ಮಹಾತ್ಮರ ಜೀವನ ಸಂದೇಶಗಳನ್ನು ಅರಿತು ಅಳವಡಿಸಿಕೊಳ್ಳಿ-ಅಂಬಿರಾವ ಪಾಟೀಲ.!
ಗೋಕಾಕ: ಮಹಾತ್ಮರ ಜಯಂತಿಗಳ ಆಚರಣೆಯ ಮೂಲಕ ಅವರ ಜೀವನ ಸಂದೇಶಗಳನ್ನು ಅರಿತು, ವರ್ತಮಾನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಹೇಳಿದರು.
ಅವರು, ಇಲ್ಲಿಯ ನಾಕಾ ನಂ-೧ರಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಉತ್ಸವ ಕಾರ್ಯಕ್ರಮ ಹಾಗೂ ಮಹಾಪ್ರಸಾದ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕ ಕಾಲದಲ್ಲಿ ನಾವಿದ್ದರೂ ಕೂಡ, ಧಾರ್ಮಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ನಿರ್ಲಕ್ಷಿಸಬಾರದು. ಜಯಂತಿ ಆಚರಣೆಗಳ ಮೂಲಕ ಮಹಾನ್ ವ್ಯಕ್ತಿಗಳ ಸಂದೇಶ ಅರಿಯಬೇಕು. ಉಪ್ಪಾರ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿ ಮಾಡಬೇಕು. ಸರಕಾರ ನೀಡುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಇಲ್ಲಿಯ ನಾಕಾ ನಂ-೧ರಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಉತ್ಸವ ಕಮೀಟಿ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನ್ಯಾಯವಾದಿಗಳಾದ ಎಮ್ ಬಿ ಮರೇಪ್ಪಗೋಳ, ಎಲ್ ಎನ್ ಬೂದಿಗೊಪ್ಪ, ಮುಖಂಡರುಗಳಾದ ಯಲ್ಲಪ್ಪ ಹಳ್ಳೂರ, ವಿಠ್ಠಲ ರಾಮನ್ನವರ, ಯಲ್ಲವ್ವ ಖಾನಪ್ಪನವರ, ಲಕ್ಷಿö್ಮÃ ಪಾಟೀಲ, ಶಶಿ ಕನ್ನನ್ನವರ ಸೇರಿದಂತೆ ಅನೇಕರು ಇದ್ದರು.