Breaking News

ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಪಂ ಸದಸ್ಯರಿಂದ ಗೋಕಾಕ ಸಾಹುಕಾರರ ಭೇಟಿ

Spread the love

ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಪಂ ಸದಸ್ಯರಿಂದ ಗೋಕಾಕ ಸಾಹುಕಾರರ ಭೇಟಿ

 ಯುವ ಭಾರತ ಸುದ್ದಿ, ಗೋಕಾಕ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯ ವೀರ ಸೇನಾನಿಗಳು ಶನಿವಾರ ಮುಂಜಾನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗುವ ಮೂಲಕ ಬಿಜೆಪಿಯ ಶಕ್ತಿ ಪದರ್ಶನ ನಡೆಸಿದರು.

ಗೋಕಾಕನ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ನೂತನ ಸದಸ್ಯರು ಬಂದು ಸಚಿವ ರಮೇಶ ಜಾರಕಿಹೊಳಿ ಅವರ ಆಶೀರ್ವಾದ ಪಡೆದರು. ಗ್ರಾಮೀಣ ಭಾಗದಲ್ಲಿ ಬಿಜೆಪಿ ಮತ್ತಷ್ಟು ಬಲಗೊಂಡಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಬೆಳಿಗೆ 7 ಗಂಟೆಯಿಂದಲೇ ಗೋಕಾಕನ ಗೃಹ ಕಚೇರಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಹುಕಾರರನ್ನು ಭೇಟಿಯಾಗಲು ಆಗಮಿಸಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಬೇರು ಗಟ್ಟಿಯಾಗಿದ್ದು, 55 ಗ್ರಾಮ ಪಂಚಾಯಿತಿಗಳ ಪೈಕಿ 41 ಗ್ರಾಪಂಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 24 ಗ್ರಾಪಂಗಳಲ್ಲಿ ಬಿಜೆಪಿಗೆ ಬಹುಮತ ಇದೆ. ಹೀಗಾಗಿ ಸಚಿವರು ಶನಿವಾರ ತವರಿಗೆ ಮರಳುತ್ತಿದ್ದಂತೆ ನೂತನ ಸದಸ್ಯರು ಭೇಟಿಯಾದರು.

ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬೆರಳೆಣಿಕೆಯಷ್ಟು ಗ್ರಾಪಂಗಳು ಮಾತ್ರ ಬಿಜೆಪಿಯಂದ ಕೈ ಬಿಟ್ಟಿವೆ. ಪಶ್ಚಿಮ ಭಾಗದ ಮರಾಠಾ ಸಮುದಾಯದವರು ಇರುವ ಗ್ರಾಪಂಗಳು ಬಿಜೆಪಿ ಪಾಲಾಗಿವೆ. ಕಮಲ ಮತ್ತೆ ಇಲ್ಲಿ ಅರಳಿದ್ದು, ಜನರಲ್ಲಿ ಹೊಸ ಸಂಚಲನ ಮೂಡಿಸಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಭದ್ರಕೋಟೆಯಾದ ಸುಳೇಭಾವಿ, ಸಾಂಬ್ರಾ, ಕರಡಿಗುದ್ದಿ, ಹಿಂಡಲಗಾ, ಅಂಬೇವಾಡಿ, ಕಂಗ್ರಾಳಿ ಬಿ.ಕೆ., ಬಾಳೇಕುಂದ್ರಿ ಕೆ.ಎಚ್. ತುಮ್ಮರಗುದ್ದಿ ಹೀಗೆ ಅನೇಕ ಗ್ರಾಪಂಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಭೇಟಿ ಮಾಡಿ ಶಕ್ತಿ ಪ್ರದರ್ಶಿಸಿದರು.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

5 × 4 =