Breaking News

Yuva Bharatha

ನಿರ್ಮಾಣ ಹಂತದ ಶಾಲಾ ಕೊಠಡಿಯ ಗೋಡೆ ಕುಸಿದು ವಿದ್ಯಾರ್ಥಿ ಸಾವು

ನಿರ್ಮಾಣ ಹಂತದ ಶಾಲಾ ಕೊಠಡಿಯ ಗೋಡೆ ಕುಸಿದು ವಿದ್ಯಾರ್ಥಿ ಸಾವು ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೊಠಡಿಯ ಗೋಡೆ ಶುಕ್ರವಾರ ಬೆಳಿಗ್ಗೆ ಕುಸಿದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಮೂರನೇ ತರಗತಿ ವಿದ್ಯಾರ್ಥಿ ವಿಸ್ತೃತ ಬೆಳಗಲಿ(9) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಏಳನೇ ತರಗತಿ ವಿದ್ಯಾರ್ಥಿ ಪ್ರಜ್ವಲ ನಾಗವಿ ಎಂಬ ವಿದ್ಯಾರ್ಥಿ ಗಾಯಗೊಂಡಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಬೆಳಿಗ್ಗೆ …

Read More »

ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದ ಯುವಕ !

ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದ ಯುವಕ ! ಗದಗ : ಮುಂಡರಗಿ ತಾಲೂಕು ಡಂಬಳ ಗ್ರಾಮದ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡ ಬಗ್ಗೆ ಪತ್ರ ಬರೆದು ಗಮನಸೆಳೆದಿದ್ದಾನೆ. ನನಗೆ ಕನ್ಯೆ ಹುಡುಕಿ ಹುಡುಕಿ ಸಾಕಾಗಿದೆ. ಕನ್ಯೆಯನ್ನು ಹುಡುಕಿ ಕೊಡಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುತ್ತು ಹೂಗಾರ (27)ಕಳೆದ ಏಳು ವರ್ಷದಿಂದ ಕನ್ಯೆ ಅನ್ವೇಷಣೆ ನಡೆಸುತ್ತಿದ್ದಾನೆ. ಹೂಗಾರ ಸಮುದಾಯದ ಈತ …

Read More »

ವೈರಲ್ ಆಯ್ತು ಶಾಸಕರ ಸರಳತನ !

  ಬೈಂದೂರು : ಬೈಂದೂರು ಬಿಜೆಪಿ ಶಾಸಕ ಗುರುರಾಜ ಗಂಟಿಹೊಳೆ ಬುಧವಾರ ರಾತ್ರಿ ತುರ್ತು ಕೆಲಸದ ಪ್ರಯುಕ್ತ ಬೆಂಗಳೂರಿಗೆ ತೆರಳಲು ರೈಲು ಹಿಡಿಯಲು ಹೋಗುತ್ತಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ. ಶಾಸಕರಾಗಿಯೂ ಬೆನ್ನ ಮೇಲೆ ಬ್ಯಾಗ್ ನಂತಹ ಚೀಲ, ಬಿಳಿ ಪಂಚೆ, ಶರ್ಟು ಧರಿಸಿರುವ ದೃಶ್ಯವನ್ನು ಯಾರೋ ಸೆರೆಹಿಡಿದಿದ್ದು ಅವರ ಸರಳತನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಗುರುವಾರ ಚಂಡಮಾರುತ ಕಾರಣದಿಂದ ಮರವಂತೆಯಲ್ಲಿ ಕಡಲ ಕೊರೆತ ಉಂಟಾಗಿದೆ. …

Read More »

