ಖಾಲಿ ಗಾಡಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿದ ಕಿರಣ ಜಾಧವ ಯುವ ಭಾರತ ಸುದ್ದಿ ಬೆಳಗಾವಿ : ಅನ್ನದಾತ ರೈತರು ಆರ್ಥಿಕವಾಗಿ ಸದೃಢರಾದರೆ ಮಾತ್ರ ದೇಶದ ಬೆನ್ನೆಲುಬು ಸದೃಢವಾಗುತ್ತದೆ ಎಂದು ಬಿಜೆಪಿ ರಾಜ್ಯ ಒಬಿಸಿ ಯುವ ಮೋರ್ಚಾದ ಕಾರ್ಯದರ್ಶಿ ಹಾಗೂ ಸಕಲ ಮರಾಠಾ ಸಮಾಜದ ಸಂಚಾಲಕ ಕಿರಣ ಜಾಧವ ಹೇಳಿದರು. ಶ್ರೀ ಶೇತ್ಕರಿ ಸಂಘಟನೆ ಮಜಗಾವಿ ವತಿಯಿಂದ ಮಾ.4 ಮತ್ತು 5 ರಂದು ಕಿರಣ ಜಾಧವ ಅವರ ಸಹಕಾರದೊಂದಿಗೆ ಖಾಲಿ …
Read More »ಹೂವಿನ ಹಿಪ್ಪರಗಿ : ಅಭಿವ್ಯಕ್ತಿ ಸಂಭ್ರಮ ಕಾರ್ಯಕ್ರಮ
ಹೂವಿನ ಹಿಪ್ಪರಗಿ : ಅಭಿವ್ಯಕ್ತಿ ಸಂಭ್ರಮ ಕಾರ್ಯಕ್ರಮ ಯುವ ಭಾರತ ಸುದ್ದಿ ಬಸವನ ಬಾಗೇವಾಡಿ : ಮಕ್ಕಳನ್ನು ಬೆಳೆಸುವಲ್ಲಿ ತಾಯಂದಿರ ಪಾತ್ರ ಹಿರಿದಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಶ್ರೇಷ್ಠ ಸಂಸ್ಕಾರ ನೀಡಿದರೆ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಯನ್ನು ನೀಡಬಹುದು ಎಂದು ಬಸವನಬಾಗೇವಾಡಿಯ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ಚಿಂತಕ ಅಶೋಕ ಹಂಚಲಿ ಹೇಳಿದರು. ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಆಶೀರ್ವಾದ ಶಿಕ್ಷಣ ಸಂಸ್ಥೆಯ ಆಶೀರ್ವಾದ ಪಬ್ಲಿಕ್ ಸ್ಕೂಲ್ ಮತ್ತು ಪರಿವರ್ತನ ವಿದ್ಯಾಮಂದಿರದ …
Read More »ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪ್ರತ್ಯಕ್ಷ !
ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪ್ರತ್ಯಕ್ಷ ! ಯುವ ಭಾರತ ಸುದ್ದಿ ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆಯೊಂದು ಶನಿವಾರ ಕಾಣಿಸಿಕೊಂಡಿದೆ. ಮೊಸಳೆ ಬಾಯಿಗೆ ಹಗ್ಗದಿಂದ ಕಟ್ಟಿದ್ದರಿಂದ ಆಹಾರ ಸೇವಿಸಲಾಗದ ಮೊಸಳೆ ದಿಕ್ಕು ತೋಚದೆ ಹೆದ್ದಾರಿಗೆ ಬಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜನವಸತಿ ಪ್ರದೇಶ ಅಥವಾ …
Read More »ದ್ವಿತೀಯ ಪಿಯುಸಿ ಪರೀಕ್ಷೆ ; ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ದ್ವಿತೀಯ ಪಿಯುಸಿ ಪರೀಕ್ಷೆ ; ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಯುವ ಭಾರತ ಸುದ್ದಿ ಬೆಳಗಾವಿ : ಮಾರ್ಚ್ 9ರಿಂದ 29ರ ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಬೇರೆ ವಿದ್ಯಾಸಂಸ್ಥೆಗಳ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ …
Read More »ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ ?
ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ ? ಯುವ ಭಾರತ ಸುದ್ದಿ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಪಕ್ಷ ಬಯಸುತ್ತದೆ. ಈ ವಾರ 80ನೇ ವರ್ಷಕ್ಕೆ ಕಾಲಿಟ್ಟ ಯಡಿಯೂರಪ್ಪ ಅವರು ಈ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವರು ಕರ್ನಾಟಕ ಬಿಜೆಪಿಯ ಅತಿ ಎತ್ತರದ …
Read More »2ನೇ ಬಾರಿ ವಿಟಿಯು ಸಿಬ್ಬಂದಿ ತಂಡ ಚಾಂಪಿಯನ್
2ನೇ ಬಾರಿ ವಿಟಿಯು ಸಿಬ್ಬಂದಿ ತಂಡ ಚಾಂಪಿಯನ್ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿಯ ಪ್ರತಿಷ್ಠಿತ ವಿಘ್ನೇಶ್ವರ ಸ್ಪೋಟ್ಸ್ ಕ್ಲಬ್‌ವು ಸಿಬ್ಬಂದಿಯವರಿಗಾಗಿ ಕಳೆದ ೨೫ ವರ್ಷದಿಂದ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಬಾರಿ ರಜತ ಸಂಭ್ರಮದ ಕ್ರಿಕೆಟ್ ಪಂದ್ಯಾವಳಿಯನ್ನು ಬೆಳಗಾವಿಯ ಜಿಐಟಿ ಮೈದಾನದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿತ್ತು. ಪಂದ್ಯಾವಳಿಯಲ್ಲಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳು, ಹೆಸ್ಕಾಂ, ಎಂಆರ್, ವೇಗಾ ಹೆಲ್ಮೆಟ್ಸ್, ಡಾಕ್ಟರ್ಸ್ ಇಲೆವೆನ್ ಸೇರಿದಂತೆ ವಿವಿಧ ಕಂಪನಿಗಳ ಸಿಬ್ಬಂದಿ ಸೇರಿದಂತೆ ಒಟ್ಟು …
Read More »ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಸಂಸ್ಕಾರ ಇಲ್ಲದವನು ಪಶುಕ್ಕೆ ಸಮಾನ ಎಂಬ ಮಾತು ಇದೆ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವದು ತುಂಬಾ ಅಗತ್ಯವಿದೆ ಎಂದು ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಹೂವಿನಹಿಪ್ಪರಗಿಯ ಆಶೀರ್ವಾದ ಪಬ್ಲಿಕ್ ಸ್ಕೂಲ್ ಹಾಗೂ ಪರಿವರ್ತನಾ ವಿದ್ಯಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರಸ್ವತಿ ಪೂಜಾ ಸಮಾರಂಭ ಹಾಗೂ …
Read More »ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ 50% ರಿಯಾಯಿತಿ 15 ದಿನ ವಿಸ್ತರಣೆ
ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ 50% ರಿಯಾಯಿತಿ 15 ದಿನ ವಿಸ್ತರಣೆ ಯುವ ಭಾರತ ಸುದ್ದಿ ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ನೀಡಲಾಗಿದ್ದು ರಿಯಾಯಿತಿಯನ್ನು ಸಾರಿಗೆ ಇಲಾಖೆ ವಿಸ್ತರಿಸಿದೆ. ಬಾಕಿ ಇರುವ ದಂಡ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ಅವಧಿ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಈ ರಿಯಾಯಿತಿಯು ಮಾರ್ಚ್ 4 ರಿಂದ ಅನ್ವಯವಾಗಲಿದ್ದು 15 ದಿನಗಳ ಕಾಲಾವಕಾಶ …
Read More »ಅಭಿನವ ಶ್ರೀಗಳಿಂದ ಯೋಗ
ಅಭಿನವ ಶ್ರೀಗಳಿಂದ ಯೋಗ ಯುವ ಭಾರತ ಸುದ್ದಿ ರಡ್ಡೆರಹಟ್ಟಿ : ಅಥಣಿ ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳ್ಳಗ್ಗೆ 5 :30 ರಿಂದ 6 :30 ವರಗೆ ಪರಮ ಪೂಜ್ಯ ಶ್ರೊತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮೂಖಾರೂಢಮಠ ವಿಜಯಪುರ, ಶಾಂತಾಶ್ರಮ ಹುಬ್ಬಳ್ಳಿ ಇವರು ಅಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಶುಕ್ರವಾರ ಬೆಳಿಗ್ಗೆ 5:30 ಕ್ಕೆ ಪ್ರಾರಂಭಿಸಿದರು. ಮೊದಲನೇ ದಿನವಾದರೂ ಸಹ ಇಲ್ಲಿ ಯೋಗಾಸನ …
Read More »ಎಸ್‌ಪಿ ಕಿರುಕುಳ ಖಂಡಿಸಿ ಸಿಡಿದೆದ್ದ ಪತ್ರಕರ್ತರು
ಎಸ್‌ಪಿ ಕಿರುಕುಳ ಖಂಡಿಸಿ ಸಿಡಿದೆದ್ದ ಪತ್ರಕರ್ತರು ಯುವ ಭಾರತ ಸುದ್ದಿ ಶಿವಮೊಗ್ಗ : ಪತ್ರಕರ್ತ ಹಾಲಸ್ವಾಮಿ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿರುವ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಕ್ಷಮೆ ಕೇಳದಿದ್ದಲ್ಲಿ ಶಿವಮೊಗ್ಗದಲ್ಲಿ ನಡೆವ ಗೃಹ ಸಚಿವರ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಎಚ್ಚರಿಸಿವೆ. ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಸಂಘಟನೆಗಳು, ದಿನಾಂಕ ೨೭-೨-೨೦೨೩ ರಂದು ಶಿವಮೊಗ್ಗ ಹೊರವಲಯದ …
Read More »