Breaking News

ಇತ್ತೀಚಿನ ಸುದ್ದಿ

ಅಂತರ್ ಕಾಲೇಜು ಯುವ ಜನೋತ್ಸವ ಸ್ಪರ್ಧೆಯಲ್ಲಿ ಬೆಳಗಾವಿ ಬಿ.ವಿ.ಬೆಲ್ಲದ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಅಂತರ್ ಕಾಲೇಜು ಯುವ ಜನೋತ್ಸವ ಸ್ಪರ್ಧೆಯಲ್ಲಿ ಬೆಳಗಾವಿ ಬಿ.ವಿ.ಬೆಲ್ಲದ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಬೆಳಗಾವಿ : ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವತಿಯಿಂದ ನಡೆದ ಅಂತರ್ ವಲಯ ಯುವಜನೋತ್ಸವ ಸ್ಪರ್ಧೆ-2023 ರಲ್ಲಿ ಬೆಳಗಾವಿ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮಂಜುನಾಥ ಕಿತ್ತೂರು ಕಾರ್ಟೂನ್ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಮುಜಾಹಿದ್ ಡಿಬೇಟ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ …

Read More »

ಕಾಡ ಸಿದ್ದೇಶ್ವರ ಸ್ವಾಮೀಜಿ ಕಾರು ಅಪಘಾತ : ಇಬ್ಬರು ಸಾವು, ಸ್ವಾಮೀಜಿಯವರಿಗೂ ಗಂಭೀರ ಗಾಯ

ಕಾಡ ಸಿದ್ದೇಶ್ವರ ಸ್ವಾಮೀಜಿ ಕಾರು ಅಪಘಾತ : ಇಬ್ಬರು ಸಾವು, ಸ್ವಾಮೀಜಿಯವರಿಗೂ ಗಂಭೀರ ಗಾಯ ಬೆಳಗಾವಿ : ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಶನಿವಾರ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಆಗಮಿಸುತ್ತಿದ್ದ ಶಿವಾಪುರ ಗ್ರಾಮದ ಮುಪ್ಪಿನ ಕಾಡ ಸಿದ್ದೇಶ್ವರ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗಳ ಕಾರು ಭೀಕರ ಅಪಘಾತ ಸಂಭವಿಸಿದೆ. ಕಾರಲ್ಲಿದ್ದ ಇಬ್ಬರು ಮೃತಪಟ್ಟಿದ್ದು ಸ್ವಾಮೀಜಿ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. …

Read More »

ಮಳೆ ಅಭಾವ : ತರಕಾರಿ ಬೆಲೆ ತುಟ್ಟಿ,

ಮಳೆ ಅಭಾವ : ತರಕಾರಿ ಬೆಲೆ ತುಟ್ಟಿ ಯುವ ಭಾರತ ಸುದ್ದಿ ಬೆಂಗಳೂರು : ಪ್ರಸಕ್ತ ವರ್ಷ ಮುಂಗಾರು ಮಳೆ ಅಭಾವದ ಕಾರಣ ತರಕಾರಿ ಬೆಲೆಯಲ್ಲಿ ಜಾಸ್ತಿಯಾಗಿದೆ. ಇದರಿಂದ ಜನಸಾಮಾನ್ಯರು ತರಕಾರಿ ಕೊಂಡುಕೊಳ್ಳುವುದು ದುಸ್ತರವಾಗಿದೆ. ತರಕಾರಿ ಬೆಲೆ ಒಂದೇ ಸಮನೆ ಏರಿಕೆಯಾಗ ತೊಡಗಿದೆ. ಕಳೆದ ಕೆಲವು ದಿನಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು, ಗ್ರಾಮಾಂತರ ಸೇರಿ ಸುತ್ತಮುತ್ತ ಸುರಿದ ಅಧಿಕ ಮಳೆಯಿಂದಾಗಿ ತರಕಾರಿಗಳು ಹಾಳಾಗಿದ್ದು ಬೆಂಗಳೂರಿಗೆ ತರಕಾರಿಗಳು ಸರಿಯಾಗಿ ಪೂರೈಕೆ …

Read More »

