Breaking News

ಇತ್ತೀಚಿನ ಸುದ್ದಿ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿ ಕೋಟಾರಗಸ್ತಿಯವರಿಗೆ ಆತ್ಮೀಯ ಸನ್ಮಾನ, ಗೌರವಾರ್ಪಣೆ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿ ಕೋಟಾರಗಸ್ತಿಯವರಿಗೆ ಆತ್ಮೀಯ ಸನ್ಮಾನ, ಗೌರವಾರ್ಪಣೆ ಕುಂದಾಪುರ : ಧಾರ್ಮಿಕ ದತ್ತಿ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಯ ಸುಪ್ರಸಿದ್ಧ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಹಾಗೂ ಹೆಚ್ಚುವರಿಯಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾದ ಎಸ್.ಸಿ. (ರವಿ)ಕೋಟಾರಗಸ್ತಿ ಅವರನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸನ್ಮಾನಿಸಿ ಬಿಳ್ಕೊಡಲಾಯಿತು. ಮೂಲತಃ ವಿಜಯಪುರದವರಾದ ರವಿ ಕೋಟಾರಗಸ್ತಿ ಅವರು ಸವದತ್ತಿಯ ಯಲ್ಲಮ್ಮ ದೇವಸ್ಥಾನ …

Read More »

ಲೋಕಸಭಾ ಚುನಾವಣೆ ಬಜೆಟ್ ; ಡಾ. ಸೋನಾಲಿ ಟೀಕೆ

ಲೋಕಸಭಾ ಚುನಾವಣೆ ಬಜೆಟ್ ; ಡಾ. ಸೋನಾಲಿ ಟೀಕೆ ಬೆಳಗಾವಿ : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ಬಜೆಟ್ ಮಂಡಿಸಿದೆ. ಸಿದ್ದರಾಮಯ್ಯನವರು ನಮ್ಮದು “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ಮೂಲ ತಂತ್ರ ವೆಂದು ಅಭಿವೃದ್ಧಿ, ಸಾಮಾಜಿಕ ನ್ಯಾಯದ ಪರ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳಿರುವುದು ಅತ್ಯಂತ ಹಾಸ್ಯಾಸ್ಪದ ಎಂದು ಬಿಜೆಪಿ ನಾಯಕಿ ಡಾ. ಸೋನಾಲಿ ಸರನೋಬತ್ ಟೀಕಿಸಿದ್ದಾರೆ. ಈ ಬಜೆಟ್ ನೋಡಿದರೆ ಎಲ್ಲದೇ ಸರ್ವರಿಗೂ ಸಮಪಾಲು, …

Read More »

ಮೂರು ಕೃತಿಗಳ ಲೋಕಾರ್ಪಣೆ – ಗೌರವ ಸನ್ಮಾನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

ಮೂರು ಕೃತಿಗಳ ಲೋಕಾರ್ಪಣೆ – ಗೌರವ ಸನ್ಮಾನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಬೆಳಗಾವಿ : ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ ಇವರ ಸಹಯೋಗದಲ್ಲಿ ಶನಿವಾರ (ಜು.8 ) ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಕೇಂದ್ರ ಸಭಾಭವನದಲ್ಲಿ ಮೂರು ಕೃತಿಗಳ ಲೋಕಾರ್ಪಣೆ – ಗೌರವ ಸನ್ಮಾನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಬೆಳಗಾವಿ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಉದ್ಘಾಟಸಲಿದ್ದಾರೆ. ಧಾರವಾಡದ ಹಿರಿಯ ಸಾಹಿತಿ ಡಾ. …

Read More »

