Breaking News

Yuva Bharatha

16 ಕೋಟಿ ರೂ. ಆರ್‍ಡಿಪಿಆರ್ ಇಲಾಖೆಯ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

16 ಕೋಟಿ ರೂ. ಆರ್‍ಡಿಪಿಆರ್ ಇಲಾಖೆಯ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಚ ತಿಂಗಳ ಅಂತ್ಯದೊಳಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಮೂಡಲಗಿ : ರಸ್ತೆಗಳ ಅಭಿವೃದ್ಧಿಗಾಗಿ ಆರ್‍ಡಿಪಿಆರ್ ಇಲಾಖೆಯಿಂದ 16 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಮಾರ್ಚ ತಿಂಗಳೊಳಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ …

Read More »

ಉದ್ಯಮಿ ಅಪಹರಣ : ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ; ಕೊನೆಗೂ ಇಬ್ಬರು ವೈದ್ಯರ ಬಂಧನ

ಉದ್ಯಮಿ ಅಪಹರಣ : ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ; ಕೊನೆಗೂ ಇಬ್ಬರು ವೈದ್ಯರ ಬಂಧನ ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ನಗರದ ಉದ್ಯಮಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವೈದ್ಯರಿಬ್ಬರನ್ನು ಕೊನೆಗೂ ಬಂಧಿಸಿದ್ದಾರೆ. ನಗರದ ಖ್ಯಾತ ವೈದ್ಯ ಸಚಿನ್ ಶಂಕರ ಶಿರಗಾವಿ ಮತ್ತು ಹುಕ್ಕೇರಿ ತಾಲೂಕು ಶಿರಡಾಣದ ಆಯುರ್ವೇದ ವೈದ್ಯ ಶಿವಾನಂದ ಕಾಡಗೌಡ ಪಾಟೀಲ ಬಂಧಿತರಾಗಿದ್ದಾರೆ. ಗೋಕಾಕ ನಗರದ ಉದ್ಯಮಿ ರಾಜು/ಮುನ್ನಾ ಝಂವಾರ ಅವರನ್ನು ಶುಕ್ರವಾರ ಅಪಹರಿಸಿ …

Read More »

ಧರ್ಮಮತ

ಧರ್ಮಮತ ————— ಗಟ್ಟಿ ಬಾಳು ಒಡೆದು ನುಚ್ಚಾಗಿಸುವುದು ಕೆಟ್ಟ ಮತ, ಒಡೆದುದನ್ನು ಒಂದಾಗಿಸಿ ಬೆಸೆವುದು ಮಹಾಧರ್ಮ; ಎರಡೂ ಒಂದೇ ಎನ್ನುವುದು ಮನುಷ್ಯನ ಸ್ವಾರ್ಥದ ಕರ್ಮ ಡಾ. ಬಸವರಾಜ ಸಾದರ. — + —

Read More »

ಆಧಾರ್ ನವೀಕರಣ:ಸ್ಪಷ್ಟತೆಯಿರಲಿ

ಆಧಾರ್ ನವೀಕರಣ:ಸ್ಪಷ್ಟತೆಯಿರಲಿ ಇತ್ತೀಚೆಗೆ ಮಾಧ್ಯಮಗಳಲ್ಲಿ, ಹತ್ತು ವರ್ಷಗಳ ಹಿಂದೆ ಮಾಡಿಸಿದ ಆಧಾರ್ ಕಾರ್ಡ್‌ಗಳನ್ನು ನವೀಕರಣ ಮಾಡಬೇಕೆಂದು ಸೂಚಿಸಿರುವ ವರದಿಗಳು ಬರುತ್ತಿವೆ. ತುಂಬಾ ಹಳೆಯ ಫೊಟೋ, ವಿಳಾಸ ಮತ್ತಿತರ ವಿವರಗಳನ್ನು ನವೀಕರಿಸುವ ಉದ್ದೇಶದಿಂದ ಇದನ್ನು ಮಾಡುತ್ತಿರಬಹುದು, ಆದರೆ ಈ ವಿಷಯದಲ್ಲಿ ಬಹಳಷ್ಟು ಗೊಂದಲಗಳಿವೆ. ಮೊದಲನೇಯದಾಗಿ ಮೂಲ ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷ ಮೀರಿದ ಪ್ರಕರಣಗಳಲ್ಲಿ ಮಾತ್ರ ನವೀಕರಣ ಮಾಡಬೇಕೇ ಅಥವಾ ಯಾವುದಾದರೂ ಕಾರಣದಿಂದ ಆಧಾರ್‌ನಲ್ಲಿ ಬದಲಾವಣೆ ಮಾಡಿದ್ದರೆ ಆ ದಿನದಿಂದ …

