Breaking News

2ನೇ ಬಾರಿ ವಿಟಿಯು ಸಿಬ್ಬಂದಿ ತಂಡ ಚಾಂಪಿಯನ್

Spread the love

2ನೇ ಬಾರಿ ವಿಟಿಯು ಸಿಬ್ಬಂದಿ ತಂಡ ಚಾಂಪಿಯನ್

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿಯ ಪ್ರತಿಷ್ಠಿತ ವಿಘ್ನೇಶ್ವರ ಸ್ಪೋಟ್ಸ್ ಕ್ಲಬ್‌ವು ಸಿಬ್ಬಂದಿಯವರಿಗಾಗಿ ಕಳೆದ ೨೫ ವರ್ಷದಿಂದ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಬಾರಿ ರಜತ ಸಂಭ್ರಮದ ಕ್ರಿಕೆಟ್ ಪಂದ್ಯಾವಳಿಯನ್ನು ಬೆಳಗಾವಿಯ ಜಿಐಟಿ ಮೈದಾನದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿತ್ತು.

ಪಂದ್ಯಾವಳಿಯಲ್ಲಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳು, ಹೆಸ್ಕಾಂ, ಎಂಆರ್, ವೇಗಾ ಹೆಲ್ಮೆಟ್ಸ್, ಡಾಕ್ಟರ್ಸ್‌ ಇಲೆವೆನ್ ಸೇರಿದಂತೆ ವಿವಿಧ ಕಂಪನಿಗಳ ಸಿಬ್ಬಂದಿ ಸೇರಿದಂತೆ ಒಟ್ಟು ೪೪ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಸೆಮಿಫೈನಲ್‌ನಲ್ಲಿ ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್ ತಂಡವನ್ನು ಸೋಲಿಸಿ, ಫೈನಲ್ ಪಂದ್ಯದಲ್ಲಿ ಸ್ವರಾಜ್ ಸ್ಪೋಟ್ಸ್ ಕ್ಲಬ್ ತಂಡವನ್ನು ಮಣಿಸಿ ಸತತವಾಗಿ ೨ನೇ ಬಾರಿ ವಿಟಿಯು ಸಿಬ್ಬಂದಿ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಸರಣಿಯುದ್ದಕ್ಕೂ ಅದ್ಭುತ್ ಪ್ರದರ್ಶನ ತೋರಿದ ವಿಟಿಯು ತಂಡದ ಮಂಗೇಶ ದೇವಲಾಪುರ ಸರಣಿ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದರು. ವಿಟಿಯು ಸಿಬ್ಬಂದಿಯ ಕ್ರಿಕೆಟ್ ತಂಡದ ಸಾಧನೆಗೆ ವಿಟಿಯುನ ಕುಲಪತಿಗಳಾದ ಪ್ರೊ.ವಿದ್ಯಾಶಂಕರ, ಕುಲಸಚಿವರಾದ ಪ್ರೊ.ಬಿ.ಇ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಟಿ.ಎ.ಶ್ರೀನಿವಾಸ, ಹಣಕಾಸು ಅಧಿಕಾರಿಗಳಾದ ಎಂ.ಇ.ಸಪ್ನಾ, ದೈಹಿಕ ನಿರ್ದೇಶಕರು ಹಾಗೂ ಸ್ಥಾನಿಕ ಅಭಿಯಂತರರು ಅಭಿನಂದಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

five × 4 =