂಡದ್ದಕ್ಕೆ ತನ್ನತನವನ್ನೆ. ಡಾ. ಬಸವರಾಜ ಸಾದರ. — + —

Read More »

ಗುರುವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಗುರುವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ ಯುವ ಭಾರತ ಸುದ್ದಿ ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಾಳೆ, ಗುರುವಾರ(ಮಾರ್ಚ್‌ 9)ದಿಂದ ಆರಂಭವಾಗಲಿದ್ದು, ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್​ 9- 29 ರವರೆಗೆ ದ್ವಿತೀಯ ಪರೀಕ್ಷೆಗಳು ನಡೆಯಲಿವೆ. ಈ ಬಾರಿ 7,27,387 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ನಡೆಯುವ ರಾಜ್ಯದ 1,109 ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ …

Read More »

ವಿಧಾನಸಭೆ ಚುನಾವಣೆ 2023: ರಾಜ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತರ ತಂಡ ಭೇಟಿ

ವಿಧಾನಸಭೆ ಚುನಾವಣೆ 2023: ರಾಜ್ಯಕ್ಕೆ  ಮುಖ್ಯ ಚುನಾವಣಾ ಆಯುಕ್ತರ ತಂಡ ಭೇಟಿ ಯುವ ಭಾರತ ಸುದ್ದಿ ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ನೇತೃತ್ವದ ತಂಡ ವಿಧಾನಸಭಾ ಚುನಾವಣೆ ಪೂರ್ವಸಿದ್ಧತೆ ವೀಕ್ಷಣೆಗಾಗಿ ಮಾರ್ಚ್‌ 9ರಂದು ಬೆಂಗಳೂರಿಗೆ ಆಗಮಿಸಲಿದೆ. ಚುನಾವಣಾ ಆಯುಕ್ತರಾದ ಅನೂಪಚಂದ್ರ ಪಾಂಡೆ, ಅರುಣ್ ಗೋಯಲ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ನಿಯೋಗದಲ್ಲಿ ಇರುತ್ತಾರೆ. 9ರಂದು ಮಾರ್ಚ್‌ ರಾಜ್ಯದ …

Read More »

ವಿಕಲಚೇತನ ವಿದ್ಯಾರ್ಥಿಗಳು ಸಂಕಲ್ಪ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುನ್ನಡೆಯಬೇಕು: ಕಿರಣ ಜಾಧವ

ವಿಕಲಚೇತನ ವಿದ್ಯಾರ್ಥಿಗಳು ಸಂಕಲ್ಪ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುನ್ನಡೆಯಬೇಕು: ಕಿರಣ ಜಾಧವ ಯುವ ಭಾರತ ಸುದ್ದಿ ಬೆಳಗಾವಿ : ಅನೇಕ ಅಂಗವಿಕಲರು ಅಂಗವೈಕಲ್ಯಕ್ಕೆ ಹೆದರದೆ ಪರಿಸ್ಥಿತಿಯನ್ನು ಮೆಟ್ಟಿನಿಂತು ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಇಂತಹವರ ಮಾದರಿಯನ್ನು ಕಣ್ಣೆದುರು ಇಟ್ಟುಕೊಂಡು ಸಾಮಾನ್ಯ ವಿಕಲಚೇತನರು ದೃಢ ಸಂಕಲ್ಪ, ಅವಿರತ ದುಡಿಮೆಯಿಂದ ಜೀವನದಲ್ಲಿ ಮುನ್ನಡೆಯಬೇಕು ಎಂದು ಬಿಜೆಪಿ ರಾಜ್ಯ ಒಬಿಸಿ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಸಕಲ ಮರಾಠ ಸಮಾಜದ ಸಂಚಾಲಕ ಕಿರಣ ಜಾಧವ ಹೇಳಿದರು. ಶಹಾಪುರದ …

Read More »

ಕುರುಬ ಸಮಾಜಕ್ಕೆ 40 ಸ್ಥಾನ ನೀಡಲು ಒತ್ತಾಯ

ಕುರುಬ ಸಮಾಜಕ್ಕೆ 40 ಸ್ಥಾನ ನೀಡಲು ಒತ್ತಾಯ ಯುವ ಭಾರತ ಸುದ್ದಿ‌ ಬೆಂಗಳೂರು : 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಿಯಲ್ಲಿ ಕುರುಬ ಸಮುದಾಯಕ್ಕೆ ಮೂರು (ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್) ರಾಜಕೀಯ ಪಕ್ಷಗಳು ಕನಿಷ್ಠ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿದೆ. ಕರ್ನಾಟಕದಲ್ಲಿ ಪ್ರಬಲ ಜಾತಿಗಳ ಪೈಕಿ 3ನೇ ಸ್ಥಾನದಲ್ಲಿರುವ ಕುರುಬ ಸಮುದಾಯವು ಸುಮಾರು 75 ಅಧಿಕ ಜನಸಂಖ್ಯೆ ಹೊಂದಿದೆ, ರಾಜ್ಯದ 150 ಕ್ಕೂ ಹೆಚ್ಚಿನ ವಿಧಾನಸಭಾ …

Read More »

ಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ !

ಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ ! ಉದ್ಯಮ ಕ್ಷೇತ್ರದಲ್ಲಿ ಪುರುಷರದ್ದೆ ಸಿಂಹಪಾಲು. ಆದರೆ ಅಲ್ಲೊಬ್ಬರು, ಇಲ್ಲೊಬ್ಬರು ಮಹಿಳೆಯರು ಆಗಾಗ ಸುದ್ದಿ ಮಾಡುತ್ತಿರುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಸಾಧಕಿಯೊಬ್ಬರು ಇದೀಗ ತಮ್ಮ ಕೆಲಸದಿಂದ ಗುರುತಿಸಲ್ಪಟ್ಟಿದ್ದಾರೆ. ಸತತ ಪ್ರಯತ್ನ, ಆತ್ಮವಿಶ್ವಾಸ, ಎಂಥದೇ ಸಮಸ್ಯೆಯಾದ್ರೂ ಅದನ್ನು ಮೆಟ್ಟಿ ನಿಂತು ಕ್ಷಣಾರ್ಧದಲ್ಲಿ ಮುನ್ನುಗ್ಗುವ ಛಲ, ಕಾಯಕದ ಮೇಲೆ ಅಚಲವಾದ ಶ್ರದ್ಧೆ ಇಟ್ಟರೆ ಎಂಥ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಇಲ್ಲೊಬ್ಬ ಮಹಿಳೆಯೇ ಸರಿಸಾಟಿಯಾಗಿ …

Read More »