ವಾಣಿಜ್ಯ ಉತ್ಸವ ಶುಕ್ರವಾರ

ಯುವ ಭಾರತ ಸುದ್ದಿ ಬೆಳಗಾವಿ :
ನಗರದ ಕೆ ಎಲ್ ಇ ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ( ಜಕ್ಕೇರಿ ಹೊಂಡ ಗೋವಾ ವೇಸ್) ದಲ್ಲಿ ವಾಣಿಜ್ಯ ಉತ್ಸವ ಆರಂಭ-22 ,ವನ್ನು ದಿನಾಂಕ 16/12/2022 ರಂದು ಬೆಳಿಗ್ಗೆ 9:೦೦ ಗಂಟೆಗೆ ಕಾಲೇಜು ಆವರಣದಲ್ಲಿ ಉದ್ಘಾಟಿಸಲಾಗುವುದು. ಕರ್ನಾಟಕ ಲಾ ಸೊಸೈಟಿಯ ನಿರ್ವಹಣೆ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರೊ. ಡಾ.ಶ್ರೀನಿವಾಸ ಆರ್. ಪಾಟೀಲ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಶ್ರೀದೇವಿ ಹಿರೇಮಠ ವಹಿಸಲಿದ್ದಾರೆ ಎಂದು ಪ್ರೊ.ಪವನ ಜಾಂಗಳೆ ತಿಳಿಸಿದ್ದಾರೆ.
YuvaBharataha Latest Kannada News