Breaking News

ಬೆಳಗಾವಿ

ಬೆಳಗಾವಿ ಅಧಿವೇಶನಕ್ಕೆ ಸಿಸಿಟಿವಿ, ಡ್ರೋಣ್ ಎಷ್ಟು ಗೊತ್ತಾ ?

ಬೆಳಗಾವಿ ಅಧಿವೇಶನಕ್ಕೆ ಸಿಸಿಟಿವಿ, ಡ್ರೋಣ್ ಎಷ್ಟು ಗೊತ್ತಾ ? ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರೇಟ್ ಬಿಗಿ ಪೊಲೀಸ್ ಬಂದೋಬಸ್ ನಿಯೋಜಿಸಿದೆ. ಸುವರ್ಣ ವಿಧಾನಸೌಧ ಕೇಂದ್ರೀತವಾಗಿ ಸುಮಾರು 500 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ಬಂದೋಬಸ್ತಿಗಾಗಿ 6 ಡ್ರೋಣ್ ಬಳಸಲಾಗಿದೆ. ಸುವರ್ಣಸೌಧ ಬಳಿ ವಿವಿಧ ಸಂಘಟನೆಗಳು ಪ್ರತಿದಿನ ಧರಣಿ, ಪ್ರತಿಭಟನೆ ನಡೆಸಲಿವೆ. ಈ ಹಿನ್ನಲೆಯಲ್ಲಿ ಶಾಂತಿ …

Read More »

ಅಧಿವೇಶನ ಸಿದ್ದತೆ ವೀಕ್ಷಿಸಿದ ಸಭಾಪತಿ

ಅಧಿವೇಶನ ಸಿದ್ದತೆ ವೀಕ್ಷಿಸಿದ ಸಭಾಪತಿ ಯುವ ಭಾರತ ‌ಸುದ್ದಿ ಬೆಳಗಾವಿ : ಇಂದು ಬೆಳಿಗ್ಗೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲಕಾಪುರೆ ಅವರು ಪರಿಷತ್ ಸಭಾಂಗಣದಲ್ಲಿ ಮಾಡಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರು. ಅವರೊಂದಿಗೆ ಕಾರ್ಯದರ್ಶಿ ಕೆ .ಆರ್ .ಮಹಾಲಕ್ಷ್ಮೀ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Read More »

ಕಳೆಗಟ್ಟಿದ ಸುವರ್ಣಸೌಧ !

ಕಳೆಗಟ್ಟಿದ ಸುವರ್ಣಸೌಧ ! ಯುವ ಭಾರತ ಸುದ್ದಿ ಬೆಳಗಾವಿ : ಮತ್ತೊಂದು ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗುತ್ತಿದೆ. ಉತ್ತರ ಕರ್ನಾಟಕದ ಶಕ್ತಿಸೌಧ ಎಂದೇ ಗುರುತಿಸಲ್ಪಟ್ಟಿರುವ ಸುವರ್ಣ ಸೌಧದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಚಳಿಗಾಲದ ಅಧಿವೇಶನ ನಡೆಸುವ ಮೂಲಕ ಉತ್ತರ ಕರ್ನಾಟಕ ಜನತೆಯ ಸಮಸ್ಯೆಗೆ ಸ್ಪಂದಿಸಲಿದೆಯಱ ಎನ್ನುವುದು ಕಾದು ನೋಡಬೇಕಿದೆ. ಸೋಮವಾರದಿಂದ ಉಭಯ ತರನಗಳ ವಿಶೇಷ ಅಧಿವೇಶನ 15 ದಿನಗಳ ಕಾಲ ನಡೆಯಲಿದೆ. ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಇಲ್ಲಿಯ …

Read More »

ಕೊನೆಗೂ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ?

ಕೊನೆಗೂ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ? ಯುವ ಭಾರತ ಸುದ್ದಿ ಬೆಳಗಾವಿ : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಡಿಸೆಂಬರ್ 21ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆಯಾಗುವುದು ಬಹುತೇಕ ಖಚಿತ. ಜೆಡಿ ಎಸ್ ನಿಂದ ಪರಿಷತ್ ಸದಸ್ಯರಾಗಿದ್ದ ವೇಳೆ ಹೊರಟ್ಟಿ ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಸ್ಥಾನ ಅಲಂಕರಿಸಿದ್ದರು. ನಂತರ ಬಿಜೆಪಿ ಸೇರಿದ ಅವರು ಅವರಿಗೆ ಸಭಾಪತಿ ಸ್ಥಾನ ನೀಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರು. …

Read More »

ಸೋಮವಾರ ಬೆಳಗಾವಿಗೆ ಬರ್ತಾರಂತೆ ಮಹಾ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ !

ಸೋಮವಾರ ಬೆಳಗಾವಿಗೆ ಬರ್ತಾರಂತೆ ಮಹಾ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ! ಯುವ ಭಾರತ ಸುದ್ದಿ ಬೆಳಗಾವಿ : ಸೋಮವಾರದಿಂದ ಬೆಳಗಾವಿಯಲ್ಲಿ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ನಡೆಯಲಿದೆ. ಇದಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಗರದ ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳಾವವನ್ನು ಆಯೋಜಿಸುತ್ತಿದೆ. ಮಹಾಮೇಳಾವದಲ್ಲಿ ಪ್ರಧಾನ ಭಾಷಣಕಾರರಾಗಿ ಮಹಾರಾಷ್ಟ್ರ ಗಡಿ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಹಾತ ಕಣಂಗಲೆ ಸಂಸದ ಧೈರ್ಯಶೀಲ ಮಾನೆ ಆಗಮಿಸುತ್ತಿದ್ದಾರೆ. …