ಕೇರಳದಲ್ಲಿ ನಂದಿನಿಗೆ ಎದುರಾಯ್ತು ವಿರೋಧ

ಕೇರಳದಲ್ಲಿ ನಂದಿನಿಗೆ ಎದುರಾಯ್ತು ವಿರೋಧ ಯುವ ಭಾರತ ಸುದ್ದಿ ಬೆಂಗಳೂರು : ಕೆಲ ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ಅಮೂಲ್ ಮಾರಾಟಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ನೆರೆಯ ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟಕ್ಕೆ ವಿರೋಧ ವ್ಯಕ್ತವಾಗಿದೆ. ಕೇರಳದಲ್ಲಿ ನಂದಿನಿಯ ಮಾರಾಟ ಯೋಜನೆಯನ್ನು ಮರುಪರಿಶೀಲಿಸುವಂತೆ ಕರ್ನಾಟಕಕ್ಕೆ ಕೇರಳದಲ್ಲಿನ ಹಾಲು ಒಕ್ಕೂಟ ಪತ್ರ ಬರೆದಿದೆ. ಕೇರಳದ ಸ್ಥಳೀಯ ಹಾಲಿನ ಬ್ರಾಂಡ್ ಮಿಲ್ಮಾವನ್ನು ರಕ್ಷಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್‌ನ ಮಧ್ಯಸ್ಥಿಕೆಯನ್ನು …

Read More »

ಗೃಹಜ್ಯೋತಿ ನೋಂದಣಿ 18 ರಿಂದ

ಗೃಹಜ್ಯೋತಿ ನೋಂದಣಿ 18 ರಿಂದ ಬೆಂಗಳೂರು: ಉಚಿತ ವಿದ್ಯುತ್ ಪೂರೈಸುವ ‘ಗೃಹ ಜ್ಯೋತಿ’ ಯೋಜನೆಯ ನೋಂದಣಿ ಜೂನ್ 18ರಿಂದ ಆರಂಭವಾಗಲಿದೆ. ಈ ಯೋಜನೆಯ ಲಾಭ ಪಡೆಯಲು ಇಚ್ಚಿಸುವ ಫಲಾನುಭವಿಗಳು ವಿಶೇಷವಾಗಿ ಸೃಜಿಸಲಾಗಿರುವ ಸೇವಾ ಸಿಂಧು ರ್ಟಲ್‌ನಲ್ಲಿ (https://sevasindhugs.karnataka.gov.in/gruhajyothi) ನೋಂದಾಯಿಸಬೇಕು. ಈ ತಂತ್ರಾಂಶವನ್ನು ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್‌ಟ್ಯಾಪ್‌ನಲ್ಲಿಯೂ ಬಳಸಬಹುದಾಗಿದೆ. ಫಲಾನುಭವಿಗಳು ಆಧಾರ್ ಕಾರ್ಡ್, ವಿದ್ಯುತ್ ಖಾತೆ ಸಂಖ್ಯೆಯ ಮಾಹಿತಿಯನ್ನು (ವಿದ್ಯುತ್ ಬಿಲ್‌ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕು. ಬೆಂಗಳೂರು ಒನ್, …

Read More »

ಬಿಪೋರ್‌ ಜಾಯ್‌ ಚಂಡಮಾರುತ : ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ

ಬಿಪೋರ್‌ ಜಾಯ್‌ ಚಂಡಮಾರುತ : ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಯುವ ಭಾರತ ಸುದ್ದಿ ಬೆಂಗಳೂರು: ಬಿಪೋರ್ ​​ಜಾಯ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕರ್ನಾಟಕ ರಾಜ್ಯದ ಮೇಲೂ ಪರಿಣಾಮ ಬೀರಲಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹೈ ಅಲರ್ಟ್​​ ಘೋಷಣೆ ಮಾಡಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಭಾರಿ ಅಲೆಗಳು ಏಳುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಕರಾವಳಿ ಜಿಲ್ಲೆಗಳ ಪ್ರವಾಸಿ …

Read More »

