Breaking News

Yuva Bharatha

ಮೇಲ್ಮನೆ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ

ಮೇಲ್ಮನೆ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ ಯುವ ಭಾರತ ಸುದ್ದಿ ಬೆಳಗಾವಿ : ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಹಿರಿಯ ನಾಯಕ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ. ಹಂಗಾಮಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರು ಹೊರಟಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಹೊರಟ್ಟಿ ಅವರು ಮೂರನೇ ಬಾರಿಗೆ ಹುದ್ದೆ ಸಭಾಪತಿ ಸ್ಥಾನ ಅಲಂಕರಿಸಿದಂತಾಗಿದೆ. ಇಂದು ಕಲಾಪ ಪ್ರಾರಂಭವಾಗುತ್ತಿದ್ದಂತೆ ಚುನಾವಣಾ ಪ್ರಕ್ರಿಯೆ ನಡೆಸಿದ ಹೊರಟ್ಟಿಯವರ ಅವಿರೋಧ ಆಯ್ಕೆಯನ್ನು ಹಂಗಾಮಿ ಸಭಾಪತಿ‌ …

Read More »

ಆಯುರ್ವೇದದ ಗುಟ್ಟು ಅರಿತು ಆರೋಗ್ಯವಂತರಾಗಿ-ಡಾ.ಬಸವರಾಜ ಚವ್ಹಾಣ!

ಆಯುರ್ವೇದದ ಗುಟ್ಟು ಅರಿತು ಆರೋಗ್ಯವಂತರಾಗಿ-ಡಾ.ಬಸವರಾಜ ಚವ್ಹಾಣ! ಬಸವನಬಾಗೇವಾಡಿ:  ಆರೋಗ್ಯದ ಗುಟ್ಟು ಆಯುರ್ವೇದದಲ್ಲಿ ಅಡಗಿರುವದನ್ನು ಪ್ರತಿಯೊಬ್ಬರೂ ಅರಿತುಕೊಂಡರೆ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಮಾಡುವ ಮೂಲಕ ಬದಕನ್ನು ಉಜ್ವಲಗೊಳಿಸಬಹುದು ಎಂದು ಸ್ಥಳೀಯ ಜಗದಂಬಾ ಆಯುರ್ವೇದ ಆಸ್ಪತ್ರೆಯ ಡಾ.ಬಸವರಾಜ ಚವ್ಹಾಣ ಹೇಳಿದರು. ಬಸವನಬಾಗೇವಾಡಿಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಚವ್ಹಾಣ ಮಾತನಾಡಿದರು. ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ …

Read More »

ರಾಯಚೂರು, ಧಾರವಾಡದಲ್ಲಿ ಏಮ್ಸ್ : ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದ ರಾಜ್ಯ

ರಾಯಚೂರು, ಧಾರವಾಡದಲ್ಲಿ ಏಮ್ಸ್ : ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದ ರಾಜ್ಯ ಯುವ ಭಾರತ ಸುದ್ದಿ ಬೆಳಗಾವಿ : ರಾಜ್ಯದ ಧಾರವಾಡ ಮತ್ತು ರಾಯಚೂರಿನಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಆಸ್ಪತ್ರೆಯನ್ನು ಸ್ಥಾಪಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರ ಪ್ರಶ್ನೆಗೆ ಆರೋಗ್ಯ ಸಚಿವ ಸುಧಾಕರ್ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಉತ್ತರ …

Read More »

ಸ್ಫೋಟಗೊಳ್ತು ಕೊರೊನಾ !

ಸ್ಫೋಟಗೊಳ್ತು ಕೊರೊನಾ ! ಯುವ ಭಾರತ ಸುದ್ದಿ ದೆಹಲಿ :ಚೀನಾ ಸೇರಿದಂತೆ ವಿಶ್ವದ ಕೆಲ ದೇಶಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಸ್ಫೋಟಗೊಂಡಿವೆ. ಇದರಿಂದ ಜನ ತಲ್ಲಣಗೊಳ್ಳುವಂತಾಗಿದೆ. ಭಾರತಕ್ಕೆ ನಾಲ್ಕನೇ ಅಲೆಯ ಭೀತಿ ಎದುರಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಆದ್ದರಿಂದ ಕೊರೊನಾ ವೈರಸ್ ನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ …

Read More »

ಬಾಲಚಂದ್ರ ಜಾರಕಿಹೊಳಿ ಅವರು ನಮ್ಮ ಬಿಜೆಪಿ ಪವರ್ ಫುಲ್ ಲೀಡರ್- ಆರ್.ಅಶೋಕ್

ಬಾಲಚಂದ್ರ ಜಾರಕಿಹೊಳಿ ಅವರು ನಮ್ಮ ಬಿಜೆಪಿ ಪವರ್ ಫುಲ್ ಲೀಡರ್- ಆರ್.ಅಶೋಕ್ ಯುವ ಭಾರತ ಸುದ್ದಿ ಮೂಡಲಗಿ : ಮೂಡಲಗಿ ತಾಲೂಕಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ನೂತನ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ …

Read More »

ಬೆಳಗಾವಿ ಅಧಿವೇಶನದಲ್ಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಅಂಗೀಕಾರಕ್ಕೆ ನಾಡೋಜ ಡಾ.ಮಹೇಶ ಜೋಶಿ ಆಗ್ರಹ

ಬೆಳಗಾವಿ ಅಧಿವೇಶನದಲ್ಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಅಂಗೀಕಾರಕ್ಕೆ ನಾಡೋಜ ಡಾ.ಮಹೇಶ ಜೋಶಿ ಆಗ್ರಹ ಯುವ ಭಾರತ ಸುದ್ದಿ ಬೆಂಗಳೂರು: ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ; ವನ್ನು ಕಾನೂನು ಮಾಡುವ ಎಲ್ಲಾ ಭರವಸೆಯನ್ನು ಸರಕಾರ ನೀಡಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡದ ಬೆಳವಣಿಗೆಗೆ ಅಸ್ತ್ರವಾಗಿರುವ ಕಾನೂನು ಬರಲಿದೆ ಎನ್ನುವ ಭರವಸೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ …

Read More »

ಮರಾಠಾ ಸಮಾಜವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟ ವತಿಯಿಂದ ಪ್ರತಿಭಟನೆ!

