Breaking News

ಕೊನೆಗೂ ಬಹು ದಿನಗಳ ಬೇಡಿಕೆ ಈಡೇರಿಕೆ!!

Spread the love

ಕೊನೆಗೂ ಬಹು ದಿನಗಳ ಬೇಡಿಕೆ ಈಡೇರಿಕೆ!!

 

ಯುವ ಭಾರತ ಸುದ್ದಿ ಇಂಡಿ: ಬಹುದಿನಗಳ ಬೇಡಿಕೆಯಾದ ಹಿರೇ ಇಂಡಿ ನಗರದ ಕೆರೆಗೆ ತಿಂಡಗುಂದಿ ಬ್ರಾಂಚ್ ಕ್ಯಾನಲ್ ದಿಂದ ನೀರು ತುಂಬಿದ ಕಾರಣ ಇಂದು ಜೆ.ಡಿ.ಎಸ್ ಮುಖಂಡ ಬಿ.ಡಿ. ಪಾಟೀಲ ಹಾಗೂ ನೂರಾರು ಕಾರ್ಯಕರ್ತರು ಬಾಗಿನ ಅರ್ಪಿಸಿದರು.

ಇಂಡಿ ತಾಲೂಕು ನೀರಾವರಿಗಾಗಿ ಸಾಕಷ್ಟು ಹೋರಾಟ ಮಾಡಿರುವೆ. ರಾಷ್ಟ್ರೀಯ ಹೆದ್ದಾರಿ ಮೇಲೆ ,ರೈಲು ತಡೆ ರಕ್ತದಿಂದ ಸರಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದೇನೆ. ಒಮ್ಮೆ ಪೊಲೀಸರು ನನ್ನ ಮೇಲೆ ಕೇಸು ಹಾಕಲು ಬಂದಾಗ ರೈತರಿಗಾಗಿ ಗುಂಡು ಹಾಕಿದರೂ ಪರವಾಗಿಲ್ಲ. ಸ್ಥಳದಲ್ಲಿಯೇ ಹೋರಾಟ ಮಾಡುವುದಾಗಿ ತಿಳಿಸಿದೆ. ರೈತರ ಪರ ಹೋರಾಟವಾಗಿರುವುದರಿಂದ ಯಾರೂ ಏನೂ ಮಾಡಲಾಗಲಿಲ್ಲ. ಸುಮಾರು 46 ದಿನಗಳ ಹೋರಾಟದ ಪ್ರತಿಫಲ ನಮ್ಮ ವರಿಷ್ಠರು ಸ್ಥಳಕ್ಕೆ ಬಂದು ವಿಧಾನ ಸಭೆಯಲ್ಲಿ ನೀರಾವರಿ ಕುರಿತು ಗಮನ ಸೆಳೆದ ಪ್ರಯುಕ್ತ ನೀರಾವರಿಯಾಗಿದೆ. ಈ ಭಾಗದ ನೀರಾವರಿಗೆ ಅಂದಿನ ಪ್ರಧಾನ ಮಂತ್ರಿ, ಮಣ್ಣಿನ ಮಗ ದೇವೆಗೌಡರೆ ಪ್ರಮುಖ ಕಾರಣ. ಹೀಗಾಗಿ ಜೆಡಿಎಸ್ ಮೇಲೆ ನಿಮ್ಮೆಲ್ಲರ ಆರ್ಶೀವಾದ ಇರಲಿ ಎಂದರು.
ಅಯೂಬ ನಾಟೀಕಾರ, ಶ್ರೀಶೈಲಗೌಡ ಬಿರಾದಾರ, ಬಾಳು ರಾಠೋಡ ಮಾತನಾಡಿದರು.
ಸಿದ್ದು ಡಂಗಾ, ಮಹಿಬೂಬ ಬೇನೂರ, ಶ್ರೀಶೈಲಗೌಡ ಪಾಟೀಲ, ನಾನಾಗೌಡ ಪಾಟೀಲ, ಶೀಮಂತ ತಾಂಬೆ, ಮಾಳಪ್ಪ ಪೂಜಾರಿ, ಹಣಮಂತ ಅಗಸರ, ಭೀಮು ಹೂಗಾರ, ಧರ್ಮಣ್ಣಾ ತಾಂಬೆ, ನೀಯಾಝ ಅಗರಖೇಡ, ಪೀರಪ್ಪ ಹೂಟಗಾರ, ತಮ್ಮನಗೌಡ ಬಿರಾದಾರ, ಮಲ್ಲು ಬಳಗಾರಿ, ಫಜಲ ಮುಲ್ಲಾ, ಶಾಂತಯ್ಯಾ ಪತ್ರಿಮಠ ಸೇರಿದಂತೆ ಅನೇಕರಿದ್ದರು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

one × 5 =