ನಗರಸಭೆ ಉಪಚುನಾವಣೆಯ ಪ್ರಚಾರಕ್ಕೆ ಯುವ ಅಭ್ಯರ್ಥಿ ಅಭಿಷೇಕನಿಂದ ಭರ್ಜರಿ ಚಾಲನೆ.! ಯುವ ಭಾರತ ಸುದ್ದಿ, ಗೋಕಾಕ: ನಗರಸಭೆ ಉಪಚುನಾವಣೆಯ ಪ್ರಚಾರಕ್ಕೆ ಭರ್ಜರಿ ಚಾಲನೆ ಸಿಕ್ಕಿದ್ದು, ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎಂದು ಮತದಾರರನ್ನು ಸೆಳೆಯಲು ಪೈಪೋಟಿ ಜೋರಾಗಿ ನಡೆಸಿದ್ದು ವಾರ್ಡ ನಂ 13ರ ಯುವ ಅಭ್ಯರ್ಥಿಯೋರ್ವ ಸೈಲೆಂಟಾಗಿ ಪ್ರಚಾರದಲ್ಲಿ ತೋಡಗಿ ಮತದಾರರ ಗಮನ ಸೆಳೆಯುತ್ತಿದ್ದಾರೆ. ನಗರಸಭೆಯಲ್ಲಿ ದಳವಾಯಿ ಮನೆತನದ ಮೂರನೇ ಕುಡಿ ಸದ್ಯಕ್ಕೆ ರಾಜಕೀಯ ಎಂಟ್ರಿ ಪಡೆದಿದ್ದು, …
Read More »ರಮೇಶ ಜಾರಕಿಹೊಳಿ ಐದು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.-ಜಿ ಬಿ ಬಳಗಾರ !
ಯುವ ಭಾರತ ಸುದ್ದಿ, ಗೋಕಾಕ: ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ತಾಲೂಕಿನ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಮುಂದಾಗಿದ್ದು ಹೆಮ್ಮೆಯ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು. ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ಗೃಹ ಕಚೇರಿಯಲ್ಲಿ ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ಅಭಿಮಾನಿಗಳು …
Read More »ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ದಿ.20ರಂದು ನಡೆಯಲಿದೆ!
ಯುವ ಭಾರತ ಸುದ್ದಿ, ಗೋಕಾಕ್: ಇಲ್ಲಿಯ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ದಿ.20ರಂದು ನಡೆಯಲಿದೆ. ನಗರದ ಸಮುದಾಯ ಭವನದಲ್ಲಿ ದಿ.20೦ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಪ್ರಮುಖರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯ ಜೊತೆಗೆ ಸಮಾಜದ ಏಳ್ಗೆ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳ ಕುರಿತು ಕಾರ್ಮಿಕ …
Read More »ಶ್ರೀ ಬಾಳಯ್ಯ ಮಹಾಸ್ವಾಮಿಜಿಯವರ 18ರಂದು ಶಿವರಾತ್ರಿ ಜಾತ್ರಾ ಮಹೋತ್ಸವ.!
ಶ್ರೀ ಬಾಳಯ್ಯ ಮಹಾಸ್ವಾಮಿಜಿಯವರ 18ರಂದು ಶಿವರಾತ್ರಿ ಜಾತ್ರಾ ಮಹೋತ್ಸವ.! ಯುವ ಭಾರತ ಸುದ್ದಿ, ಗೋಕಾಕ್: ತಾಲೂಕಿನ ಪಂಚ ಮಠಗಳಲ್ಲಿ ಒಂದಾದ ತವಗ ಮಠದ ಶ್ರೀ ಬಾಳಯ್ಯ ಮಹಾಸ್ವಾಮಿಜಿಯವರ ಶಿವರಾತ್ರಿ ಜಾತ್ರಾ ಮಹೋತ್ಸವ ಇದೆ ದಿ.18 ಹಾಗೂ ದಿ.19 ರಂದು ಅತಿ ವಿಜೃಂಭಣೆಯಿದ ಜರುಗಲಿದೆ. ಗುರುವಾರ ದಿ.18 ರಂದು ಕರ್ತೃ ಗದ್ದುಗೆಗೆ ಪುಜಾಭಿಷೇಕ, ರಾತ್ರಿ 1೦ಗಂಟೆಗೆ ಸಕಲ ವಾದ್ಯ ಮೇಳಗಳೊಂದಿಗೆ ದೇವರುಗಳನ್ನು ಕರೆ ತರುವದು. ಶುಕ್ರವಾರ ದಿ.19 ರಂದು ಮುಂಜಾನೆ …
Read More »ರಮೇಶ್ ಜಾರಕಿಹೊಳಿವರಿಗೆ ಅನ್ಯಾಯವಾಗಲು ಬಿಡಲ್ಲ..ಮತ್ತೆ ಸಚಿವ ಸ್ಥಾನ ನೀಡಲಾಗುವುದು-ಯಡಿಯೂರಪ್ಪ!
