Breaking News

ಇತ್ತೀಚಿನ ಸುದ್ದಿ

ಕರ್ನಾಟಕದಲ್ಲಿ ನೂತನವಾಗಿ ಆಯ್ಕೆಯಾದ ಶೇ.55ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ : 97% ಕೋಟ್ಯಾಧಿಪತಿಗಳು

ಕರ್ನಾಟಕದಲ್ಲಿ ನೂತನವಾಗಿ ಆಯ್ಕೆಯಾದ ಶೇ.55ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ : 97% ಕೋಟ್ಯಾಧಿಪತಿಗಳು ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, ಕರ್ನಾಟಕದ ಹೊಸದಾಗಿ ಚುನಾಯಿತರಾದ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ವಿಶ್ಲೇಷಿಸಿದ 223ರಲ್ಲಿ 122 ಅಭ್ಯರ್ಥಿಗಳು ಅಂದರೆ 55%ರಷ್ಟು ಕ್ರಿಮಿನಲ್ ಮೊಕದ್ದಮೆ ಇರುವ ಅಭ್ಯರ್ಥಿಗಳು ಈಗ ಚುನಾಯಿತರಾಗಿದ್ದಾರೆ. ಸುಮಾರು …

Read More »

ಬೆಂಗಳೂರು ಟ್ರಾಫಿಕ್: ದ್ವಿಚಕ್ರ ವಾಹನದಲ್ಲೇ ಕುಳಿತು ಕೆಲಸ ಮಾಡಿದ ಯುವತಿ; ಫೋಟೋ ವೈರಲ್ !

ಬೆಂಗಳೂರು ಟ್ರಾಫಿಕ್: ದ್ವಿಚಕ್ರ ವಾಹನದಲ್ಲೇ ಕುಳಿತು ಕೆಲಸ ಮಾಡಿದ ಯುವತಿ; ಫೋಟೋ ವೈರಲ್ ! ಯುವ ಭಾರತ ಸುದ್ದಿ ಬೆಂಗಳೂರು: ವಿಶ್ವದ 2ನೇ ಟ್ರಾಫಿಕ್ ಜಾಮ್ ನಗರಿ ಎನ್ನುವ ಕುಖ್ಯಾತಿಗೆ ಪಾತ್ರವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಯುವತಿಯೊಬ್ಬರು ಲ್ಯಾಪ್ ಟಾಪ್ ಓಪನ್ ಮಾಡಿ ಕೆಲಸ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಟ್ವಿಟರ್ ಬಳಕೆದಾರರೊಬ್ಬರು ಸೋಪಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ …

Read More »

ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಒತ್ತಾಯ

ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಒತ್ತಾಯ ಬೆಳಗಾವಿ: ಈ ಭಾಗದ ಪ್ರಭಾವಿ ನಾಯಕ ,ಜನಪರ ಕಾಳಜಿ ಇರುವ ಹೆಮ್ಮೆಯ ಶಾಸಕರಾದ ಸತೀಶ ಜಾರಕಿಹೊಳಿ ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸತೀಶ ಅಭಿಮಾನಿ ಬಳಗ ಹಾಗೂ ವಿವಿಧ ಸಮುದಾಯಗಳಿಂದ ಕಾಂಗ್ರೆಸ್‌ ಹೈಕಮಾಂಡ ಒತ್ತಾಯಿಸಿದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ವಿವಿಧ ಸಮಾಜದ ಮುಖಂಡರು ಪ್ರತಿಭಟನೆ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದರು. ಸಮುದಾಯ ಆಧಾರ ಮೇಲೆ ದಲಿತ …

Read More »