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಾರ್ವಜನಿಕ, ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಕೇಳಿದ ಕಾನೂನು ಆಯೋಗ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಾರ್ವಜನಿಕ, ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಕೇಳಿದ ಕಾನೂನು ಆಯೋಗ ಯುವ ಭಾರತ ಸುದ್ದಿ ದೆಹಲಿ : ಭಾರತದ ಕಾನೂನು ಆಯೋಗ ಏಕರೂಪ ನಾಗರಿಕ ಸಂಹಿತೆಯ ಕುರಿತು ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಭಾರತದ 22 ನೇ ಕಾನೂನು ಆಯೋಗ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾರ್ವಜನಿಕರು ಹಾಗೂ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಕೇಳಲು ನಿರ್ಧರಿಸಿದೆ. ಆಯೋಗವು ಅಗಾಧ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ ಮತ್ತು …

Read More »

ನಿದ್ರೆಯಲ್ಲಿದ್ದವರ ಮೇಲೆ ಹರಿದ ಜೆಸಿಬಿ, ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವು

ನಿದ್ರೆಯಲ್ಲಿದ್ದವರ ಮೇಲೆ ಹರಿದ ಜೆಸಿಬಿ, ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವು ರಾಯಚೂರು : ಜೆಸಿಬಿಯೊಂದು ಹರಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ಇಂದು(ಬುಧವಾರ) ಬೆಳಗ್ಗೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಛತ್ತೀಸ್‌ಗಢ ಮೂಲದ ಕೃಷ್ಣಾ (25) ಶಿವುರಾಮ (30) ಹಾಗೂ ಬಲರಾಮ (28) ಎಂದು ಗುರುತಿಸಲಾಗಿದೆ. ಅವರು ಬೋರ್‌ವೆಲ್ ಕೆಲಸ ಮುಗಿಸಿಕೊಂಡು ರಾತ್ರಿ ಜಮೀನಿನಲ್ಲೇ ಮಲಗಿದ್ದ ವೇಳೆ ಈ ದುರಂತ …

Read More »

ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ : ಮಿನಿ ಉದ್ಯೋಗ ಮೇಳ ಶುಕ್ರವಾರ

  ಬೆಳಗಾವಿ : ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜೂನ್ 16 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ, ಪಿಯುಸಿ, ಐಟಿಐ (ಪಿಟ್ಟರ್, ವೆಲ್ಡರ್, ಮಷಿನಿಷ್ಟ್, ಎಲೆಕ್ಟ್ರಿಷಿಯನ್) ಹಾಗೂ ಡಿಪ್ಲೋಮಾ ಮತ್ತು ಯಾವದೇ ಪದವಿ ಮತ್ತು ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ ಮಿನಿ ಉದ್ಯೋಗ ಮೇಳವನ್ನು ಕಲ್ಮೇಶ್ವರ ಮಂಗಲ ಕಾರ್ಯಾಲಯ ಗ್ರಾಮ ಪಂಚಾಯತಿ ಹತ್ತಿರ, ಹಲಗಾ ಬೆಳಗಾವಿ, ಇಲ್ಲಿ …

Read More »

ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಚುನಾವಣೆ ನಿಗದಿ

ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಚುನಾವಣೆ ನಿಗದಿ ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ 21 ನೇ ಅವಧಿಗೆ ವಿವಿಧ ೪ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಚುನಾವಣೆಯನ್ನು ಜೂ. 27 ರಂದು ನಿಗದಿಪಡಿಸಲಾಗಿದೆ ಚುನಾವಣೆ ವೇಳಾಪಟ್ಟಿ: ಜೂನ್. ೨೭ ೨೦೨೩ ಬೆಳಿಗ್ಗೆ ೧೦ ರಿಂದ ೧೨ ಗಂಟೆವರೆಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಾಮಪತ್ರಗಳ ಸ್ವೀಕೃತಿ ಸಮಯ, ಮಧ್ಯಾಹ್ನ ೩ ಗಂಟೆಗೆ ಸಭೆ ಪ್ರಾರಂಭ, ಮಧ್ಯಾಹ್ನ ೩ ಗಂಟೆಯ …

Read More »