ರಮೇಶ್ ಜಾರಕಿಹೊಳಿವರಿಗೆ ಅನ್ಯಾಯವಾಗಲು ಬಿಡಲ್ಲ.. ಮತ್ತೆ ಸಚಿವ ಸ್ಥಾನ ನೀಡಲಾಗುವುದು-ಯಡಿಯೂರಪ್ಪ! ಯುವ ಭಾರತ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ ಅನ್ಯಾಯವಾಗಲು ಬಿಡಲ್ಲ. ವರಿಷ್ಠರೊಂದಿಗೆ ಚರ್ಚಿಸಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗುವುದು ಎಂದು ತಮ್ಮನ್ನು ಭೇಟಿಯಾದ ಶಾಸಕರ ನಿಯೋಗಕ್ಕೆ ಸಿಎಂ ಭರವಸೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ …
Read More »ತುಮ್ಮರಗುದ್ದಿಯಲ್ಲಿ ರಸ್ತೆ ತಡೆದು ಆಕ್ರೋಶ
ತುಮ್ಮರಗುದ್ದಿಯಲ್ಲಿ ರಸ್ತೆ ತಡೆದು ಆಕ್ರೋಶ ಬೆಳಗಾವಿ: ರಮೇಶ ಜಾರಕಿಹೊಳಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ನಕಲಿ ಸಿಡಿ ಹೊರ ತಂದಿರುವವರ ವಿರುಧ ಕಠಿಣ ಕ್ರಮ ಕೈಗೊಂಡು ಜಾರಕಿಹೊಳಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ರವಿವಾರ ಪ್ರತಿಭಟನೆ ನಡೆಸಲಾಯಿತು. ತುಮ್ಮರಗುದ್ದಿಯಲ್ಲಿ ಬೆಳಗಾವಿ-ಗೋಕಾಕ ಹೆದ್ದಾರಿ ಮೇಲೆ ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು, ನಕಲಿ ಸಿಡಿಯ …
Read More »ಕಲ್ಲಹಳ್ಳಿ ವಿರುದ್ಧ ಉದಗಟ್ಟಿ ಕ್ರಾಸ್ ನಲ್ಲಿ ಪ್ರತಿಭಟನೆ .!
ಯುವ ಭಾರತ ಸುದ್ದಿ ಗೋಕಾಕ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದತೆ ದಿನೇಶ ಕಲ್ಲಹಳ್ಳಿ ವಿರುದ್ಧ ಉದಗಟ್ಟಿ ಕ್ರಾಸ್ ಬಳಿ ಪ್ರತಿಭಟನೆ ನಡೆಸಿದರು. ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಿ ತಾಲೂಕಿನ ಉದಗಟ್ಟಿ ಕ್ರಾಸ್ ಬಳಿ ಬೆಂಬಲಿಗರು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಮ್ಮನಕೂಲ, ತಪಸಿ, ಕಲಾರಕೊಪ್ಪ, ಉದಗಟ್ಟಿ ಗ್ರಾಮದ ರಮೇಶ ಅಭಿಮಾನಿಗಳು ಇದ್ದರು.
