Breaking News

ಚಿಕ್ಕನಂದಿ-ಹೀರೆನಂದಿ ರಸ್ತೆ ಕಾಮಗಾರಿ ಚಾಲನೆ.!

Spread the love

ಚಿಕ್ಕನಂದಿ-ಹೀರೆನಂದಿ ರಸ್ತೆ ಕಾಮಗಾರಿ ಚಾಲನೆ.!

ಯುವ ಭಾರತ ಸುದ್ದಿ, ಗೋಕಾಕ್:

ಚಿಕ್ಕನಂದಿ-ಹೀರೆನಂದಿ ರಸ್ತೆ ಕಾಮಗಾರಿ ಚಾಲನೆ.!
ಗೋಕಾಕ: ಸಚಿವ ರಮೇಶ ಜಾರಕಿಹೊಳಿ ಅವರು ಸತತ ಪ್ರಯತ್ನದಿಂದ ಗೋಕಾಕ ಮತಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಕ್ಷೇತ್ರದ ಜನತೆ ಸಹಕರಿಸುವಂತೆ ಸಚಿವರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ ಹೇಳಿದರು.
ಅವರು, ಚಿಕ್ಕನಂದಿ-ಹೀರೆನಂದಿ ವರೆಗೆ 3.5 ಕೀ.ಮಿ 2.5 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗೋಕಾಕ ಮತಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಸಚಿವರ ಮುತುವರ್ಜಿಯಿಂದ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರವು ಮಾದರಿಯಾಗಲಿದೆ ಎಂದರು.
ಜಿಪಂ ಸದಸ್ಯರಾದ ಮಡ್ಡೆಪ್ಪ ತೋಳಿನವರ, ತಾಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಕ, ಮುಖಂಡರಾದ ಮಾರುತಿ ಕಟ್ಟಿಕಾರ, ರಾಯಪ್ಪ ನಾಯ್ಕ, ಹನಮಂತ ಅರಬನ್ನವರ, ಈಶ್ವರ ಪಾಟೀಲ, ಜಗದೀಶ್ ಕಂಬಾರ, ಆನಂದ ನಂದಿ, ಸುಭಾಸ ನಂದಿ, ಬಾಲಚಂದ್ರ ಬನವಿ, ಬಸವರಾಜ ಜಾಲಿಕಟ್ಟಿ, ಡಾ.ಬಸವರಾಜ ಗೌಡರ, ಗುತ್ತಿಗೇದಾರ ಡಾ. ಹನಮಂತ ಯಡ್ರಾವಿ,ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಗಾಣಿಗೇರ, ಹಿಂದುಳಿದ ವರ್ಗಗಳ ಅಧಿಕಾರಿ ರಾಮಣ್ಣ ಬಿಸಿರೊಟ್ಟಿ ಸೇರಿದಂತೆ ಅನೇಕರು ಇದ್ದರು.

 

 


Spread the love

About Yuva Bharatha

Check Also

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!!

Spread the loveನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!! ಗೋಕಾಕ: ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು …

Leave a Reply

Your email address will not be published. Required fields are marked *

three × 5 =