Breaking News

ಗೆಲ್ಲುವ ಕುದುರೆಗೆ ಮತ್ತೆ ಮನ್ನಣೆ ನೀಡಿದ ಬಿಜೆಪಿ : ಮೊದಲ ಪಟ್ಟಿಯಲ್ಲೇ ರಮೇಶ ಜಾರಕಿಹೊಳಿ ಹೆಸರು ಫಿಕ್ಸ್!

Spread the love

ಗೆಲ್ಲುವ ಕುದುರೆಗೆ ಮತ್ತೆ ಮನ್ನಣೆ ನೀಡಿದ ಬಿಜೆಪಿ : ಮೊದಲ ಪಟ್ಟಿಯಲ್ಲೇ ರಮೇಶ ಜಾರಕಿಹೊಳಿ ಹೆಸರು ಫಿಕ್ಸ್ !!

ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ಹಾಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ಹೆಸರು ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹೊರ ಹೊಮ್ಮಲಿದೆ. ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರ ಹೆಸರು ಮಾತ್ರ ಮುಂಚೂಣಿಯಲ್ಲಿದೆ. ಅವರಿಗೆ ಪೈಪೋಟಿ ನೀಡುವ ಇದರ ಅಭ್ಯರ್ಥಿಗಳ ಹೆಸರು ಪಕ್ಷದಲ್ಲಿ ಇಲ್ಲ. ಹೀಗಾಗಿ ಬಿಜೆಪಿಗೆ ಇಲ್ಲಿ ಯಾವ ಪೈಪೋಟಿ ಹಾಗೂ ಭಿನ್ನಮತದ ಪ್ರಶ್ನೆ ಉದ್ಭವಿಸದು. ಆದ್ದರಿಂದ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲೇ ಸಾಹುಕಾರ್ ಹೆಸರನ್ನು ಬಿಡುಗಡೆಗೊಳಿಸಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಈ ಬಾರಿ ಗೆದ್ದೇ ಗೆಲ್ಲುವ ಕ್ಷೇತ್ರಗಳ ಪೈಕಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ಹೆಸರು ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿದೆ. ಇಲ್ಲಿ ಬಿಜೆಪಿ ಗೆಲುವು ಅತ್ಯಂತ ಸಲೀಸು. ರಮೇಶ ಜಾರಕಿಹೊಳಿ ಅವರ ಗೆಲುವಿಗೆ ಯಾವುದೇ ಪಕ್ಷ ಬೇಕಿಲ್ಲ, ಸ್ವಂತ ಸಾಮರ್ಥ್ಯದಿಂದಲೇ ಗೆಲ್ಲುವ ವರ್ಚಸ್ಸನ್ನು ಅವರು ಹೊಂದಿದ್ದಾರೆ. ಅವರನ್ನು ಪ್ರೀತಿಸುವ ಅಪಾರ ಅಭಿಮಾನಿಗಳ ದಂಡೇ ಇಲ್ಲಿದೆ.

ಗೋಕಾಕ ಮತಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿರುವ ಛಲದಂಕ ಮಲ್ಲ ರಮೇಶ ಜಾರಕಿಹೊಳಿ ಅವರು ಈ ಬಾರಿಯೂ ಗೆಲ್ಲುವುದು ದೊಡ್ಡ ಮಾತಲ್ಲ. ಆದರೆ, ಅವರು ಎಷ್ಟು ಸಹಸ್ರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವುದು ಚುನಾವಣೆಗೂ ಸಾಕಷ್ಟು ಮೊದಲೇ ಚರ್ಚೆಯಾಗುತ್ತದೆ. ರಮೇಶ ಜಾರಕಿಹೊಳಿಯವರು ಚುನಾವಣೆ ಘೋಷಣೆಗೂ ಮುನ್ನ ಇಡೀ ಮತಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ಮಾಡಿದ್ದಾರೆ. ಪ್ರತಿಯೊಂದು ಗ್ರಾಮಕ್ಕೂ ತೆರಳಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ತಮ್ಮ ಅವಧಿಯಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾಮಗಾರಿಗಳನ್ನು ಮನೆಮನೆಗೂ ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರ ಗೆಲುವು ಈ ಬಾರಿ ಅತ್ಯಂತ ನಿರಾಯಾಸವಾಗಲಿದೆ.