Read More »

ಕೊನೆಗೂ ಬೆಳಗಾವಿ-ಧಾರವಾಡ ರೈಲು ಮಾರ್ಗ ಕೆಲಸ ಶುರು !

ಕೊನೆಗೂ ಬೆಳಗಾವಿ-ಧಾರವಾಡ ರೈಲು ಮಾರ್ಗ ಕೆಲಸ ಶುರು !   ಯುವ ಭಾರತ ಸುದ್ದಿ ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಯೋಜನೆಗೆ ಮುಹೂರ್ತ ಕೂಡಿ ಬಂದಿದೆ. ಬಹು ಜನರ ಬೇಡಿಕೆಯ ನಿರೀಕ್ಷೆಯಾಗಿರುವ ಧಾರವಾಡ-ಬೆಳಗಾವಿ ನೇರ ಹೊಸ ರೈಲು ಮಾರ್ಗ ಯೋಜನೆಗೆ ಮುಹೂರ್ತ ಕೂಡಿ ಬಂದಿದ್ದು, ಮೊದಲ ಹಂತದಲ್ಲಿ ಕ್ಯಾರಕೊಪ್ಪ-ಮಮ್ಮಿಗಟ್ಟಿ ಮಧ್ಯೆ ಹಳಿ ನಿರ್ಮಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಧಾರವಾಡ-ಬೆಳಗಾವಿ ನೇರ ಹೊಸ ಮಾರ್ಗ ನಿರ್ಮಾಣಕ್ಕೆ …

Read More »

ರೈತೋದ್ಧಾರ

ರೈತೋದ್ಧಾರ —————– ಬೇಕಿಲ್ಲ ರೈತನಿಗೆ ಯಾರಿಂದಲೂ ಕರುಣೆ-ಆಶ್ವಾಸನೆ, ಧನ-ದಾನ; ಸಿಕ್ಕರೆ ಸಾಕು ಬೆವರಿಂದ ಬೆಳೆದುಕೊಡುವ ಅವನ ಅನ್ನಫಲಕ್ಕೆ ಯೋಗ್ಯ ಬೆಲೆ-ಮಾನ. ಡಾ. ಬಸವರಾಜ ಸಾದರ. — + —

Read More »

17 ರಿಂದ ಬಡೇಕೊಳ್ಳಮಠದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

17 ರಿಂದ ಬಡೇಕೊಳ್ಳಮಠದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಯುವ ಭಾರತ ಸುದ್ದಿ ಬಡೆಕೊಳ್ಳಮಠ: ಬೆಳಗಾವಿ ತಾಲೂಕಿನ ಶ್ರೀ ಪಾವನಕ್ಷೇತ್ರ ಬಡೇಕೊಳ್ಳಮಠದ ಪವಾಡ ಪುರುಷ ಶ್ರೀ ನಾಗೇಂದ್ರ ಮಹಾಸ್ವಾಮಿಗಳವರ ಮಹಾಶಿವರಾತ್ರಿಯ ಜಾತ್ರೆಯು ಪ್ರತಿ ವರ್ಷದಂತೆ ಐದು ದಿನಗಳ ಕಾರ್ಯಕ್ರಮಗಳೊಂದಿಗೆ ಶ್ರದ್ದೆ ಮತ್ತು ಸಡಗರದಿಂದ ಜರಗಲಿದೆ. ಈ ಜಾತ್ರಾ ನಿಮಿತ್ತ ಕಾರ್ಯಕ್ರಮಗಳನ್ನು ಆಯೋಜನೆಗೊಂಡಿದ್ದು, ಭಕ್ತ ವೃಂದವು ಆಗಮಿಸಿ ಪೂಜ್ಯ ಅಜ್ಜನವರ ಆರ್ಶಿವಾದ ಅನುಗ್ರಹಕ್ಕೆ ಪಾತ್ರರಾಗಿ ಕೃತಾರ್ಥರಾಗಬೇಕು. ಶುಕ್ರವಾರ ದಿನಾಂಕ 17 ರಂದು ಸಾಯಂಕಾಲ …