ವಿದ್ಯುತ್ ಬಳಕೆ ಕುರಿತು ಮಾಹಿತಿ ಪಡೆಯಿರಿ

ವಿದ್ಯುತ್ ಬಳಕೆ ಕುರಿತು ಮಾಹಿತಿ ಪಡೆಯಿರಿ   ಯುವ ಭಾರತ ಸುದ್ದಿ ಬೆಂಗಳೂರು : ಪ್ರತಿ ತಿಂಗಳು ವಿದ್ಯುತ್ ಬಿಲ್ ನೋಡಿದಾಗೆಲ್ಲ ಅನೇಕರು ಟೆನ್ಷನ್ ಆಗುವುದು ಸಾಮಾನ್ಯ. ಬಿಲ್ ಬರುವವರೆಗೆ ಎಷ್ಟು ವಿದ್ಯುತ್ ಬಳಸಲಾಗಿದೆ ಎಂಬುದನ್ನು ನೀವು ತಿಳಿಯಬೇಕೆ ? ಇನ್ಮುಂದೆ ಎಷ್ಟು ವಿದ್ಯುತ್ ಬಳಸಿದ್ದೀರ ಎಂಬುದನ್ನು ಪ್ರತಿದಿನ ಚೆಕ್ ಮಾಡಬಹುದು. ಕರ್ನಾಟಕದಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಇರೋದ್ರಿಂದ ರಾಜ್ಯದ ಜನರಿಗೆ ಇದರಿಂದ ತುಂಬಾನೆ ಸಹಾಯವಾಗಬಹುದು. ಜಗತ್ತು ವೇಗವಾಗಿ …

Read More »

ಅರಣ್ಯ ವ್ಯಾಪ್ತಿಯನ್ನು ಶೇಕಡಾ 33ಕ್ಕೆ ಹೆಚ್ಚಿಸಲು ಸರ್ವ ಪ್ರಯತ್ನ : ಸಚಿವ ಈಶ್ವರ ಖಂಡ್ರೆ

ಅರಣ್ಯ ವ್ಯಾಪ್ತಿಯನ್ನು ಶೇಕಡಾ 33ಕ್ಕೆ ಹೆಚ್ಚಿಸಲು ಸರ್ವ ಪ್ರಯತ್ನ : ಸಚಿವ ಈಶ್ವರ ಖಂಡ್ರೆ ಯುವ ಭಾರತ ಸುದ್ದಿ ಚಿತ್ರದುರ್ಗ : ಪ್ರಸ್ತುತ ರಾಜ್ಯದಲ್ಲಿ ಶೇಕಡ 21ರಷ್ಟು ಅರಣ್ಯ ವ್ಯಾಪ್ತಿ ಇದ್ದು ಇದನ್ನು ಶೇ.33ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಅರಣ್ಯ ವನ್ಯಜೀವಿ ಮತ್ತು ಪರಿಸರಕ್ಕಾಗಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಭೋವಿಮಠದಲ್ಲಿ ಇಂದು ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದು ಆಶ್ರಮದ ಆವರಣದಲ್ಲಿ ಅರಳಿ …

Read More »

ಮೋದಿ ನೇತೃತ್ವದಲ್ಲಿ ಯೋಗ ದಿನ

ಮೋದಿ ನೇತೃತ್ವದಲ್ಲಿ ಯೋಗ ದಿನ ಯುವ ಭಾರತ ಸುದ್ದಿ ವಿಶ್ವಸಂಸ್ಥೆ: 9ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 21ರಂದು ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೋಗ ಅಧಿವೇಶನದ ನೇತೃತ್ವವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನವನ್ನು ವಾರ್ಷಿಕ ಸಂಸ್ಮರಣೆಯಾಗಿ ಆಚರಿಸಲು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮೋದಿ ಪ್ರಸ್ತಾಪಿಸಿದ ಒಂಭತ್ತು ವರ್ಷಗಳ ಬಳಿಕ, ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಐತಿಹಾಸಿಕ ಸಂಸ್ಮರಣೆಯ ಯೋಗ ಅಧಿವೇಶನ ನಿಗದಿಯಾಗಿದೆ. ಇದರ ನೇತೃತ್ವವನ್ನು ಸ್ವತಃ ಮೋದಿ …

Read More »