ಡಿಕೆಶಿಗೆ ಸುಪ್ರೀಂ ಕೋರ್ಟಿನಿಂದ ತಾತ್ಕಾಲಿಕ ರಿಲೀಫ್

ಡಿಕೆಶಿಗೆ ಸುಪ್ರೀಂ ಕೋರ್ಟಿನಿಂದ ತಾತ್ಕಾಲಿಕ ರಿಲೀಫ್ ಯುವ ‍ಭಾರತ ಸುದ್ದಿ ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ,ಕೆ.ಶಿವಕುಮಾರ ಅವರಿಗೆ ಸುಪ್ರೀಂ ಕೋರ್ಟ್ ನಿಂದ ರಿಲೀಫ್ ಸಿಕ್ಕಿದೆ. ಡಿ.ಕೆ ಶಿವಕುಮಾರ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ತೆರವಿಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಡಿ.ಕೆ ಶಿವಕುಮಾರ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ತೆರವು ಕೋರಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಿಚಾರಣೆ ನಡೆಸಿತು. ಆದರೆ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ …

Read More »

ಪ್ರೇಮ ವಿವಾಹವಾದವರಲ್ಲೇ ಹೆಚ್ಚಿನ ವಿಚ್ಛೇದನಗಳಾಗುತ್ತಿವೆ : ಸುಪ್ರೀಂ ಕೋರ್ಟ್

ಪ್ರೇಮ ವಿವಾಹವಾದವರಲ್ಲೇ ಹೆಚ್ಚಿನ ವಿಚ್ಛೇದನಗಳಾಗುತ್ತಿವೆ : ಸುಪ್ರೀಂ ಕೋರ್ಟ್ ಯುವ ಭಾರತ ಸುದ್ದಿ ನವದೆಹಲಿ: ಪ್ರೇಮ ವಿವಾಹವಾದವರಲ್ಲೇ ಹೆಚ್ಚಿನ ವಿಚ್ಛೇದನಗಳು ಉಂಟಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಟೀಕಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂಜಯ ಕರೋಲ್ ಅವರ ಪೀಠವು ವೈವಾಹಿಕ ವಿವಾದದಿಂದ ಉದ್ಭವಿಸಿದ ವರ್ಗಾವಣೆ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಪ್ರಕರಣದ ವಕೀಲರು ವಿವಾಹವು ಪ್ರೇಮ ವಿವಾಹವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿ ಗವಾಯಿ ಅವರು ಪ್ರತಿಕ್ರಿಯಿಸಿ, ಹೆಚ್ಚಿನ …

Read More »

ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಯುವ ಭಾರತ ಸುದ್ದಿ ಬೆಂಗಳೂರು: ತರಗತಿ ಅವಧಿಯಲ್ಲಿ ಹಾಜರಾತಿ ಕೊರತೆಯಿಂದ 2023ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದ ಕಲಾ ಮತ್ತು ವಾಣಿಜ್ಯ ವಿಭಾಗದ 12,385 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅವಕಾಶ ಕಲ್ಪಿಸಿದೆ. ದ್ವಿತೀಯ ಪಿಯುಸಿಗೆ ತರಗತಿ ವಿದ್ಯಾರ್ಥಿಗಳಾಗಿ ನೋಂದಣಿ ಮಾಡಿಕೊಂಡಿದ್ದ ಈ ವಿದ್ಯಾರ್ಥಿಗಳು ಹಾಜರಾತಿ …

Read More »

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆಶಿ ಆಯ್ಕೆ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆಶಿ ಆಯ್ಕೆ ಯುವ ಭಾರತ ಸುದ್ದಿ ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟ ಲಭಿಸಿದೆ. ಮೇ 18ರ ಗುರುವಾರ ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಅಧಿಕೃತ ಘೋಷಣೆ ಆಗಲಿದೆ. ಬುಧವಾರ ಮಧ್ಯರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ …

Read More »

ಅತ್ಯಾಪ್ತರೊಂದಿಗೆ ಡಿಕೆಶಿ ಮಾತುಕತೆ !

