Breaking News

ವಿಸ್ಕ ಅಗ್ರೋ ಕೃಷಿ ರತ್ನ ಪ್ರಶಸ್ತಿ ಪಡೆದ ಮಲಘಾಣ ಗ್ರಾಮದ ರೈತ:ಲಕ್ಷ್ಮಣ ನಿಂಗನೂರು!

Spread the love

ವಿಸ್ಕ ಅಗ್ರೋ ಕೃಷಿ ರತ್ನ ಪ್ರಶಸ್ತಿ ಪಡೆದ ಮಲಘಾಣ ಗ್ರಾಮದ ರೈತ:ಲಕ್ಷ್ಮಣ ನಿಂಗನೂರು!

ಯುವ ಭಾರತ ಸುದ್ದಿ ಕೊಲ್ಹಾರ: ನಿರ್ಜನವಾಗಿದ್ದ, ಮಡ್ಡಿ ಭೂಮಿ ಹೊಂದಿದ್ದ ಈ ಪ್ರದೇಶ ಎಂ.ಬಿ.ಪಾಟೀಲರವರ ಪ್ರಯತ್ನದ ಫಲವಾಗಿ ನೀರಾವರಿಗೆ ಒಳಪಟ್ಟು ಇಂದು ಬಂಗಾರವನ್ನು ಬೆಳೆಯುವ ಭೂಮಿಯಾಗಿದೆ.ಭೂಮಿಯ ದರವೂ ಹೆಚ್ಚಿದೆ ಎಂದು ಡಾ.ಮಹಾಂತೇಶ ಬಿರಾದಾರ ಹೇಳಿದರು.
ಕೊಲ್ಹಾರ ತಾಲೂಕಿನ ಮಲಘಾಣದ ಲಕ್ಷಣ ಶಿವಪ್ಪ ನಿಂಗನೂರ ಅವರ ತೋಟದಲ್ಲಿ ವಿಸ್ಕ ಅಗ್ರೋ ಕಂಪನಿದವರು ಏರ್ಪಡಿಸಿದ ಈರುಳ್ಳಿ ಬೆಳೆಯ ಕಾರ್ಯಕ್ರಮದಲ್ಲಿ
ಅನಿತಾ ಎಂಬ ಈರುಳ್ಳಿ ಬೀಜವನ್ನು ಇಳುವರಿಯನ್ನು ಮಾಡಿದ್ದಕ್ಕೆ ಹಾಗೂ ಉತ್ತಮ ಬೆಳೆಯನ್ನು ಬೆಳೆದಿದ್ದಕ್ಕಾಗಿ ವಿಸ್ಕ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ವತಿಯಿಂದ ವಿಸ್ಕ ಅಗ್ರೋ ಕೃಷಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ, ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಮಲಘಾಣದಿಂದ ರೋಣಿಹಾಳ ರಸ್ತೆ ಸಂಪೂರ್ಣ ಮಡ್ಡಿ ಪ್ರದೇಶವಾಗಿದ್ದು, ಇಡೀ ಭೂಮಿ ಬರಡು ಆಗಿತ್ತು. ಇಂದು ಮುಳವಾಡ ಏತನೀರಾವರಿ, ಮಲಘಾಣ ಪಶ್ಚಿಮ ಕಾಲುವೆ, ಬಬಲೇಶ್ವರ ಶಾಖಾ ಕಾಲುವೆಗಳಿಂದ ಇಡೀ ಪ್ರದೇಶ ಎಲ್ಲಲ್ಲೂ ಹಸಿರುಮಯವಾಗಿ, ನಂದನವನವಾಗಿದೆ. ರೈತರು ಕಬ್ಬು, ಈರುಳ್ಳಿ, ದ್ರಾಕ್ಷಿ, ಬಾಳೆ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ.
ಉತ್ತಮ ದರ ದೊರೆತರೆ ನಮ್ಮರೈತರ ಬಾಳು ನಿಜವಾಗಿಯೂ ಬಂಗಾರವಾಗುತ್ತದೆ ಎಂದರು. ಕೇವಲ ಆರು ಎಕರೆ ಭೂಮಿ ಹೊಂದಿದ್ದ ಕಲಕುರ್ಗಿ ಗ್ರಾಮದ ರೈತ ಬಸಪ್ಪ ಆಸಂಗಿಯವರು ಈರುಳ್ಳಿ ಬೆಳೆಯನ್ನು ಬೆಳೆದೆ ಇವತ್ತು ೩೬ ಎಕರೆ ಜಮೀನಿನ ಒಡೆಯರಾಗಿದ್ದಾರೆ.ಅಲ್ಲದೇ,
ಈರುಳ್ಳಿ ನೆನಪಿಗಾಗಿ ಬಂಗಾರದ ಈರುಳ್ಳಿಯನ್ನು ಮಾಡಿಸಿ ಪೂಜಿಸುತ್ತಿದ್ದಾರೆ.ನಮ್ಮಯುವ ರೈತರಿಗೆ ಇವರು ಮಾದರಿ.ನಮ್ಮಗ್ರಾಮದ ಮಹಾಂತೇಶ ಶಿರೂರ ಇಡೀ ದೇಶದ ಕೃಷಿ ಇಲಾಖೆಯ ನೀತಿ, ನಿರ್ವಹಣೆಗಳನ್ನು ರೂಪಿಸುವ ಮಹತ್ವದ ಸಂಸ್ಥೆಯಾದ ಮ್ಯಾನೇಜರ್ ಹೈದ್ರಾಬಾದ್ ನಿರ್ದೇಶಕರಾಗಿರುವುದು ಈ ಭಾಗಕ್ಕೆ ಹೆಮ್ಮೆಯಾಗಿದೆ ಎಂದು ಮಾತನಾಡಿದರು