Read More »ದಿನೇಶ ಕಲ್ಲಹಳ್ಳಿಯ ಅಣಕು ಶವಯಾತ್ರೆ ನಡೆಸಿ, ಪ್ರತಿಭಟನೆ.!
ಯುವ ಭಾರತ ಸುದ್ದಿ, ಗೋಕಾಕ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಿ ಶನಿವಾರವೂ ಕೂಡ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದು, ತಾಲೂಕಿನ ಮಮದಾಪೂರ ಕ್ರಾಸ್ ಬಳಿ ಯರಗಟ್ಟಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ರಮೇಶ ಅವರ ಅಭಿಮಾನಿಗಳು ಘೋಷಣೆ ಕೂಗಿದರು. ದೂರುದಾರ ದಿನೇಶ ಕಲ್ಲಹಳ್ಳಿಯ ಅಣಕು ಶವಯಾತ್ರೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ರಮೇಶ ಜಾರಕಿಹೊಳಿ ಅವರ …
Read More »ಅಂಕಲಗಿಯಲ್ಲಿ ಅಂಗಡಿ, ಮುಗ್ಗಟ್ಟುಗಳು ಸ್ವಯಂ ಪ್ರೇರಿತ ಬಂದ.! ರಮೇಶ ಜಾರಕಿಹೊಳಿ ಬೆಂಬಲಿಗರ ಬೃಹತ್ ಪ್ರತಿಭಟನೆ.!
ಯುವ ಭಾರತ ಸುದ್ದಿ, ಗೋಕಾಕ: ದಿನೇಶ ಕಲ್ಲಹಳ್ಳಿ ಸಿ.ಡಿ. ಪ್ರಕರಣಕ್ಕೆ ಸಂಬಂದಿಸಿದತೆ ಶನಿವಾರ ಸಮಸ್ತ ಕುಂದರನಾಡಿನ ಅಂಕಲಗಿ, ಅಕ್ಕತಂಗೇರಹಾಳ, ಮದವಾಲ, ಗುಜನಾಳ, ಸುಲಧಾಳ, ಬೆಣಚನಮರಡಿ, ಕುಂದರಗಿ ಸೇರಿದಂತೆ ಮುಂತಾದ ಗ್ರಾ.ಪಂ ವ್ಯಾಪ್ತಿಯ ಸುಮಾರು ೩ ಸಾವಿರಕ್ಕೂ ಹೆಚ್ಚು ರಮೇಶರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರಲ್ಲದೆ, ಪ್ರಕರಣ ಸಿ.ಬಿ.ಐ.ಗೆ ವಹಿಸಬೇಕು. ಪ್ರಕರಣದ ಸತ್ಯಾ ಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು. ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೂಗಿದ ಅಭಿಮಾನಿಗಳು ಉತ್ತರ ಕರ್ನಾಟಕದ ಪ್ರಮುಖ …
Read More »ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರ ನಿಲ್ಲದ ಪ್ರತಿಭಟನೆ.!
ಯುವ ಭಾರತ ಸುದ್ದಿ, ಗೋಕಾಕ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ.ಡಿ ಪ್ರಕರಣವನ್ನು ಸಿಓಡಿ ಅಥವಾ ಸಿಐಡಿ ತನಿಖೆ ಒಳಪಡಿಸಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ನಕಲಿ ಸಿ.ಡಿ ಬಿಡುಗಡೆ ಮಾಡಿರುವ ದಿನೇಶ ಕಲ್ಲಹಳ್ಳಿ ಅವರನ್ನು ಕೂಡಲೇ ಬಂಧಿಸಬೇಕೆAದು ಆಗ್ರಹಿಸಿ ರಮೇಶ ಜಾರಕಿಹೊಳಿ ಅವರ ಅಭಿಮಾನಿ ಬಳಗದವರು ಶನಿವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧ ಅವರಿಗೆ ಬೃಹತ್ ಪ್ರತಿಭಟನೆ ಮಾಡಿ, ದಿನೇಶ ಕಲ್ಲಹಳ್ಳಿ ಯ …
Read More »
YuvaBharataha Latest Kannada News