ಅತ್ಯಾಪ್ತರೊಂದಿಗೆ ಡಿಕೆಶಿ ಮಾತುಕತೆ ! ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಬುಧವಾರವೂ ಮುಂದುವರಿದಿದೆ. ಪಟ್ಟು ಸಡಿಲಿಸದ ಕಾರಣ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವೊಲಿಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಡಿ.ಕೆ.ಶಿವಕುಮಾರ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಮನವೊಲಿಸಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ ದೆಹಲಿಯಲ್ಲಿರುವ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಡಿಕೆಶಿ ತಮ್ಮ ಆಪ್ತ ಶಾಸಕರೊಂದಿಗೆ ಚರ್ಚೆ …

Read More »

ದೇವಸ್ಥಾನದಿಂದ ಕದ್ದ ಆಭರಣಗಳನ್ನು 9 ವರ್ಷಗಳ ಬಳಿಕ ಹಿಂದಿರುಗಿಸಿದ ಕಳ್ಳ

ದೇವಸ್ಥಾನದಿಂದ ಕದ್ದ ಆಭರಣಗಳನ್ನು 9 ವರ್ಷಗಳ ಬಳಿಕ ಹಿಂದಿರುಗಿಸಿದ ಕಳ್ಳ ಯುವ ಭಾರತ ಸುದ್ದಿ ಭುವನೇಶ್ವರ : ದೇವಸ್ಥಾನದಿಂದ ಕಳ್ಳತನ ಮಾಡಿದ್ದ ಆಭರಣಗಳನ್ನು ಅನಾಮಧೇಯ ಕಳ್ಳನೊಬ್ಬ 9 ವರ್ಷಗಳ ಬಳಿಕ ಅದನ್ನು ಹಿಂತಿರುಗಿಸಿದ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ರಾಜಧಾನಿ ಭುವನೇಶ್ವರದ ಧೌಲಿ ಪ್ರದೇಶದಲ್ಲಿರುವ ಗೋಪಿನಾಥಪುರದ ಗೋಪಿನಾಥ ದೇವಸ್ಥಾನದಿಂದ 2014ರ ಮೇ ತಿಂಗಳಿನಲ್ಲಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಕಿವಿಯೋಲೆ, ಬಳೆಗಳು, ಕೊಳಲು ಮತ್ತು ತಲೆಯ ಕವಚ ಸೇರಿದಂತೆ ಒಟ್ಟು …

Read More »

ನಿವೃತ್ತಿ ಘೋಷಿಸಿದ ವೈಎಸ್‌ವಿ ದತ್ತ : ಕಡೂರಿನಲ್ಲಿ ಪಶ್ಚಾತ್ತಾಪದ ಪಾದಯಾತ್ರೆ

ನಿವೃತ್ತಿ ಘೋಷಿಸಿದ ವೈಎಸ್‌ವಿ ದತ್ತ : ಕಡೂರಿನಲ್ಲಿ ಪಶ್ಚಾತ್ತಾಪದ ಪಾದಯಾತ್ರೆ ಯುವ ‌ಭಾರತ ಸುದ್ದಿ ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತ ನಂತರ ಜೆಡಿಎಸ್​ನ ವೈಎಸ್​ವಿ ದತ್ತ ಅವರು ಈಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಗೂ ಚನಾವಣೆ ಸಮಯದಲ್ಲಿ ನಡೆದ ಬೆಳವಣಿಗೆಯಿಂದ ಪಶ್ಚಾತ್ತಾಪ ಪಟ್ಟಿರುವ ಅವರು ಕ್ಷೇತ್ರದಲ್ಲಿ ಪಶ್ಚಾತ್ತಾಪ ಪಾದಯಾತ್ರೆ ಕೈಗೊಂಡು ಜನರಲ್ಲಿ ಕ್ಷಮೆ ಕೋರಲು ನಿರ್ಧರಿಸಿದ್ದಾರೆ. ವಿಧಾನಸಭಾ …

Read More »