ಸಿಎಂ ಭೇಟಿಯಾದ ಚಂದರಗಿ : ಜತ್ತ, ಅಕ್ಕಲಕೋಟೆ ಕನ್ನಡಿಗರ ಸಭೆ ನಡೆಸುವ ವಾಗ್ದಾನ
ಯುವ ಭಾರತ ಸುದ್ದಿ ಬೆಳಗಾವಿ :
ಮಹಾರಾಷ್ಟ್ರ ಸಹಿತ ಹೊರನಾಡ ಕನ್ನಡಿಗರಿಗೆ ಕರ್ನಾಟಕ
ಸರಕಾರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಚರ್ಚಿಸಲು ಕರ್ನಾಟಕ ಗಡಿ
ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು
ಬೆಳಗಾವಿಗೆ ಕಳಿಸಲಾಗುವದು. ಕೆ ಎಲ್ ಇ
ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತ್ತು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಸಹಿತ ಜತ್ತ,
ಅಕ್ಕಲಕೋಟೆ ಕನ್ನಡಿಗರೊಂದಿಗೆ ಸಭೆ ನಡೆಸಿ ಕೈಕೊಳ್ಳುವ ನಿರ್ಧಾರಕ್ಕೆ ತಮ್ಮ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಗಳವಾರ ಸಂಜೆ ಭರವಸೆ ನೀಡಿದರು.
ಕನ್ನಡ ಭವನದಲ್ಲಿಯ ರಂಗ ಮಂದಿರದ ಉದ್ಘಾಟನೆಗೆ ಆಗಮಿಸಿದ್ದ ಅವರನ್ನು ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಕ್ರಿಯಾ ಸಮಿತಿ ಮತ್ತು ಜತ್ತ ಕನ್ನಡಿಗರ ನಿಯೋಗವು ಭೆಟ್ಟಿಯಾದ ಸಂದರ್ಭದಲ್ಲಿ ಬೊಮ್ಮಾಯಿ
ಅವರು ಮಾತನಾಡಿ,ಜತ್ತ ಕನ್ನಡಿಗರ ಸಮಸ್ಯೆಗಳ ಬಗ್ಗೆ ತಮಗೆ ಸಂಪೂರ್ಣವಾಗಿ ಅರಿವಿದ್ದು ಅವರ ನೆರವಿಗೆ ತಮ್ಮ ಸರಕಾರ ಬದ್ಧವಾಗಿದೆ ಎಂದರು.
ಪ್ರಭಾಕರ ಕೋರೆ,ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ,ರಮೇಶ ಸೊಂಟಕ್ಕಿ,
ಮೈನೋದ್ದೀನ್ ಮಕಾನದಾರ,ಶಂಕರ ಬಾಗೇವಾಡಿ,ರಾಜು ಸಂಕಪಾಳ,ಸಾಗರ್
ಬೋರಗಲ್ಲ,ವಿರೇಂದ್ರ ಗೋಬರಿ,ನಿತಿನ್ ಮುಕರಿ,ಶಿವನಗೌಡ ಪಾಟೀಲ ಜತ್ತ
ಕನ್ನಡಿಗರ ಮುಖಂಡರಾದ ರಾಜೇಂದ್ರ
ಬಿರಾದಾರ,ಅಮಗೊಂಡ ಪಾಂಢರೆ,
ಧರ್ಮರಾಯ ಸುಸಲಾದ,ವಿಠ್ಠಲ
ಸೊನಕನಳ್ಳಿ,ಚಂದ್ರಶೇಖರ ಕಾರ್ಕಳ
ಮುಂತಾದವರು ಮುಖ್ಯಮಂತ್ರಿಗಳನ್ನು
ಭೆಟ್ಟಿಯಾದರು.