Breaking News

ಗ್ರಾಪಂಗೆ ಬಂದಿದ್ದ ಭ್ರಷ್ಟ ಪಿಡಿಒ ಒಂದೇ ತಾಸಿನಲ್ಲಿ ಮಾಯ!

Spread the love

ಗ್ರಾಪಂಗೆ ಬಂದಿದ್ದ ಭ್ರಷ್ಟ ಪಿಡಿಒ ಒಂದೇ ತಾಸಿನಲ್ಲಿ ಮಾಯ!

 

ಯುವ ಭಾರತ ಸುದ್ದಿ, ಬೆಳಗಾವಿ:  ತಾಲೂಕು ಪಂಚಾಯತ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದ ಭ್ರಷ್ಟ ಪಿಡಿಒ ಶ್ರೀದೇವಿ ಹಿರೇಮಠ ಗುರುವಾರದಂದು ಸುಳೇಭಾವಿಯ ಗ್ರಾಮ ಪಂಚಾಯತ್ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದ ಒಂದು ತಾಸಿನಲ್ಲಿಯೇ ಅಲ್ಲಿಂದ ಕಾಲ್ಕಿತ್ತಿದ್ದು, ಇದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯ ಆದೇಶದ ಮೇರೆಗೆ ಅಧಿಕಾರ ಸ್ವೀಕರಿಸಿರುವುದಾಗಿ ಹಾಜರಿ ಪುಸ್ತಿಕೆಯಲ್ಲಿ ನಮೂದಿಸಿ ಭ್ರಷ್ಟ ಪಿಡಿಒ ಹಿರೇಮಠ ಸಹಿ ಮಾಡಿದ್ದಾರೆ. ಹಲವು ದಿನಗಳ ಬಳಿಕ ತಾವು ಕುಳಿತುಕೊಳ್ಳುತ್ತಿದ್ದ ಕುರ್ಚಿ ಇದು ಹೂವಿನ ಹಾಸಿಗೆಯಲ್ಲ ಮುಳ್ಳಿನ ಹಾಸಿಗೆ ಎಂದು ತಿಳಿದು ಒಂದೇ ತಾಸಿನಲ್ಲಿನಲ್ಲಿ ಅಲ್ಲಿಂದ ಎದ್ದು ಕಾರು ಹತ್ತಿ ವಾಪಸ್ಸು ಹೋಗಿದ್ದಾರೆ.

ಪಿಡಿಒ ಬಂದಿದ್ದಾರೆ ಎಂದು ಕೆಲವು ಸಾರ್ವಜನಿಕರು ಗ್ರಾಪಂ ಕಚೇರಿಗೆ ತಮ್ಮ ಕೆಲಸಗಳಿಗಾಗಿ ಆಗಮಿಸಿದ್ದರು. ಆದರೆ ಸಾರ್ವಜನಿಕರನ್ನು ಸರಿಯಾಗಿ ಭೇಟಿಯಾಗದೇ ನಾಳೆಗೆ ನೋಡೋಣ ಎಂದು ನಯವಾಗಿಯೇ ಅವರ ಮಾತನ್ನು ತಿರಸ್ಕರಿಸಿ ತೆರಳಿದ್ದಾರೆ ಎಂದು ನೊಂದ ಜನರು ‘ಯುವಭಾರತ’ಕ್ಕೆ ತಿಳಿಸಿದ್ದಾರೆ.

ಇನ್ನೊಂದು ಕಡೆಗೆ ಭ್ರಷ್ಟ ಪಿಡಿಒ ಹಿರೇಮಠ ಅವರಿಂದ ನೊಂದ ಕುಟುಂಬಸ್ಥರು ಗ್ರಾಪಂ ಕಚೇರಿಗೆ ಬಂದು ಮುತ್ತಿಗೆ ಹಾಕುವಷ್ಟರಲ್ಲಿಯೇ ಅಲ್ಲಿಂದ ಪಿಡಿಒ ಮಾಯವಾವಾಗಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.


Spread the love

About Yuva Bharatha

Check Also

ಡಾ.ಅಪ್ಪಾಸಾಹೇಬ್ ನಾಯ್ಕಲ್‌ಗೆ ಉತ್ತಮ ಗ್ರಂಥಪಾಲಕ ರಾಜ್ಯಪ್ರಶಸ್ತಿ.!

Spread the loveಡಾ.ಅಪ್ಪಾಸಾಹೇಬ್ ನಾಯ್ಕಲ್‌ಗೆ ಉತ್ತಮ ಗ್ರಂಥಪಾಲಕ ರಾಜ್ಯಪ್ರಶಸ್ತಿ.! ಬೆಳಗಾವಿ: ಭಾರತ ಗ್ರಂಥಾಲಯ ವಿಜ್ಞಾನ ಪಿತಾಮಹ, ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ೧೩೧ನೇ …

Leave a Reply

Your email address will not be published. Required fields are marked *

15 − 10 =