ನಮ್ಮ ಕ್ಲಿನಿಕ್ ಸದುಪಯೋಗ ಪಡೆದುಕೊಳ್ಳಲು ರಮೇಶ ಜಾರಕಿಹೊಳಿ ಕರೆ!

ಯುವ ಭಾರತ ಸುದ್ದಿ ಗೋಕಾಕ : ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ‘ನಮ್ಮ ಕ್ಲಿನಿಕ್’ ನೆರವಾಗಲಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಸತೀಶ ನಗರದಲ್ಲಿ ನಮ್ಮ ಕ್ಲಿನಿಕ್ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿ, ಮಾತನಾಡಿ ನಗರದಲ್ಲಿ ಸದ್ಯ ಒಂದು ಕಡೆ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ಕ್ಲೀನಿಕ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಯಾವುದೇ ಜ್ವರ, ನೆಗಡಿ, ಕೆಮ್ಮು ಹಾಗೂ ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ‘ನಮ್ಮ ಕ್ಲಿನಿಕ್’ ನೆರವಾಗಲಿದೆ ಎಂದು ಹೇಳಿದರು.
YuvaBharataha Latest Kannada News