Breaking News

ಮತ್ತೆ ಕೊರೊನಾ ಅರ್ಭಟ ?

Spread the love

ಮತ್ತೆ ಕೊರೊನಾ ಅರ್ಭಟ ?

ಯುವ ಭಾರತ ಸುದ್ದಿ ದೆಹಲಿ :
ಇನ್ನು ಇವರ 15 ರಿಂದ 20 ದಿನಗಳಲ್ಲಿ ಕೋವಿಡ್ ಪರಯಷ್ಠೆಯತ್ತ ತಲುಪಲಿದೆ ಎಂದು ಕೋವಿಡ್ ತಜ್ಞ ರಘುವಿಂದರ್ ಪರಾಶರ ತಿಳಿಸಿದ್ದಾರೆ.

ಆದರೆ, ಇದು ಬಹಳ ಪರಿಣಾಮಕಾರಿಯಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಂದಿನ 20 ದಿನಗಳಲ್ಲಿ ಕೋವಿಡ್ ಗರಿಷ್ಠ ಮಟ್ಟ ತಲುಪಲಿದೆ. ದೇಶದಲ್ಲಿ ಕೋವಿಡ್ ಗರಿಷ್ಠ ಮಟ್ಟ ತಲುಪಿ ಆತಂಕ ಮೂಡಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ನಂತರ ಕೆಲವೇ ದಿನಗಳಲ್ಲಿ ಇದು ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ. ಇದರಿಂದ ಜನ ಆತಂಕ ಪಡಬೇಕಾಗಿಲ್ಲ. ಇದು ಆರಂಭದ ಕೋವಿಡ್ ನಂತೆ ಸಾವುನೋವುಗಳಿಗೆ ಕಾರಣವಾಗಬಲ್ಲ ಆತಂಕವಲ್ಲ. ಸಾಮಾನ್ಯ ಶೀತ ಹರಡುವ ವೈರಸ್ ನಂತೆ ಇರುತ್ತದೆ. ಕೆಮ್ಮು, ನೆಗಡಿ ಇದರ ಲಕ್ಷಣಗಳಾಗಿವೆ. ಆದರೆ ಜನ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಒಳಿತು. ಸೌಮ್ಯವಾಗಿದ್ದರೂ ಇದರ ಬಗ್ಗೆ ಜನ ಕಾಳಜಿ ವಹಿಸಬೇಕು. ಮಾಸ್ಕ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

2 × one =