Breaking News

Yuva Bharatha

ಶಕ್ತಿ ಯೋಜನೆಯಡಿ ಮುಂಗಡ ಆಸನ ಕಾಯ್ದಿರಿಸಲು ಅವಕಾಶ

ಶಕ್ತಿ ಯೋಜನೆಯಡಿ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಬೆಂಗಳೂರು : ರಾಜ್ಯಾದ್ಯಂತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ ಯೋಜನೆ’ಗೆ ಭಾನುವಾರ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಶಕ್ತಿ ಯೋಜನೆಯ ಸೌಲಭ್ಯವನ್ನು ಪ್ರತಿನಿತ್ಯ 41.81 ಲಕ್ಷ ಮಹಿಳೆಯರು (11.58 ಲಕ್ಷ ಪಾಸ್‌ ಪ್ರಯಾಣಿಕರು ಸೇರಿದಂತೆ) ಪಡೆಯಲಿದ್ದಾರೆ ಎಂದು …

Read More »

ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಚಾಲನೆ

ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ಬೆಂಗಳೂರು: ಕಾಂಗ್ರೆಸ್‌ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ಯೋಜನೆ ‘ಶಕ್ತಿ’ಗೆ ಭಾನುವಾರ ಚಾಲನೆ ನೀಡಲಾಯಿತು.   ವಿಧಾನಸೌಧದ ಎದುರು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯನ್ನು ಉದ್ಘಾಟಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಉಸ್ತುವಾರಿ ಸಚಿವರು ಯೋಜನೆಗೆ ಚಾಲನೆ ಕೊಟ್ಟರು. ಡಿಸಿಎಂ ಡಿ.ಕೆ ಶಿವಕುಮಾರ್‌, ಸಚಿವರಾದ ಕೆ.ಜೆ ಜಾರ್ಜ್‌, …

Read More »

ಖ್ಯಾತ ಸಾಹಿತಿ ಪ.ರಾ.ಶಾಸ್ತ್ರಿ ಅಭಿನಂದನೆ: ಆಹ್ವಾನ ಪತ್ರಿಕೆ ಅನಾವರಣ

  ಬೆಳ್ತಂಗಡಿ : ಸಮಾಜದ ವಿವಿಧ ಸ್ತರಗಳಲ್ಲಿ ಅಡಗಿರುವ ಸಾಧಕ ಪ್ರತಿಭೆಗಳನ್ನು ಹುಡುಕಿ ಲೋಕಕ್ಕೆ ಪರಿಚಯಿಸುವ ಕಾರ್ಯ ನಡೆಸುತ್ತಿರುವವರು ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರು. ಸಹಸ್ರಾರು ಮಂದಿ ಅವರ ಲೇಖನದ ಮೂಲಕ ಹೊಸಜಗತ್ತನ್ನು ನೋಡಿದ್ದಾರೆ. ಕೃಷಿ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದ ಜನರಿಗೂ ಅನುಕೂಲವಾದ ಲೇಖನಗಳನ್ನು ಬರೆದಿದ್ದಾರೆ ಎಂದು ಕಟ್ಟದಬೈಲು ಶಾಲಾ ಮುಖ್ಯಶಿಕ್ಷಕ, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಡ್ವರ್ಡ್ ಡಿಸೋಜಾ ಹೇಳಿದರು. ಅವರು ಶನಿವಾರ ಇಲ್ಲಿನ ಸುವರ್ಣ ಆರ್ಕೇಡ್ ನಲ್ಲಿ …

Read More »