ಮರಾಠಾ ಸಮಾಜವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟ ವತಿಯಿಂದ ಪ್ರತಿಭಟನೆ!   ಯುವ ಭಾರತ ಸುದ್ದಿ ಬೆಳಗಾವಿ : ಮರಾಠಾ ಸಮಾಜವನ್ನು 3 ಬಿ ಯಿಂದ 2 ಎ ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟ ವತಿಯಿಂದ ಸುವರ್ಣ ಸೌಧ ಎದರುಗಡೆ ಕೊಂಡಸಕೊಪ್ಪದಲ್ಲಿ ಮಂಗಳವಾರದಂದು ಬೆಂಗಳೂರಿನ ಗವಿಪುರ ಮಠದ ಮರಾಠಾ ಸಮಾಜದ ಸ್ವಾಮಿಜಿಗಳಾದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಗಳ …

Read More »

ಪುಸ್ತಕ, ಬ್ಯಾಗ್ ವಿತರಣೆ!

ಪುಸ್ತಕ, ಬ್ಯಾಗ್ ವಿತರಣೆ!   ಯುವ ಭಾರತ ಸುದ್ದಿ ಗೋಕಾಕ : ತಾಲೂಕಿನ ಬಳೋಬಾಳ ಗ್ರಾಮದ ಬಸವ ಯೋಗ ಮಂಟಪದಲ್ಲಿರುವ ಅನಾಥ ಮಕ್ಕಳಿಗೆ ಮಂಗಳವಾರದಂದು ಇಲ್ಲಿನ ಶಿವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ಶಾಲಾ ಬ್ಯಾಗ್ , ಬುಕ್ , ದಿನಸಿ ವಸ್ತು ಸೇರಿದಂತೆ ಇತರೆ ಅವಶ್ಯಕ ವಸ್ತುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮತೋಶ್ರೀ ನೀಲಾಂಬಿಕಾದೇವಿ , ಟ್ರಸ್ಟಿನ ಮುಖ್ಯಸ್ಥ ದೇವು ಬೆಳ್ಳಂಕಿಮಠ , ರಾಜು ಬೆಳ್ಳಂಕಿಮಠ, ಭಗವಂತ್ …

Read More »

ಬೆಳಗಾವಿಯಲ್ಲಿ ನಡೆಯಲಿರುವ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಸವನ ಬಾಗೇವಾಡಿ ತಾಲೂಕಿನಿಂದ 15 ಸಾವಿರಕ್ಕೂ ಹೆಚ್ಚು ಜನ: ಶಂಕರಗೌಡ ಬಿರಾದಾರ್!

ಬೆಳಗಾವಿಯಲ್ಲಿ ನಡೆಯಲಿರುವ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಸವನ ಬಾಗೇವಾಡಿ ತಾಲೂಕಿನಿಂದ 15 ಸಾವಿರಕ್ಕೂ ಹೆಚ್ಚು ಜನ: ಶಂಕರಗೌಡ ಬಿರಾದಾರ್! ಬಸವನಬಾಗೇವಾಡಿ: ಡಿಸೆಂಬರ್ 22ರಂದು ಬೆಳಗಾವಿಯ ಸುವರ್ಣಸೌಧದ ಎದುರಿಗೆ ನಡೆಯಲಿರುವ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಸವನ ಬಾಗೇವಾಡಿ ತಾಲೂಕಿನಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶಂಕರಗೌಡ ಬಿರಾದಾರ್ ಹೇಳಿದರು. ಪಟ್ಟಣದ ಪ್ರವಾಸಿ …

Read More »

ಎಡಗೈ, ಬಲಗೈ ಸಮುದಾಯದ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ; ರಾಜು ಪಡಗಾನೂರ ಆಗ್ರಹ!

ಎಡಗೈ, ಬಲಗೈ ಸಮುದಾಯದ ಜನಪ್ರತಿನಿಧಿಗಳು ರಾಜೀನಾಮೆ ನೀಡಿ : ರಾಜು ಪಡಗಾನೂರ ಆಗ್ರಹ!     ಯುವ ಭಾರತ ಸುದ್ದಿ ಇಂಡಿ : ಸುಮಾರು ೩೦ ದಶಕಗಳು ಕಳೆದರು ಒಳ ಮೀಸಲಾತಿ ಜಾರಿಗೆ ತರುವಲ್ಲಿ ವಿಫಲರಾದ ರಾಜ್ಯದ ಪಜಾ ಎಡಗೈ ಹಾಗೂ ಬಲಗೈ ಸಮುದಾಯದ ಶಾಸಕರು,ಸಚಿವರು ಹಾಗೂ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಬೇಕು.ಎಸ್ಸಿ ಸಮುದಾಯದ ಹೆಸರಿನಲ್ಲಿ ಮೀಸಲಾತಿಯಲ್ಲಿ ಅಧಿಕಾರ ಹಿಡಿದು ಅಧಿಕಾರ ಸಿಕ್ಕ ಮೇಲೆ ಸಮಾಜದ …

Read More »