ಕೈ ಭಿನ್ನಮತ ಸ್ಪೋಟ : ಕಾಂಗ್ರೆಸ್ ನಲ್ಲಿ ಈಗಾಗಲೇ  ಅಶೋಕ ಪೂಜಾರಿಯವರಿಗೆ ಟಿಕೆಟ್ ಘೋಷಣೆಯಾಗುವ ಸನ್ನಿವೇಶವಿದೆ. ಆದರೆ ಅವರಿಗೆ ಟಿಕೆಟನ್ನು ತಪ್ಪಿಸಲು ಇಬ್ಬರು ಆಕಾಂಕ್ಷಿಗಳು ಪ್ರಯತ್ನಿಸಿದ್ದಾರೆ. ಇದು ಗುಟ್ಟಾಗಿ ಉಳಿದಿಲ್ಲ. ಹೇಗಾದರೂ ಮಾಡಿ ಅಶೋಕ ಪೂಜಾರಿ ಅವರಿಗೆ ಟಿಕೆಟ್ ತಪ್ಪಿಸಲು ಅವರಿಬ್ಬರು ಪ್ರಯತ್ನಿಸುತ್ತಿದ್ದು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಇಬ್ಬರು ಅಭ್ಯರ್ಥಿಗಳು ತಮ್ಮಿಬ್ಬರಲ್ಲಿ ಯಾರಿಗೆ ಒಬ್ಬರಿಗಾದರೂ ಟಿಕೆಟ್ ದೊರೆತಲ್ಲಿ ಪರಸ್ಪರ ಸಹಕರಿಸುದಾಗಿ ಒಪ್ಪಂದ ಮಾಡಿಕೊಂಡಿರುವುದು ಗೊತ್ತಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಎದುರಿಸುವ ಅಭ್ಯರ್ಥಿಗಳ ಕೊರತೆ ಈ ಬಾರಿಯೂ ಎದ್ದು ಕಂಡಿದೆ. ಕಾಂಗ್ರೆಸ್ ಈ ಸಲ ಹೊಸ ಮುಖಗಳನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಮಹಾಂತೇಶ ಕಡಾಡಿ, ಚಂದ್ರಶೇಖರ ಕೊಣ್ಣೂರ ಕೈ ಪಕ್ಷದ ಟಿಕೆಟ್ ಗೆ ತೀವ್ರ ಹೆಣಗಾಟ ನಡೆಸಿದ್ದಾರೆ. ಈ ಮೂಲಕ ರಮೇಶ ಜಾರಕಿಹೊಳಿ ಅವರನ್ನು ಅವರಿಗೆ ಸದಾ ನೇರ ಪೈಪೋಟಿ ಒಡ್ಡುತ್ತಿದ್ದ ಅಶೋಕ ಪೂಜಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಶೋಕ ಪೂಜಾರಿ ಇದೀಗ ಕಳವಳಗೊಂಡಿದ್ದು ಅವರ ನಡೆ ನಿಗೂಢಗೊಂಡಿದೆ. ಮತ್ತೆ ತಮ್ಮ ಹಳೆಯ ಪಕ್ಷವಾಗಿರುವ ಜೆಡಿಎಸ್ ಗೆ ಮತ್ತೆ ವಾಪಾಸು ಹೋಗುತ್ತಾರೋ ಅಥವಾ ಕಾಂಗ್ರೆಸ್ ವಿರುದ್ಧ ಮುನಿಸಿಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

ರಮೇಶ ಜಾರಕಿಹೊಳಿ ಈ ಬಾರಿಯೂ ಗೋಕಾಕ ಮತಕ್ಷೇತ್ರದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಗೆದ್ದು ಬರುವುದು ಬಹುತೇಕ ನಿಶ್ಚಿತ ಎನಿಸಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಅವರ ಹೆಸರಿನ ಮೊಹರಿಗೆ ತನ್ನ ಚೊಚ್ಚಲ ಪಟ್ಟಿಯಲ್ಲೇ ಮುದ್ರೆ ಒತ್ತಲಿದೆ.

ಕ್ಯಾರೇ ಎನ್ನದ ವರಿಷ್ಠರು : ಗೋಕಾಕ ಮಾತ್ರವಲ್ಲ, ಇಡೀ ಬೆಳಗಾವಿ ಜಿಲ್ಲೆಯನ್ನೇ ಬಿಜೆಪಿಗೆ ಗೆದ್ದು ತರುವ ಹೊಣೆಗಾರಿಕೆ ರಮೇಶ ಜಾರಕಿಹೊಳಿಯವರ ಮೇಲಿದೆ. ಆದರೆ ಸ್ಥಳೀಯ ಬಜರಂಗದಳ ಹಾಗೂ ಬಿಜೆಪಿ ನಾಯಕರು ಸಾಹುಕಾರ್ ಟಿಕೆಟಿಗೆ ಅಪಸ್ವರ ಎತ್ತಿದ್ದಾರೆ. ಆದರೆ ಅದಕ್ಕೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕಿಲ್ಲ. ರಮೇಶ ಜಾರಕಿಹೊಳಿ ಅವರು ಈ ಹಿಂದೆ ಸಮ್ಮಿಶ್ರ ಸರಕಾರವನ್ನೇ ಕಿತ್ತೊಗೆದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಹತ್ತಾರು ಬಾರಿ ಪ್ರಯತ್ನಿಸಿ ಕೊನೆಗೂ ಅದರಲ್ಲಿ ಯಶಸ್ಸು ಕಂಡವರು. ಅಂತಹ ನಾಯಕನಿಗೆ ಟಿಕೆಟ್ ನಿರಾಕರಣೆ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದೆ. ಈ ಮೂಲಕ ರಮೇಶ ಜಾರಕಿಹೊಳಿ ಅವರು ಮತ್ತೊಮ್ಮೆ ಗೋಕಾಕ ಗೆಲ್ಲುವ ಸರದಾರ ಎನ್ನುವುದನ್ನು ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

sixteen + nineteen =