ನಿರ್ಮಾಣ ಹಂತದ ಶಾಲಾ ಕೊಠಡಿಯ ಗೋಡೆ ಕುಸಿದು ವಿದ್ಯಾರ್ಥಿ ಸಾವು

ನಿರ್ಮಾಣ ಹಂತದ ಶಾಲಾ ಕೊಠಡಿಯ ಗೋಡೆ ಕುಸಿದು ವಿದ್ಯಾರ್ಥಿ ಸಾವು ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೊಠಡಿಯ ಗೋಡೆ ಶುಕ್ರವಾರ ಬೆಳಿಗ್ಗೆ ಕುಸಿದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಮೂರನೇ ತರಗತಿ ವಿದ್ಯಾರ್ಥಿ ವಿಸ್ತೃತ ಬೆಳಗಲಿ(9) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಏಳನೇ ತರಗತಿ ವಿದ್ಯಾರ್ಥಿ ಪ್ರಜ್ವಲ ನಾಗವಿ ಎಂಬ ವಿದ್ಯಾರ್ಥಿ ಗಾಯಗೊಂಡಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಬೆಳಿಗ್ಗೆ …

Read More »

ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದ ಯುವಕ !

ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದ ಯುವಕ ! ಗದಗ : ಮುಂಡರಗಿ ತಾಲೂಕು ಡಂಬಳ ಗ್ರಾಮದ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡ ಬಗ್ಗೆ ಪತ್ರ ಬರೆದು ಗಮನಸೆಳೆದಿದ್ದಾನೆ. ನನಗೆ ಕನ್ಯೆ ಹುಡುಕಿ ಹುಡುಕಿ ಸಾಕಾಗಿದೆ. ಕನ್ಯೆಯನ್ನು ಹುಡುಕಿ ಕೊಡಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುತ್ತು ಹೂಗಾರ (27)ಕಳೆದ ಏಳು ವರ್ಷದಿಂದ ಕನ್ಯೆ ಅನ್ವೇಷಣೆ ನಡೆಸುತ್ತಿದ್ದಾನೆ. ಹೂಗಾರ ಸಮುದಾಯದ ಈತ …

Read More »

ವೈರಲ್ ಆಯ್ತು ಶಾಸಕರ ಸರಳತನ !

  ಬೈಂದೂರು : ಬೈಂದೂರು ಬಿಜೆಪಿ ಶಾಸಕ ಗುರುರಾಜ ಗಂಟಿಹೊಳೆ ಬುಧವಾರ ರಾತ್ರಿ ತುರ್ತು ಕೆಲಸದ ಪ್ರಯುಕ್ತ ಬೆಂಗಳೂರಿಗೆ ತೆರಳಲು ರೈಲು ಹಿಡಿಯಲು ಹೋಗುತ್ತಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ. ಶಾಸಕರಾಗಿಯೂ ಬೆನ್ನ ಮೇಲೆ ಬ್ಯಾಗ್ ನಂತಹ ಚೀಲ, ಬಿಳಿ ಪಂಚೆ, ಶರ್ಟು ಧರಿಸಿರುವ ದೃಶ್ಯವನ್ನು ಯಾರೋ ಸೆರೆಹಿಡಿದಿದ್ದು ಅವರ ಸರಳತನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಗುರುವಾರ ಚಂಡಮಾರುತ ಕಾರಣದಿಂದ ಮರವಂತೆಯಲ್ಲಿ ಕಡಲ ಕೊರೆತ ಉಂಟಾಗಿದೆ. …

Read More »

ಕೇರಳದಲ್ಲಿ ನಂದಿನಿಗೆ ಎದುರಾಯ್ತು ವಿರೋಧ

ಕೇರಳದಲ್ಲಿ ನಂದಿನಿಗೆ ಎದುರಾಯ್ತು ವಿರೋಧ ಯುವ ಭಾರತ ಸುದ್ದಿ ಬೆಂಗಳೂರು : ಕೆಲ ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ಅಮೂಲ್ ಮಾರಾಟಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ನೆರೆಯ ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟಕ್ಕೆ ವಿರೋಧ ವ್ಯಕ್ತವಾಗಿದೆ. ಕೇರಳದಲ್ಲಿ ನಂದಿನಿಯ ಮಾರಾಟ ಯೋಜನೆಯನ್ನು ಮರುಪರಿಶೀಲಿಸುವಂತೆ ಕರ್ನಾಟಕಕ್ಕೆ ಕೇರಳದಲ್ಲಿನ ಹಾಲು ಒಕ್ಕೂಟ ಪತ್ರ ಬರೆದಿದೆ. ಕೇರಳದ ಸ್ಥಳೀಯ ಹಾಲಿನ ಬ್ರಾಂಡ್ ಮಿಲ್ಮಾವನ್ನು ರಕ್ಷಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್‌ನ ಮಧ್ಯಸ್ಥಿಕೆಯನ್ನು …

Read More »