Read More »

ಬೆಳಗಾವಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿಗೆ ಮೂರು ಯೂನಿವರ್ಸಿಟಿ ಬ್ಲೂ

ಬೆಳಗಾವಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿಗೆ ಮೂರು ಯೂನಿವರ್ಸಿಟಿ ಬ್ಲೂ ಯುವ ಭಾರತ ಸುದ್ದಿ ಬೆಳಗಾವಿ : ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು 2022-23ನೇ ಶೈಕ್ಷಣಿಕ ವರ್ಷದಲ್ಲಿ ಯೂನಿವರ್ಸಿಟಿ ಬ್ಲೂಗೆ ಬೆಳಗಾವಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ. ದೇವೇಂದ್ರ ಸಣ್ಣಮ್ಮನವರ್ ಕಬಡ್ಡಿಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದರು. ತುಷಾರ್ ಪವಾರ್ ಮತ್ತು ತೇಜಸ್ ಇಂಚಲ ಫುಟ್‌ಬಾಲ್ (ಪುರುಷರು)ನಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. …

Read More »

ಬೆಳಗಾವಿ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸುನೀಲ ಮೂಗಿ ಅಧಿಕಾರಿ ಸ್ವೀಕಾರ

ಬೆಳಗಾವಿ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸುನೀಲ ಮೂಗಿ ಅಧಿಕಾರಿ ಸ್ವೀಕಾರ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಜಿಲ್ಲಾ ಖಜಾನೆ ಇಲಾಖೆಯ ಸಾಹಾಯಕ ನಿರ್ದೇಶಕರಾಗಿ ಸುನೀಲ ವಿಶ್ವನಾಥ ಮೂಗಿ ಅವರು ಅಧಿಕಾರ ವಹಿಸಿಕೊಂಡರು. ಸುನೀಲ ಮೂಗಿ ಅವರು ಈ ಹಿಂದೆ ಬೈಲಹೊಂಗಲದ ಉಪ ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Read More »

ಜೆಡಿಎಸ್ ಪಕ್ಷದ ವಿವಿಧ ವಾರ್ಡ್ ಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಜೆಡಿಎಸ್ ಪಕ್ಷದ ವಿವಿಧ ವಾರ್ಡ್ ಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಯುವ ಭಾರತ ಸುದ್ದಿ ಇಂಡಿ : ನಗರದ ವಿವಿಧ ವಾರ್ಡ್ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆನ್ನು ಜೆಡಿಎಸ್ ಅಧ್ಯರಾದ ಬಿ ಡಿ ಪಾಟೀಲರು ಪಕ್ಷದ ಕಚೇರಿಯಲ್ಲಿ ನೇಮಕ ಮಾಡಿದರು.ನಂತರ ಮಾತನಾಡಿ, ಶ್ರಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವ ಪಕ್ಷ ಜೆಡಿಎಸ್ ಆಗಿದ್ದು ‌.ಪಂಚರತ್ನ ಕಾರ್ಯಕ್ರಮ ಜಾರಿಗೆ ತರಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸಂಕಲ್ಪ ಮಾಡಿದ್ದಾರೆ,ಬಡವರ …

Read More »

ಸಮ್ಮೇದ್ ಶಿಖರ್ಜಿ ರಕ್ಷಣೆಗೆ ಜೈನರ ಮೊರೆ

ಸಮ್ಮೇದ್ ಶಿಖರ್ಜಿ ರಕ್ಷಣೆಗೆ ಜೈನರ ಮೊರೆ ಯುವ ಭಾರತ ಸುದ್ದಿ ಬೆಳಗಾವಿ : ಜೈನರ ಪವಿತ್ರ ಸ್ಥಳ ಸಮ್ಮೇದ್ ಶಿಖರ್ ರಕ್ಷಣೆ ಮಾಡುವಂತೆ ಒತ್ತಾಯಿಸಿ ಜೈನ ಬಾಂಧವರು ಬೆಳಗಾವಿಯಲ್ಲಿಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ರವಾನಿಸಿದರು. 20 ತೀರ್ಥಂಕರರು ಮತ್ತು 20 ಕೋಟಿ ಜೈನರು ಮೋಕ್ಷ ಪಡೆದಿರುವ ಪವಿತ್ರ ಸ್ಥಳ ಸಮ್ಮೇದ ಶಿಖರ್ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಜಾರ್ಖಂಡ್ ಸರ್ಕಾರಗಳು ಯಾವುದೇ ಅಭಿವೃದ್ಧಿ …

Read More »

ಬೆಳಗಾವಿ ಅಧಿವೇಶನಕ್ಕೆ ಪೊಲೀಸ್ ಸರ್ಪಗಾವಲು !

ಬೆಳಗಾವಿ ಅಧಿವೇಶನಕ್ಕೆ ಪೊಲೀಸ್ ಸರ್ಪಗಾವಲು ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ವಿಧಾನ ಮಂಡಲದ ಅಧಿವೇಶನಕ್ಕೆ ಈ ಸಲ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ವಿವರ ಇಂತಿದೆ. ಎಸ್.ಪಿ- 06 , ಹೆಚ್ಚುವರಿ ಎಸ್.ಪಿ. – 11 , ಡಿ.ಎಸ್.ಪಿ -43 , ಪಿ.ಐ- 95 , ಪಿ.ಎಸ್.ಐ- 241 , ಎ.ಎಸ್.ಐ -298 , ಹೆಚ್.ಸಿ. …

Read More »