ಪವರ್ ಏಂಜಾಯ್ ಮಾಡೋವರು ೧೭ಜನ ಶಾಸಕರ ತ್ಯಾಗ ಮರೆಯ ಬಾರದು-ಬಾಲಚಂದ್ರ ಜಾರಕಿಹೊಳಿ.!
ಗೋಕಾಕ: ರಮೇಶ ಜಾರಕಿಹೊಳಿ, ಮಹೇಶ ಕುಮಟಹಳ್ಳಿ, ಶ್ರೀಮಂತ ಪಾಟೀಲ್ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪವರ್ ಏಂಜಾಯ್ ಮಾಡೋವರು ಇದನ್ನು ಮರೆಯಬಾರದು ಎಂದು ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಸಚಿವ ಕತ್ತಿ, ಸವದಿ ಹಾಗೂ ಶಶಿಕಲಾ ಜೊಲ್ಲೆಗೆ ಟಾಂಗ್ ನೀಡಿದ್ದಾರೆ.
ಅವರು, ನಗರದ ಶ್ರೀ ಮಹಾಲಕ್ಷಿö್ಮÃ ಸಭಾ ಭವನದ ಉದ್ಘಾಟನೆ ನಂತರ ಪತ್ರಕತ್ರರೊಂದಿಗೆ ಮಾತನಾಡಿ, ಉಮೇಶ ಕತ್ತಿ ನೇತೃತ್ವದಲ್ಲಿ ಸಭೆಯಲ್ಲಿ ಪಾಲ್ಗೊಂಡ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಪಿ ರಾಜೀವ ಅಧಿಕೃತ ಸಭೆಯಲ್ಲ ಎಂದಿದ್ದಾರೆ ಈ ವಿಚಾರವನ್ನು ದೊಡ್ಡದು ಮಾಡಲು ಹೋಗಲ್ಲ ಎಂದರು.
ಉಮೇಶ ಕತ್ತಿ ಅವರು ಕವಟಗಿಮಠ ಸಭೆಯನ್ನು ಕರೆದಿದ್ದಾರೆ ಎಂದಿದ್ದಾರೆ. ನನಗೆ ರಮೇಶ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಶ್ರೀಮಂತ ಪಾಟೀಲ್ ಗೆ ಆಹ್ವಾನಿಸಿಲ್ಲ. ಪಕ್ಷದಿಂದಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇದೆ. ಆರೋಪ, ಪ್ರತ್ಯಾರೋಪ ಮಾಡಲು ಸಮಯ ಇಲ್ಲ. ಪಕ್ಷದ ದೃಷ್ಟಿಯಿಂದ ಈಗ ಆಗಿರೋ ಬೆಳವಣಿಗೆ ಸರಿಯಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಪವರ್ ಏಂಜಾಯ್ ಮಾಡೋವರು ಒಂದು ವಿನಂತಿ. ೧೭ ಜನ ಶಾಸಕರು ಬರದೇ ಇದ್ರೆ ಯಾರು ಮಂತ್ರಿ, ರಾಜ್ಯಸಭೆ ಸದಸ್ಯ, ಡಿಸಿಎಂ ಆಗುತ್ತಿರಲಿಲ್ಲ. ರಮೇಶ ಜಾರಕಿಹೊಳಿ, ಉಮೇಶ ಕತ್ತಿ, ಜೊಲ್ಲೆ ಸೇರಿ ಸಭೆ ಸೇರಿ ಮುಂದೆ ಭಿನ್ನಾಭಿಪ್ರಾಯ ಆಗದಂತೆ ನೋಡಿಕೊಳ್ಳುತ್ತೇವೆ ಆದಷ್ಟು ಬೇಗ ಭಿನ್ನಾಭಿಪ್ರಾಯ ಸರಿಯಾಗಲಿದೆ ಎಂದರು.
ಕೆಲ ಜನರು ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಬಿಡಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನವರಿಂದ ಈ ಸುದ್ದಿ ಹಬ್ಬಿದೆಯೆ ಎಂಬುದು ಗೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಅರಭಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಿಶ್ಚಿತ. ನಾನು ಈ ಬಗ್ಗೆ ಬಾಂಡ್ ಬರೆದು ಕೊಡಲು ಸಹ ಸಿದ್ಧ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಾನು ಇಲ್ಲ ರಮೇಶ ಜಾರಕಿಹೊಳಿ ಸಹ ಇಲ್ಲ. ರಮೇಶ ಅವರಿಗೆ ಸಚಿವ ಸ್ಥಾನ ನೀಡುವದು ಸಿಎಂಗೆ ಬಿಟ್ಟದ್ದು, ಪಕ್ಷದ ದೃಷ್ಟಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ಕೊಡಬೇಕು. ಕೋರ್ಟ್ ಸಮಸ್ಯೆ ಇರೋ ಕಾರಣಕ್ಕೆ ರಮೇಶ ಮಂತ್ರಿಯಾಗಿಲ್ಲ. ಕ್ಲೀಯರ್ ಆದರೆ ರಮೇಶ ಜಾರಕಿಹೊಳಿ ಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ, ಸವದಿ ಸಂಪರ್ಕದ ಬಗ್ಗೆ ಪ್ರಶ್ನಿಸಿದಾಗ ನನಗೆ ಮಾಹಿತಿ ಇಲ್ಲ. ಮೂರು ಕಾಂಗ್ರೆಸ್ ಶಾಸಕರು ಬಿಜೆಪಿ ಬರ್ತಾರೆ ಎಂಬುದು ನನಗೆ ಗೊತ್ತಿಲ್ಲ. ರಾಜ್ಯವನ್ನು ಕಟ್ಟುವ ನಾಯಕರೇ ಬೆಳಗಾವಿಯಲ್ಲಿದ್ದಾರೆ. ಜಿಲ್ಲೆಯ ನಾಯಕರು ಒಟ್ಟಾಗಿ ಕೂಡಿ ಪಕ್ಷ ಕಟ್ಟೊಣ. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.