ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಸ್ಪರ್ಧೆ – ಆರ್ ಎಲ್ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ!
ಯುವ ಭಾರತ ಸುದ್ದಿ ಬೆಳಗಾವಿ : ಬೆಂಗಳೂರಿನ ಅರುಣೋದಯ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಸಹಯೋಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಆಯೋಜಿಸಿದ್ದ ಅತ್ಯುತ್ತಮ ಗ್ರಾಮೀಣ ಕಾನೂನು ಮತ್ತು ಕ್ಲಿನಿಕ್ ಸ್ಪರ್ಧೆಯಲ್ಲಿ ಬೆಳಗಾವಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದಿದ್ದಾರೆ.
ತಂಡದಲ್ಲಿ 8 ವಿದ್ಯಾರ್ಥಿಗಳಾದ ಕಾರ್ತಿಕ್ ತೊಲಗಟ್ಟಿ, ಅನಿಲ್ ಗಿಡ್ಡಗೌಡರ್, ಲಕ್ಷ್ಮೀ ಪೂಜಾರ್, ರುಚಾ ಅಷ್ಟಪುತ್ರೆ, ಶುಭಾಂಗಿ ಪಾಟೀಲ, ಮಲಿಕಾರ್ಜುನ ಪೂಜಾರಿ, ಸುಜಿತ್ ಕದಂ ಮತ್ತು ಶಿವಾನಂದ ಬಿಜ್ಜರಗಿ ಇದ್ದರು.
ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ ಅನಂತ ಮಂಡಗಿ, ನ್ಯಾಯವಾದಿ, ಕಾರ್ಯಾಧ್ಯಕ್ಷ ಪಿ.ಎಸ್.ಸಾವ್ಕರ್, ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಎ.ಎಚ್.ಹವಾಲ್ದಾರ್, ಕಾನೂನು ನೆರವು ಇಲಾಖೆ ಸಮನ್ವಯಾಧಿಕಾರಿ ಪ್ರೊ.ಚೇತನಕುಮಾರ, ಪ್ರೊ. ಟಿ.ಎಂ ಮತ್ತು ಇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದ್ದಾರೆ.