Breaking News

ಚಂದ್ರಯಾನದಲ್ಲಿ ಬೆಳಗಾವಿಗರ ಛಾಪು

Spread the love

ಚಂದ್ರಯಾನದಲ್ಲಿ ಬೆಳಗಾವಿಗರ ಛಾಪು

ಬೆಳಗಾವಿ :
ಭಾರತ ಶುಕ್ರವಾರ ನಭಕ್ಕೆ ಹಾರಿಸಿದ ಚಂದ್ರಯಾನ-3 ರಲ್ಲಿ ಬೆಳಗಾವಿಗರ ಪಾತ್ರ ಇದೀಗ ಸದ್ದು ಮಾಡುತ್ತಿದೆ.
ಬೆಳಗಾವಿಯವರೇ ಆಗಿರುವ ಸರ್ವೋ ಕಂಟ್ರೋಲ್ಸ್ ಆ್ಯಂಡ್ ಹೈಡ್ರಾಲಿಕ್‌ ಇಂಡಿಯಾ ಲಿಮಿಟೆಡ್ ಕಂಪನಿ ಸಿದ್ಧಪಡಿಸಿರುವ ಕೆಲ ಬಿಡಿ ಭಾಗಗಳು ಇದೀಗ ಚಂದ್ರಯಾನ ದಲ್ಲಿ ಗುರುತಿಸಿಕೊಂಡಿವೆ.

ಈ ಗಗನ ನೌಕೆಯಲ್ಲಿ ಬಳಸಿರುವ ಹೈಡ್ರೋಲಿಕ್ ಉಪಕರಣಗಳು, ವಾಲ್ವ್ ಗಳು, ಎಲೆಕ್ಟ್ರಾನಿಕ್ ಸೆನ್ಸರ್ ಗಳನ್ನು ಕಂಪನಿಯಿಂದ ರವಾನಿಸಲಾಗಿದೆ ಎಂದು ಇದರ ಮಾಲಿಕ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ದಡೋತಿ ತಿಳಿಸಿದ್ದಾರೆ.

 

ನಮ್ಮ ಕಂಪನಿ ಚಂದ್ರಯಾನ-2 ಮತ್ತು ಮಂಗಳಯಾನದ ಬಿಡಿ ಭಾಗಗಳನ್ನು ಪೂರೈಸಿದ್ದು 15 ವರ್ಷಗಳಿಂದ ಇಸ್ರೋ ಜತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಚಂದ್ರಯಾನ-3ರಲ್ಲೂ ಪ್ರಕಾಶ :
ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪೇಡ್ನೇಕರ ಅವರು ಶ್ರೀಹರಿಕೋಟಾದಲ್ಲಿ 2019 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ-2 ರಲ್ಲಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ ಈ ಸಲವೂ ತಮ್ಮ ಕೊಡುಗೆ ನೀಡಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

five + 18 =