ಚಂದ್ರಯಾನದಲ್ಲಿ ಬೆಳಗಾವಿಗರ ಛಾಪು
ಬೆಳಗಾವಿ :
ಭಾರತ ಶುಕ್ರವಾರ ನಭಕ್ಕೆ ಹಾರಿಸಿದ ಚಂದ್ರಯಾನ-3 ರಲ್ಲಿ ಬೆಳಗಾವಿಗರ ಪಾತ್ರ ಇದೀಗ ಸದ್ದು ಮಾಡುತ್ತಿದೆ.
ಬೆಳಗಾವಿಯವರೇ ಆಗಿರುವ ಸರ್ವೋ ಕಂಟ್ರೋಲ್ಸ್ ಆ್ಯಂಡ್ ಹೈಡ್ರಾಲಿಕ್ ಇಂಡಿಯಾ ಲಿಮಿಟೆಡ್ ಕಂಪನಿ ಸಿದ್ಧಪಡಿಸಿರುವ ಕೆಲ ಬಿಡಿ ಭಾಗಗಳು ಇದೀಗ ಚಂದ್ರಯಾನ ದಲ್ಲಿ ಗುರುತಿಸಿಕೊಂಡಿವೆ.
ಈ ಗಗನ ನೌಕೆಯಲ್ಲಿ ಬಳಸಿರುವ ಹೈಡ್ರೋಲಿಕ್ ಉಪಕರಣಗಳು, ವಾಲ್ವ್ ಗಳು, ಎಲೆಕ್ಟ್ರಾನಿಕ್ ಸೆನ್ಸರ್ ಗಳನ್ನು ಕಂಪನಿಯಿಂದ ರವಾನಿಸಲಾಗಿದೆ ಎಂದು ಇದರ ಮಾಲಿಕ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ದಡೋತಿ ತಿಳಿಸಿದ್ದಾರೆ.
ನಮ್ಮ ಕಂಪನಿ ಚಂದ್ರಯಾನ-2 ಮತ್ತು ಮಂಗಳಯಾನದ ಬಿಡಿ ಭಾಗಗಳನ್ನು ಪೂರೈಸಿದ್ದು 15 ವರ್ಷಗಳಿಂದ ಇಸ್ರೋ ಜತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಚಂದ್ರಯಾನ-3ರಲ್ಲೂ ಪ್ರಕಾಶ :
ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪೇಡ್ನೇಕರ ಅವರು ಶ್ರೀಹರಿಕೋಟಾದಲ್ಲಿ 2019 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ-2 ರಲ್ಲಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ ಈ ಸಲವೂ ತಮ್ಮ ಕೊಡುಗೆ ನೀಡಿದ್ದಾರೆ.