7 ರಂದು ಮಂಗಲ ಕಳಶ ಸ್ಥಾಪನೆ

7 ರಂದು ಮಂಗಲ ಕಳಶ ಸ್ಥಾಪನೆ ಬೆಳಗಾವಿ : ಪ್ರಸಕ್ತ ಸಾಲಿನ ಚಾರ್ತುಮಾಸ್ಯವನ್ನು ಬೆಳಗಾವಿಯಲ್ಲಿ ಆಚರಿಸಿಕೊಳ್ಳುತ್ತಿರುವ ಶ್ರೀ 108 ಪ್ರಸಂಗ ಸಾಗರಜಿ ಮುನಿಮಹಾರಾಜರ ವರ್ಷಾಯೋಗ ಮಂಗಲ ಕಳಶ ಸ್ಥಾಪನೆ ಕಾರ್ಯಕ್ರಮ ಜುಲೈ 7 ರಂದು ಬೆಳಗಾವಿ ಹಿಂದವಾಡಿಯ ಮಹಾವೀರ ಭವನದಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಉದ್ಯಮಿ ಗೋಪಾಲ ಜಿನಗೌಡ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಢಣ್ಣವರ ಉದ್ಯಮಿ …

Read More »

ವಿಧಾನಸಭೆ ಉಪಾಧ್ಯಕ್ಷರಾಗಿ ಶಾಸಕ ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ

ವಿಧಾನಸಭೆ ಉಪಾಧ್ಯಕ್ಷರಾಗಿ ಶಾಸಕ ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ ಬೆಂಗಳೂರು : ವಿಧಾನಸಭೆ ಉಪಾಧ್ಯಕ್ಷರಾಗಿ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು, ಈ ಸ್ಥಾನಕ್ಕೆ ಕಾಂಗ್ರೆಸ್‌ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ಕಣಕ್ಕಿಳಿಸಿತ್ತು ನಿನ್ನೆ ಬುಧವಾರ ಶಾಸಕ ರುದ್ರಪ್ಪ ಲಮಾಣಿ ಉಮೇದುವಾರಿಕೆ ಸಲ್ಲಿಸಿದ್ದರು. ಇಂದು ವಿಧಾನಸಭೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ರುದ್ರಪ್ಪ …

Read More »

ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ

ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ ದೆಹಲಿ : ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET), ರಾಜ್ಯ ಅರ್ಹತಾ ಪರೀಕ್ಷೆ (SET) ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (SLET) ಕನಿಷ್ಠ ಮಾನದಂಡವಾಗಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಪ್ರಕಟಿಸಿದೆ. ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಗಳ ಕುರಿತು ಜೂನ್ 30 ರಂದು …

Read More »

ಮುರಗೋಡ : ನಿವೃತ್ತ ಮುಖ್ಯ ಶಿಕ್ಷಕ ಡಿ.ವೈ. ಹೊಂಗಲ ಅವರಿಗೆ ಸನ್ಮಾನ

ಮುರಗೋಡ : ನಿವೃತ್ತ ಮುಖ್ಯ ಶಿಕ್ಷಕ ಡಿ.ವೈ. ಹೊಂಗಲ ಅವರಿಗೆ ಸನ್ಮಾನ ಮುರಗೋಡ : ಬದುಕಿನಲ್ಲಿ ಜನ ಹಿತ ಬಯಸುವಪ್ರವೃತ್ತಿಬೆಳೆಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿಭಾಯಿಸಿದಲ್ಲಿ ಜನಮನ್ನಣೆ ಗಳಿಸಲು ಸಾಧ್ಯವಿದೆ ಎಂದು ಹಿರಿಯ ಶಿಕ್ಷಕ ಎಂ.ಕೆ. ಪಾಟೀಲ ಹೇಳಿದರು. ಸರಕಾರಿ ಹಿರಿಯ ಮಾದರಿ ಶಾಲೆಯಲ್ಲಿ ಶಿಕ್ಷಕ-ಶಿಕ್ಷಕಿಯರ ವೃಂದ ಹಾಗೂ ಶಿಷ್ಯ ಬಳಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಹಿಮಾಪ್ರಾ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮುಖ್ಯ ಶಿಕ್ಷಕ ಡಿ.ವೈ. ಹೊಂಗಲ ಅವರು ನಿವೃತ್ತಿ ಹೊಂದಿದ್ದರ …

Read More »