ಗ್ರಾಮದ ಮುಖಂಡ ಎಸ್. ಎಸ್.ಗರಸಂಗಿ ಮಾತನಾಡಿ, ಇಡೀ ಜಿಲ್ಲೆಗೆ ನೀರಾವರಿಗೆ ಒಳಪಡಿಸಿ, ನಮ್ಮಬದುಕನ್ನು ಸಮೃದ್ಧಗೊಳಿಸಿರುವ ಎಂ.ಬಿ.ಪಾಟೀಲರವರನ್ನು ಅನೇಕ ಮನೆಗಳಲ್ಲಿ ಪೂಜಿಸುತ್ತಿದ್ದಾರೆ ಎಂದರು.ಬಸವನಬಾಗೇವಾಡಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಈರುಳ್ಳಿ ಬೆಳೆಗಾರರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಕೃಷಿ ಮಹಾವಿದ್ಯಾಲಯದ ಡಾ.ರವೀಂದ್ರ ಬೆಳ್ಳಿ, ಡಾ. ಕುಶಾಲ, ಈರುಳ್ಳಿ ಹಾಗೂ ವಿವಿಧ ತರಕಾರಿ ತಳಿಗಳ ಮಾಹಿತಿ ನೀಡಿದರು.
ವಿಸ್ಕ ಅಗ್ರೋ ಎಂ.ಡಿ ಶಾಂತವೀರ್ ರೊಟ್ಟಿ ಸಾಮಾನ್ಯ ರೈತನ ಮಗನಾಗಿ ರೈತರಿಗೆ ನೆರವಾಗುವ ಬೀಜದ ತಯಾರಿಕಾ ಕಂಪನಿ ಆರಂಭಿಸಿದ ಮೊದಲ ಕನ್ನಡಿಗ ಎಂದರು.
ಈ ವೇಳೆಯಲ್ಲಿ ಗ್ರಾಮ್. ಪಂ ಅಧ್ಯಕ್ಷ ಸುರೇಶ ಕೊಠಾರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಗಂಗಾಧರ ಚೌಧರಿ, ಅಶೋಕ ನಿಂಗನೂರ, ರಮೇಶ ನಿಂಗನೂರ, ಚಂದ್ರಶೇಖರ ಮಲಘಾಣ, ಬಸವರಾಜ ಪಾಟೀಲ ಮಟ್ಯಾಳ, ಸಂಗಮೇಶ ಉಳ್ಳಾಗಡ್ಡಿ, ಮುತ್ತು ಬಗಲಿ, ಪ್ರಸಾದ ಅಂಬಲಿ, ಸದಾನಂದ ನಿಂಗನೂರ, ಶಂಕರ ಸಿದರೆಡ್ಡಿ, ಸುತ್ತಮುತ್ತಲಿನ ರೈತರು ಮತ್ತಿತರರು ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

11 + 10 =