ಬೆಳಗಾವಿ ಕಡೆ ಹೊರಟ್ಟಿದ್ದ ಕಾರು ಅಪಘಾತ : ಮೂವರ ಸಾವು

ಬೆಳಗಾವಿ ಕಡೆ ಹೊರಟ್ಟಿದ್ದ ಕಾರು ಅಪಘಾತ : ಮೂವರ ಸಾವು ಧಾರವಾಡ: ಭಾನುವಾರ ಬೆಳಿಗಿನ ಜಾವ ಲಾರಿ ಹಾಗೂ ಕಾರ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಸಾವಿಗೀಡಾಗಿರುವ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರ ಹಳಿಯಾಳ ಸೇತುವೆ ಬಳಿ ನಡೆದ ವರದಿಯಾಗಿದೆ. ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬರನ್ನು ಬಿಂದುಗೌಡ (35) ಹಾಗೂ ಮತ್ತೊಬ್ಬರನ್ನು ಬಾಪುಗೌಡ (36) ಎಂದು ಗುರುತಿಸಲಾಗಿದೆ. ಇನ್ನೋರ್ವ ವ್ಯಕ್ತಿಯ ಗುರುತು …

Read More »

ಮುರಗೋಡ ಸಂಜು ಬಸಯ್ಯ ಲವ್ ಸ್ಟೋರಿ ; ಕೊನೆಗೂ ಸಿಕ್ಕಳು ಬಳ್ಳಾರಿ ಸುಂದರಿ..!

ಮುರಗೋಡ ಸಂಜು ಬಸಯ್ಯ ಲವ್ ಸ್ಟೋರಿ ; ಕೊನೆಗೂ ಸಿಕ್ಕಳು ಬಳ್ಳಾರಿ ಸುಂದರಿ..! ಯುವ ಭಾರತ ಸುದ್ದಿ ಬೆಳಗಾವಿ : ಖ್ಯಾತ ನಟ ಮುರಗೋಡ ಮೂಲದ ಸಂಜು ಬಸಯ್ಯ ಅವರು ನಟಿ ಪಲ್ಲವಿ ಬಳ್ಳಾರಿ ಅವರೊಂದಿಗೆ ಮದುವೆಯಾಗಿದ್ದಾರೆ. ಕನ್ನಡ ಕಿರುತೆರೆ ಲೋಕದ ಶೋಗಳ ಮೂಲಕ ಸಂಜು ಬಸಯ್ಯ ಹೆಸರುವಾಸಿಯಾಗಿದ್ದರು. ಇದೀಗ ಅವರು ತಮ್ಮ ಬಹುಕಾಲದ ಪ್ರೇಯಸಿ ಪಲ್ಲವಿ ಜೊತೆ ಹೆಜ್ಜೆ ಹಾಕಿದ್ದಾರೆ. ತಮ್ಮ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದಿರುವ ಸಂಜು …

Read More »

ಇಟಗಿಯ ಹೆಣ್ಣು ಮಕ್ಕಳ ಶಾಲೆಗೆ ಗ್ರೀನ್ ಬೋರ್ಡ್ ದೇಣಿಗೆ

ಇಟಗಿಯ ಹೆಣ್ಣು ಮಕ್ಕಳ ಶಾಲೆಗೆ ಗ್ರೀನ್ ಬೋರ್ಡ್ ದೇಣಿಗೆ ಇಟಗಿ : ಇಟಗಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಸಂತೋಷ ಅಣ್ಣಪ್ಪ ದೊಡ್ಡಕಲ್ಲನ್ನವರ ಹಾಗೂ ಅವರ ಸಹೋದರಿ ಜ್ಯೋತಿ ಭರಮ ಹಟ್ಟಿಹೊಳಿ ನಾಲ್ಕು ಗ್ರೀನ್ ಬೋರ್ಡ್ ನೀಡಿದ ದೇಣಿಗೆ ನೀಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ರುದ್ರೇಶ ಸಂಪಗಾವಿ ಶಾಲೆಗೆ ಗ್ರೀನ್ ಬೋರ್ಡ್ ದೇಣಿಗೆ ನೀಡಿದ ಸಂತೋಷ ಅಣ್ಣಪ್ಪ ದೊಡ್ಡಕಲ್ಲನ್ನವರ ಹಾಗೂ ಅವರ ಸಹೋದರಿ ಜ್ಯೋತಿ …

Read More »