ಹಿರೇಬೂದನೂರ : ಬಾಳುಮಾಮಾ ಜಾತ್ರೆ ಸಮಾರೋಪ

ಹಿರೇಬೂದನೂರ : ಬಾಳುಮಾಮಾ ಜಾತ್ರೆ ಸಮಾರೋಪ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀಸದ್ಗುರುಸಂತಬಾಳು ಮಾಮಾ ಜಾತ್ರೆ ಸಡಗರದಿಂದ ಸಮಾರೋಪಗೊಂಡಿತು. ಜಾತ್ರೆ ನಿಮಿತ್ತ ವಿಶೇಷ ಪೂಜೆ, ನಾಮಜಪ, ಡೊಳ್ಳಿನ ವಾಲಗ, ಮಹಾ ರುದ್ರಾಭಿಷೇಕ, ಮಂತ್ರಪಠಣ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ, ನೈವೇದ್ಯ, ತೀರ್ಥಪ್ರಸಾದ ವಿತರಣೆ, ಪಲ್ಲಕ್ಕಿ ಉತ್ಸವ, ಕುಂಭ ಮೇಳ, ಡೊಳ್ಳು ಕುಣಿತ, ಭಂಡಾರ ಎರಚಾಟ, ಡೊಳ್ಳಿನ ಪದ, ಟಗರಿನ ಕಾಳಗ, ಮಹಾಪ್ರಸಾದ ವಿತರಣೆ,ಸೇವೆಸಲ್ಲಿಸಿದ ಭಕ್ತರ ಸನ್ಮಾನ ಸೇರಿದಂತೆ ನಾನಾಧಾರ್ಮಿಕ …

Read More »

ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಲಿ

ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಲಿ ವಿಶ್ವಸಂಸ್ಥೆ : ಭಾರತ, ಬ್ರೆಜಿಲ್, ಜರ್ಮನಿ, ಜಪಾನ್ ಹಾಗೂ ಆಫ್ರಿಕಾ ದೇಶಗಳ ಪ್ರಾತಿನಿಧ್ಯಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ಸ್ಥಾನಗಳನ್ನು ಹೆಚ್ಚಿಸುವಂತೆ ಬ್ರಿಟನ್‌ ಕರೆ ನೀಡಿದೆ. ಭದ್ರತಾ ಮಂಡಳಿಯ ಸುಧಾರಣೆಗೆ ಇದು ಸಕಾಲವೆಂದು ಹೇಳಿದೆ. ವಿಶ್ವಸಂಸ್ಥೆಯಲ್ಲಿನ ಬ್ರಿಟನ್‌ ಕಾಯಂ ಪ್ರತಿನಿಧಿ ಮತ್ತು ಭದ್ರತಾ ಮಂಡಳಿಯ ಜುಲೈ ತಿಂಗಳ ಅಧ್ಯಕ್ಷತೆ ವಹಿಸಿರುವ ರಾಯಭಾರಿ ಬಾರ್ಬರಾ ವುಡ್‌ವರ್ಡ್ ಅವರು, ಭದ್ರತಾ ಮಂಡಳಿಯ ಜುಲೈ …

Read More »

ಗುರುವಿನ ಮಾರ್ಗದರ್ಶನದಂತೆ ಜೀವನದಲ್ಲಿ ಮುನ್ನಡೆಯಬೇಕು: ಕಿರಣ ಜಾಧವ

ಗುರುವಿನ ಮಾರ್ಗದರ್ಶನದಂತೆ ಜೀವನದಲ್ಲಿ ಮುನ್ನಡೆಯಬೇಕು: ಕಿರಣ ಜಾಧವ ಬೆಳಗಾವಿ : ಜೀವನದಲ್ಲಿ ಗುರುವಿಗೆ ವಿಶಿಷ್ಟವಾದ ಪ್ರಾಮುಖ್ಯತೆ ಇದೆ. ಆದ್ದರಿಂದಲೇ ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನ ಪಡೆದು ಯಶಸ್ಸಿನ ಶಿಖರವನ್ನೇರಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ ಹೇಳಿದರು. ಗಣಾಚಾರಿ ಗಲ್ಲಿಯ ಶ್ರೀ ದತ್ತ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು. ಗುರು ಪೂರ್ಣಿಮೆ ನಿಮಿತ್ತ ಶ್ರೀ ದತ್ತ ದೇವಸ್ಥಾನದಲ್ಲಿ ಪೂಜೆ, ಮಹಾ ಆರತಿ ನೆರವೇರಿಸಲಾಯಿತು. ಮಿತ್ರ ಮಂಡಲದ …

Read More »