Read More »

ಮದ್ಲೂರು ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ : ಜಾತ್ರಾ ಕಾರ್ಯಕ್ರಮಗಳು ಫೆ.17 ರಿಂದ

ಮದ್ಲೂರು ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ : ಜಾತ್ರಾ ಕಾರ್ಯಕ್ರಮಗಳು ಫೆ.17 ರಿಂದ ಯುವ ಭಾರತ ಸುದ್ದಿ ಬೆಳಗಾವಿ: ಯರಗಟ್ಟಿ ತಾಲೂಕಿನ ಮದ್ಲೂರು ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ.17 ರಿಂದ ಫೆ.19 ರ ವರೆಗೆ ವಿವಿಧ ಸಾಂಸ್ಕೃತಿಕ, ಹಾಗೂ ಕ್ರೀಡಾ ಕಾರ್ಯಕ್ರಮ ಜರುಗಲಿವೆ. ಫೆ.18 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಕಲ್ಮೇಶ್ವರ ಗದ್ದುಗೆ ಪೂಜೆ, ವೀಣಾ ಪೂಜೆಯೊಂದಿಗೆ ಪ್ರವಚನ, ಭಜನಾ ಮಂಡಳಿಯಿಂದ ಭಜನಾ …

Read More »

ಗೋಕಾಕ : ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಗೋಕಾಕ : ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಯುವ ಭಾರತ ಸುದ್ದಿ ಗೋಕಾಕ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶ ಸಾಧಿಸಲು ವಿವಿಧ ಕ್ರೀಯಾತ್ಮಕ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು ಸೋಮವಾರದಂದು ನಗರದ ಮಯೂರ ಶಾಲೆಯ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ …

Read More »

ಸಂಚಾರಿ ನಿಯಮ ಉಲ್ಲಂಘನೆ : ವಾರ ಗಡುವು ವಿಸ್ತರಣೆ

ಸಂಚಾರಿ ನಿಯಮ ಉಲ್ಲಂಘನೆ : ವಾರ ಗಡುವು ವಿಸ್ತರಣೆ ಯುವ ಭಾರತ ಸುದ್ದಿ ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘಿಸಿದ್ದ ಪ್ರಕರಣಗಳಿಗೆ ವಿಧಿಸಿದ್ದ ದಂಡದ ಪೈಕಿ ಶೇ .50 ರಷ್ಟು ರಿಯಾಯಿತಿ ನೀಡಿದ್ದ ಅವಧಿಯನ್ನು ಮತ್ತೆರಡು ವಾರ ವಿಸ್ತರಿಸುವ ಕುರಿತು ಅಧಿಕೃತ ತೀರ್ಮಾನ ಕೈಗೊಳ್ಳಲಾಗುತ್ತದೆಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ತಿಳಿಸಿದ್ದಾರೆ . ಈ ಕುರಿತು ಸಾರಿಗೆ ಇಲಾಖೆಯಿಂದ ಪತ್ರ ಬಂದಿದ್ದು , ಜನಸಾಮಾನ್ಯರೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತಾವನೆಗೆ …

Read More »