Breaking News

Yuva Bharatha

ಸರಕಾರದ ಸಾಧನೆ ಜನರ ಮನೆಮನಗಳಿಗೆ ತಲುಪಿಸಿ-ದುರ್ಗನ್ನವರ.!

ಗೋಕಾಕ: ರಾಜ್ಯ ಸರಕಾರ ಕಳೆದ ಒಂದು ವರ್ಷದಿಂದ ಪ್ರವಾಹ, ಕರೋನಾದಂತಹ ಸಾವಲುಗಳನ್ನು ಎದುರಿಸಿ, ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಸಾಧನೆಗೈ ಸರಕಾರದ ಸಾಧನೆಗಳನ್ನು ಮನೆಮನಗಳಲ್ಲಿ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಯುವ ಧುರೀಣ ಹನಮಂತ ದುರ್ಗನ್ನವರ ಹೇಳಿದರು. ಅವರು, ಶನಿವಾರದಂದು ತಾಲೂಕಿನ ಮಾಲದಿನ್ನಿ, ಉಪ್ಪಾರಹಟ್ಟಿ ಗ್ರಾಮಗಳಲ್ಲಿ ಸರಕಾರದ ಸಾಧನೆಗಳ ಕರಪತ್ರ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಳೆದ ಒಂದು ವರ್ಷಗಳಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಮ್ ಬಿ …

Read More »

ತುಕ್ಕಾನಟ್ಟಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಹೊರಾಂಗಣ ಶಿಕ್ಷಣ

ಮೂಡಲಗಿ: ಮಹಾಮಾರಿ ಕೊರೊನಾ ವೈರಸ್‍ದಿಂದಾಗಿ ಶಾಲೆಗಳು ತೆರೆಯದೇ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಕೂಡಾ ನಮ್ಮ ಗ್ರಾಮೀಣ ಮಟ್ಟದ ಬಡ ಕುಟಂಬಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಕಾರಣ ಬಡ ಮಕ್ಕಳ ಜನ ವಸತಿ ಪ್ರದೇಶಕ್ಕೆ ಶಿಕ್ಷಕರೇ ಹೋಗಿ ಸಾಮಾಜಿಕ ಅಂತರದಲ್ಲಿ ಬಯಲು ಪ್ರದೇಶದಲ್ಲಿ ಶಿಕ್ಷಣ ನೀಡುತ್ತಿದ್ದೇವೆ ಎಂದು ಮೂಡಲಗಿ ವಲಯದ ತುಕ್ಕಾನಟ್ಟಿಯ ಸರಕಾರಿ ಶಾಲೆಯ ಮುಖ್ಯ ಗುರುಗಳಾದ ಎ.ವ್ಹಿ. ಗಿರೆಣ್ಣವರ ಹೇಳಿದರು. ಅವರು …

Read More »

30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಡಾಡಿ ಅವರಿಗೆ ರಾಜ್ಯಸಭಾ ಜೊತೆಗೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಪಟ್ಟ

ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ …

Read More »

ಸರಕಾರದ ಮಾರ್ಗಸೂಚಿಯಂತೆ ಬಕ್ರೀದ್ ಆಚರಣೆ.!

ಗೋಕಾಕ: ದಿನದಿಂದ ದಿನಕ್ಕೆ ತೀವ್ರವಾಗಿ ಹಬ್ಬುತ್ತಿರುವ ಮಹಾಮಾರಿ ಕೊರೋನಾ ಮಧ್ಯದಲ್ಲಿ ಇಲ್ಲಿಯ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನಗಳ ಪ್ರತೀಕವಾದ ಈದುಲ್ಲ್ ಅಝ್ಹಾ (ಬಕ್ರೀದ್) ಹಬ್ಬದ ಪ್ರಯುಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ ಧರಿಸಿ ತಮ್ಮ ತಮ್ಮ ಗಲ್ಲಿಯಲ್ಲಿರುವ ಮಸೀದಗಳಲ್ಲಿ ಶನಿವಾರದಂದು ಸಾಮೂಹಿಕ ಪ್ರಾರ್ಥನೆ ಮಾಡಿ ಈದ್ ಆಚರಿಸಿದರು. ಬಕ್ರೀದ್ ಹಬ್ಬದ ಸಲುವಾಗಿ ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ನಗರದ ಹೊಸಪೇಟೆ ಗಲ್ಲಿಯ ನೂರಾನಿ ಮಸೀದ, ಅಂಬೇಡ್ಕರ್ ನಗರದ ಮದೀನಾ, ಈದ್ಗಾ ಮತ್ತು …

Read More »

ಬಿಜೆಪಿ ಸರಕಾರದ ಒಂದು ವರ್ಷದ ಸಾಧನೆಯ ಕರಪತ್ರ ಹಂಚಿಕೆ.!

ಗೋಕಾಕ: ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ಒಂದು ವರುಷದ ಸಂಕಷ್ಟ ಸವಾಲುಗಳ ನಡುವೆ ಸಂವೇದನೆ ಸ್ಪಂದನೆ ಸಾಧÀನೆಯ ಕರಪತ್ರನ್ನು ಮನೆ ಮನೆಗೆ ತಲಪಿಸುವ ಕಾರ್ಯಕ್ಕೆ ಶನಿವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷರಾದ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾದ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯರಾದ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಬಸವರಾಜ ಆರ್ಯನವರ, ಶ್ರೀಶೈಲ ಯಕ್ಕುಂಡಿ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ, ಹನುಮಂತ ಕಾಳಮ್ಮನಗುಡಿ, ಕಾಶಿಂ ಕಲಿಫ್, …

Read More »

ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಊಟೋಪಚಾರ ಮಾಡಿದ್ದ ಸಿದ್ಧವ್ವ ಮೇತ್ರಿ ನಿಧನಕ್ಕೆ  ಸಂತಾಪ-ಸಚಿವ ರಮೇಶ್ ಜಾರಕಿಹೊಳಿ‌..|| ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಾಗ ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ  ಸಿದ್ಧವ್ವ ಮೇತ್ರಿ  ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ಧವ್ವ ಮೇತ್ರಿ ಅವರು 95 ವರ್ಷಗಳ ಸುದೀರ್ಘ ಜೀವನ ನಡೆಸಿದ್ದರು‌.1939ರಲ್ಲಿ ಬೆಳಗಾವಿಗೆ ಆಗಮಿಸಿದ್ದ …

Read More »

ನಂದಿನಿ ಹಾಲು ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ-  ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ …!!  

  ನಂದಿನಿ ಹಾಲು ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ-  ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ …!!    ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕಹಾಮ ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರದಂದು ಈ ಹೇಳಿಕೆ ನೀಡಿರುವ ಅವರು, …

Read More »

ಸೈಕಲ್ ಸವಾರಿ ಪಿಎಸ್ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್

ಮೂಡಲಗಿ : ಎಷ್ಟೋ ಮಂದಿ ದೊಡ್ಡ ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು, ಮರಿ, ಕಿರಿ ರಾಜಕಾರಣಿಗಳು ತಮ್ಮ ವಾಹನ(ಕಾರ, ಜೀಪ್, ಇತ್ಯಾದಿ)ಗಳು ಸುಸ್ಥಿತಿಯಲ್ಲಿ ಇಲ್ಲದಾಗ ಅಥವಾ ಚಾಲಕರು ಇಲ್ಲದಿದ್ದಾಗ ಅಂದಿನ ಕರ್ತವ್ಯದ ಸಂಚಾರವನ್ನೆ ರದ್ದುಗೊಳಿಸಿದ ಅಥವಾ ಮುಂದೂಡುವ ಇಂತಹ ಸಮಯದಲ್ಲಿ ಇಲ್ಲೊಬ್ಬರು ನಿಷ್ಟಾವಂತ ಪೋಲಿಸ್ ಅಧಿಕಾರಿ ಪ್ರತಿನಿತ್ಯ ಮುಂಜಾನೆ ಸೈಕಲ್ ಸವಾರಿ ಮಾಡುತ್ತಾ ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಒಮ್ಮೊಮ್ಮೆ ಠಾಣೆ ವ್ಯಾಪ್ತಿಯ 30-40 ಕಿಲೋಮೀಟರ್ ಸೈಕಲ್ ಸವಾರಿಯ ವಿಕ್ಷಣೆಯ (ಪೆಟ್ರೋಲಿಂಗ)ಉದಾಹರಣೆಗಳಿವೆ …

Read More »

ಇತಿಹಾಸವನ್ನು ಸೃಷ್ಟಿಸಿರುವ ಮಹಾನ ಚೇತನಗಳ ಹೆಸರನ್ನು ಪಠ್ಯಕ್ರಮದಲ್ಲಿ ಹಿಂಪಡೆದದನ್ನು ಮರುಪರಿಶೀಲಿಸಿ.

ಗೋಕಾಕ: ‘ಏಸು ಕ್ರಿಸ್ತ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ ಅವರಿಗೆ ಸಂಬAಧಿಸಿದ ಪಠ್ಯವನ್ನು ಕೈ ಬಿಟ್ಟಿರುವುದನ್ನು ಪುನರ ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕಳೆದ ಹಲವಾರು ವರ್ಷಗಳಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸರಕಾರ ವಿಶ್ವಪ್ರೇಮ ಸಾರಿದ ಜೀಸಸ್‌ರಂಥ ದಿವ್ಯಚೇತನಗಳನ್ನು, ಸ್ವಾತಂತ್ರ‍್ಯಕ್ಕಾಗಿ ಮಡಿದ ಟಿಪ್ಪು ಸುಲ್ತಾನ್, ರಾಯಣ್ಣನಂಥ ವೀರ ಸೇನಾನಿಗಳ ಸಾಧನೆ ಮತ್ತು …

Read More »

ಕರೋನಾ ಸೋಂಕಿನಿAದ ಮೃತಪಟ್ಟ ವ್ಯಕ್ತಿಯ ಶವ ೫ಗಂಟೆ ಆಸ್ಪತ್ರೆಯ ಹೊರಗಿಟ್ಟು ವೈದ್ಯರ ನಿರ್ಲಕ್ಷ.!

ಗೋಕಾಕ: ಕರೋನಾ ಸೋಂಕಿನಿAದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೋವಿಡ್ ವಾರ್ಡನ ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆಯ ವೈದ್ಯರು ನಿರ್ಲಕ್ಷ ತೋರಿದ್ದಾರೆ. ನಗರದಲ್ಲಿ ಶುಕ್ರವಾರದಂದು ಮತ್ತೊಂದು ಹೃದಯವಿಧ್ರಾಹಕ ಘಟನೆಯಾಗಿದ್ದು, ಎರಡು ದಿನಗಳ ಹಿಂದೆ ಗೋಕಾಕ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಮೂಡಲಗಿ ಪುರಸಭೆಯ ಸಿಬ್ಬಂದಿಯಾಗಿದ್ದು ಮೃತ ದೇಹವನ್ನು ಹೊರಗಡೆ ಇಟ್ಟಿದ್ದಾರೆ. ಮೃತ ದೇಹವನ್ನು ಬೇಗನೆ ಅಂತ್ಯ ಸಂಸ್ಕಾರ …

Read More »