ಭಾರೀ ಮಳೆಯಾಗುವ ಸಾಧ್ಯತೆ

ಭಾರೀ ಮಳೆಯಾಗುವ ಸಾಧ್ಯತೆ ನವದೆಹಲಿ: ಬಿಪೋರ್‌ಜೋಯ್‌ ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ. ಚಂಡಮಾರುತ ಪರಿಣಾಮ ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಚಂಡಮಾರುತವು ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನಿಂದ ಪಶ್ಚಿಮ-ನೈಋತ್ಯಕ್ಕೆ 640 ಕಿಮೀ ಮತ್ತು ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿಮೀ ದೂರದಲ್ಲಿ ನೆಲೆಸಿದೆ …

Read More »

ಅಮೆಜಾನ್‌ ಕಾಡಿನಲ್ಲಿ ವಿಮಾನ ಅಪಘಾತವಾಗಿ 40 ದಿನಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ವರು ಮಕ್ಕಳು

ಅಮೆಜಾನ್‌ ಕಾಡಿನಲ್ಲಿ ವಿಮಾನ ಅಪಘಾತವಾಗಿ 40 ದಿನಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ವರು ಮಕ್ಕಳು ಬೊಗೋಟಾ: ಇದೊಂದು ವಿಸ್ಮಯವೇ ಸರಿ. ಈ ಮಕ್ಕಳು ಬದುಕಿ ಉಳಿದಿರುವುದು ದೊಡ್ಡ ಪವಾಡ ಎನ್ನಬಹುದು. ವಿಮಾನ ಅಪಘಾತಕ್ಕೀಡಾದ ನಂತರ ಕೊಲಂಬಿಯಾದ ಅಮೆಜಾನಿನ ದಟ್ಟವಾದ ಮಳೆಕಾಡಿನಲ್ಲಿ ಕಾಣೆಯಾಗಿದ್ದ ನಾಲ್ವರು ಪುಟ್ಟ ಮಕ್ಕಳು 40 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ. ಇಂದು ನಾವು ಮಾಂತ್ರಿಕ ದಿನವನ್ನು ಹೊಂದಿದ್ದೇವೆ ಎಂದು …

Read More »

ಆಧಾರ್ ಕಾರ್ಡ್ ಕುರಿತು ಮಹತ್ವದ ಮಾಹಿತಿ

ಆಧಾರ್ ಕಾರ್ಡ್ ಕುರಿತು ಮಹತ್ವದ ಮಾಹಿತಿ ನವದೆಹಲಿ : ಉಚಿತವಾಗಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಜೂನ್ 14 ರವರೆಗೆ ಅವಕಾಶ ನೀಡಲಾಗಿದೆ. ಯುಐಡಿಎಐ ಈ ಹಿಂದೆ ಟ್ವೀಟ್ ಮಾಡಿ ಮಾರ್ಚ್ 15 ರಿಂದ ಜೂನ್ 14, 2023 ರವರೆಗೆ https://myaadhaar.uidai.gov.in ನಲ್ಲಿ ‘ಉಚಿತವಾಗಿ’ ಹೆಸರು ಮತ್ತು ವಿಳಾಸ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬಹುದು ಎಂದು ತಿಳಿಸಿತ್ತು. ಆಧಾರ್ ನಲ್ಲಿ ಹೆಸರು, ಫೋಟೋ, ಮೊಬೈಲ್ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು …

Read More »

ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ

ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ಉಪಾಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಲಾಗಿದೆ. ಶರದ್ ಪವಾರ್ ಅವರು 1999 ರಲ್ಲಿ ಪಿ.ಎ. ಸಂಗ್ಮಾ ಅವರ ಜೊತೆ ಸೇರಿ ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದಲ್ಲಿ ಈ ಘೋಷಣೆ ಮಾಡಲಾಯಿತು. ಸುಪ್ರಿಯಾ ಸುಳೆ ಅವರನ್ನು ಎನ್‌ಸಿಪಿಯ ಕೇಂದ್ರ …

Read More »