ಝಳಕಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ!
ಯುವ ಭಾರತ ಸುದ್ದಿ ಝಳಕಿ : ಗ್ರಾಮೀಣ ಪ್ರದೇಶದ ಬಡ ಜನರಿಗೆ ಬಿ ಎಲ್ ಡಿ ಇ ಆಸ್ಪತ್ರೆ ಸಂಜೀವಿನಿಯಾಗಿದೆ, ಅಲ್ಲದೇ ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆಯು ಅಪಾರ ಕಾಳಜಿ ಹೊಂದಿದ ಸಂಸ್ಥೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು.
ಝಳಕಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ ಆವರಣದಲ್ಲಿ ನಡೆದ ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲೆಯ ಎಲ್ಲಾ ಕಡೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡ ಜನರ ಮನೆ ಮನೆ ಬಾಗಲಿಗೆ ವೈದ್ಯರ ಸೇವೆಯನ್ನು ಒದಗಿಸುತ್ತಿದ್ದಾರೆ ಎಂದು ಹೇಳಿದರು.
ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರ ತಪಾಸಣೆಯಲ್ಲಿ ಬಹು ಜನರ ಸಮಸ್ಯೆಯಾಗಿತ್ತು. ಅದಕ್ಕೆ ಕಾರಣ ಇಂದಿನ ಆಧುನಿಕ ಯುಗದ ಜೀವನ ಶೈಲಿಯೇ ಕಾರಣ, ಪ್ರತಿಯೊಬ್ಬರ ಮನೆಯಲ್ಲಿ 4 ರಿಂದ 5 ಮೊಬೈಲ್ ಪೋನ್ ಇವೆ. ಆದ್ದರಿಂದ ಅವುಗಳ ಬಳಕೆಯಿಂದ ಕಣ್ಣಿಗೆ ಹೆಚ್ಚು ಹಾನಿಯಾಗುತ್ತಿದೆ ಎಂದು ತಿಳಿದು ಬರುತ್ತದೆ, ಆದಕಾರಣ ಪಾಲಕರು ಮಕ್ಕಳಿಗೆ ಮೊಬೈಲ್ ಬಳಕೆ ಸೀಮಿತಗೊಳಿಸಬೇಕು ಎಂದರು.
ಈ ಶಿಬಿರದಲ್ಲಿ ಸುಮಾರು 900 ಜನರ ಮತ್ತು ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಹಿರಿಯರಿಗೆ ಕಿರಿಯರಿಗೆ, ಮಹಿಳೆಯರು ಹಾಗೂ ಅಂಗವಿಕಲರು, ವೃದ್ಧರು ಸೇರಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡರು.
ಡಾ. ಶ್ರೀಧರ ಪಾಟೀಲ, ಡಾ. ಪ್ರಸಾದ ಸುನಾಥನ್, ಡಾ.ಶಿರಿಶ ಕನ್ನೂರ, ಡಾ. ಆನಂದ ಸಜ್ಜನ, ಡಾ. ಅಶ್ವಿನಿ, ಡಾ. ಸಾಹೇಬಗೌಡ ಪಾಟೀಲ,ರಾಕೇಶ ಬಾಳಂಕರ, ಏಕನಾಥ ಜಾಧವ, ಶ್ರೀಮಂತ ಕಾಪಸೆ, ನಾರಾಯಣ ಜಾಗೀರದಾರ, ಅಣ್ಣಪ್ಪ ತಳವಾರ, ವಲ್ಲಭ ಕಬಾಡೆ, ಸಿ. ಕೆ. ಹೊಸಮನಿ, ಪಿ.ಜಿ. ಗಿರಡಿಮಠ, ಸಿ.ಕೆ.ಯಳಸಂಗಿ, ಎಸ್ ಬಿ ನಾಗಣೆ, ಎಮ್ ಡಿ ಬಿರಾದಾರ, ಎಮ್ ಬಿ ಷಾಹಾ, ಡಾ. ರಾಜೇಶ ಹೊನ್ನುಟಗಿ, ಡಾ. ಅರವಿಂದ ಪಾಟೀಲ, ಡ. ರಾಗವೇಂದ್ರ ಕುಲಕರ್ಣಿ, ಶಂಕರಗೌಡ ಬಿರಾದಾರ, ಬಸಗೊಂಡ ಪಾಟೀಲ, ಶ್ರೀಶೈಲ ಬಿರಾದಾರ, ರವಿ ಹೂಗಾರ, ಸಂಜಯ ಬಂಗಾರತಳ, ರಾಗು ಕೆಂಗಾರ, ಪವನ ಪಾಟೀಲ ಇದ್ದರು.