Breaking News

ಮಾಜಿ ಸಿಎಮ್ ವಿರುದ್ಧ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ.!

Spread the love

ಮಾಜಿ ಸಿಎಮ್ ವಿರುದ್ಧ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ.!


ಗೋಕಾಕ: ರಾಜ್ಯದಲ್ಲಿ ಬಿಜೆಪಿಗೆ ಹೋಗಿರುವ ದಲಿತರು ಹೊಟ್ಟೆಪಾಡಿಗಾಗಿ ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಮ್ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ದಲಿತ ಮೋರ್ಚಾ ಕಾರ್ಯಕರ್ತರು ಸೋಮವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸಿದ್ದರಾಮ್ಯನವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಮಾತನಾಡಿ, ಮಾಜಿ ಸಿಎಮ್ ಸಿದ್ದರಾಮಯ್ಯ ಬಿಜೆಪಿಗೆ ಹೋಗಿರುವ ದಲಿತರು ಹೊಟ್ಟೆಪಾಡಿಗಾಗಿ ಹೋಗಿದ್ದಾರೆ ಎಂದು ಹೇಳಿಕೆ ನೀಡಿರುವದು ಖಂಡನೀಯ. ಅವರು ದಲಿತರ ಕ್ಷಮೆಯಾಚಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯನವರು ವಿಚಿತ್ರವಾಗಿ, ಅಸಂಬದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವರಿಗೆ ಇಂತಹ ಹೇಳಿಕೆ ಶೋಭೆ ತರುವದಿಲ್ಲ. ಎಲ್ಲ ಸಮಾಜದವರಿಗೆ ಮುಕ್ತವಾದ ಸ್ವಾತಂತ್ರö್ಯವಿದೆ. ಅವರು ಯಾವ ಪಕ್ಷಕ್ಕೆ ಹೋಗಬೇಕೆನ್ನುವದು ಅವರ ಇಚ್ಛೆಗೆ ಬಿಟ್ಟದ್ದು, ಬಿಜೆಪಿಯಲ್ಲಿ ದಲಿತರು ಹೊಟ್ಟೆಪಾಡಿಗಾಗಿ ಇದ್ದಾರೆ ಎಂದು ಅವಮಾನಿಸಿದ್ದಾರೆ ಎಂದು ದೂರಿದರು.
ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡ ಎಸ್ ವ್ಹಿ ದೇಮಶೆಟ್ಟಿ ಮಾತನಾಡಿ, ಮಾಜಿ ಸಿಎಮ್ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ ಕಾಂಗ್ರೇಸ್ ಪಕ್ಷಕ್ಕೆ ಹೋದರು. ಸಿದ್ದರಾಮಯ್ಯನವರು ಪಕ್ಷಾಂತರವಾದ ಉದ್ಧೇಶಯಾವುದು ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಕಾಂಗ್ರೇಸ್ ಸೇರಿದ ನಂತರ ಕಾಂಗ್ರೇಸ್ ಪಕ್ಷದ ದಲಿತರನ್ನು ಅಧಿಕಾರದಿಂದ ದೂರವಿಟ್ಟಿದ್ದಾರೆ. ಈ ಕೂಡಲೇ ಸಿದ್ದರಾಮಯ್ಯನವರು ದಲಿತರ ಕ್ಷಮೆಯಾಚನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಭಾಸ ಸಣ್ಣತಿಪ್ಪಗೋಳ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಮೇಸ್ತಿç, ಸಂಜು ಗಾಡಿವಡ್ಡರ, ಎಸ್‌ಸಿ ಮೋರ್ಚಾ ನಗರ ಅಧ್ಯಕ್ಷ ಮಂಜುನಾಥ ಮಾವರಕರ, ಗ್ರಾಮೀಣ ಅಧ್ಯಕ್ಷ ವೀರಭದ್ರ ಗಂಡವ್ವಗೋಳ, ರವಿ ಕಡಕೋಳ, ಮುತ್ತುರಾಜ ಜಮಖಂಡಿ, ಶ್ರೀಶೈಲ ಯಕ್ಕುಂಡಿ, ಹರೀಶ ಬೂದಿಹಾಳ, ಯುಸೂಫ್ ಅಂಕಲಗಿ, ಅಬ್ದುಲಸತ್ತಾರ ಶಭಾಶಖಾನ, ಬೀರಪ್ಪ ಮೈಲನ್ನವರ, ಸುನೀಲ ಹಿರಗಣ್ಣವರ, ಸತೀಶ ಹರಿಜನ, ಗೋವಿಂಗ ಕಳ್ಳಿಮನಿ, ವಿನಾಯಕ ಮಾವರಕರ, ದೀಪಕ ಕಳ್ಳಿಮನಿ, ಪ್ರತಾಪ ಕದಮ, ವೀರಣ್ಣ ತಾಳಿಕೋಟಿ, ಶೇಖರ ದೊಡ್ಡಮನಿ, ನಾಗರಾಜ ಮರೇಪ್ಪಗೋಳ, ಲಕ್ಷö್ಮಣ ಖಡಕಭಾಂವಿ, ಕಿರಣ ಡಮಾಮಗರ, ಮಲ್ಲಿಕಜಾನ ತಳವಾರ, ರಾಜೇಶ್ವರಿ ಒಡೆಯರ, ಜ್ಯೋತಿ ಕೋಲಾರ, ಲಕ್ಕಪ್ಪ ತಹಶೀಲ್ದಾರ, ತವನರಾಜ ಬೆನ್ನಾಡಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

fourteen − four =